ಕೂಡಿಗೆ, ಸೆ. ೨೪: ಕೂಡಿಗೆ-ಕುಶಾಲನಗರ ವ್ಯಾಪ್ತಿಯಲ್ಲಿ ನಿಯಮ ಬಾಹಿರವಾಗಿ ಟಿಂಬರ್ ಸಾಗಿಸುತ್ತಿದ್ದ ನಾಲ್ಕು ಲಾರಿಗಳಿಗೆ ಒಟ್ಟು ರೂ. ೨.೮೦ ಲಕ್ಷ ದಂಡ ವಿಧಿಸಲಾಗಿದೆ.

ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಟಿಂಬರ್‌ಗಳನ್ನು ಲಾರಿಗಳಲ್ಲಿ ತುಂಬಲಾಗಿತ್ತು. ಅಲ್ಲದೆ, ಟಿಂಬರ್‌ಗಳು ಲಾರಿಯ ಬಾಡಿಯಿಂದ ಸಂಪೂರ್ಣ ಹೊರಕ್ಕೆ ಚಾಚಿಕೊಂಡಿರುವ ರೀತಿಯಲ್ಲಿ ಸಾಗಿಸಲಾಗುತ್ತಿದ್ದು, ಅಸುರಕ್ಷಿತ ಸಾಗಾಟ ಕಂಡುಬAದ ಹಿನ್ನೆಲೆಯಲ್ಲಿ ಕುಶಾಲನಗರ ಸಂಚಾರಿ ಪೊಲೀಸರು ವಾಹನಗಳನ್ನು ವಶಕ್ಕೆ ಪಡೆದಿದ್ದರು. ಕುಶಾಲನಗರ ಸಂಚಾರಿ ಪೊಲೀಸ್ ಠಾu

ೆಯ ವಶದಲ್ಲಿದ್ದ ನಾಲ್ಕು ಟಿಂಬರ್ ಲಾರಿಗಳನ್ನು ಪ್ರಾದೇಶಿಕ ಸಾರಿಗೆ ಇಲಾಖೆ (ಆರ್‌ಟಿಓ) ಅಧಿಕಾರಿಗಳು ಪರಿಶೀಲಿಸಿದರು. ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಆರ್‌ಟಿಓ ಕಾಯ್ದೆಯಡಿ ನಾಲ್ಕು ಲಾರಿಗಳ ಮಾಲೀಕರಿಗೆ ಒಟ್ಟು ೨.೮೦ ಲಕ್ಷ ದಂಡ ವಿಧಿಸಲಾಗಿದೆ.