ಗೋಣಿಕೊಪ್ಪಲು, ಸೆ. ೨೪: ಹಾತೂರಿನ ನಂ. ೨೭೮೪ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ರೂ. ೫೫.೬೭ ಲಕ್ಷ ಲಾಭಾಂಶ ಹೊಂದಿದ್ದು, ಸಂಘದ ಸದಸ್ಯರಿಗೆ ನಾನಾ ರೀತಿಯ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸಂಘದ ಪ್ರಗತಿಯ ಬಗ್ಗೆ ಅಪೆಕ್ಸ್ ಬ್ಯಾಂಕ್ ಸೇರಿದಂತೆ ಜಿಲ್ಲಾಮಟ್ಟದ ಪ್ರಶಸ್ತಿಗಳು ಲಭಿಸಿವೆ. ವರ್ಷದಿಂದ ವರ್ಷಕ್ಕೆ ಸಂಘವೂ ತನ್ನ ಲಾಭಾಂಶವನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂದು ಸಂಘದ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ತಿಳಿಸಿದರು.
ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ೨೦೨೫-೨೬ನೇ ಸಾಲಿನ ೪೯ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರು, ಅಪೆಕ್ಸ್ ಬ್ಯಾಂಕಿನ ನಿರ್ದೇಶಕರು, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಕೊಡಂದೇರ ಬಾಂಡ್ ಗಣಪತಿ ಮಾತನಾಡಿ, ಕಳೆದ ಸಾಲಿನ ವ್ಯವಹಾರದ ಅಂಕಿ ಅಂಶಗಳೊAದಿಗೆ ಹೋಲಿಕೆ ಮಾಡಿದಾಗ ಸಂಘದ ಸಾಲ ವಿತರಣೆಯಲ್ಲಿ, ಠೇವಣಿ ಸಂಗ್ರಹಣೆಯಲ್ಲಿ, ವಾರ್ಷಿಕ ವಹಿವಾಟುವಿನಲ್ಲಿ, ದುಡಿಯುವ ಭಂಡವಾಳ ಮತ್ತು ಲಾಭದ ಪ್ರಮಾಣದಲ್ಲಿ ಏರಿಕೆಯಾಗಿದೆ.
ಅಪೆಕ್ಸ್ ಬ್ಯಾಂಕಿನಿAದ ಉತ್ತಮ ಕಾರ್ಯ ನಿರ್ವಹಿಸಿದ ಸಹಕಾರ ಸಂಘಕ್ಕೆ ನೀಡುವ ಬಹುಮಾನದಲ್ಲಿ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನ ೨೦೨೩-೨೪ರಲ್ಲಿ ದ್ವಿತೀಯ ಸ್ಥಾನ ಕೆಡಿಸಿಸಿ ಬ್ಯಾಂಕ್ನವರು ಉತ್ತಮ ಕಾರ್ಯ ನಿರ್ವಹಿಸಿದ ಸಹಕಾರ ಸಂಘಕ್ಕೆ ನೀಡುವ ಬಹುಮಾನದಲ್ಲಿ ಕಳೆದ ೫ ವರ್ಷದಿಂದ ಪ್ರಥಮ ಬಹುಮಾನಕ್ಕೆ ಭಾಜನವಾಗುತ್ತಿದೆ. ಸಂಘದ ಆಡಳಿತ ಮಂಡಳಿ ಸಿಇಓ, ಸಿಬ್ಬಂದಿಗಳ ಕಾರ್ಯಕ್ಷಮತೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಸಂಘದ ಸದಸ್ಯರು ಠೇವಣಾತಿಗಳನ್ನು ನಮ್ಮ ಸಂಘದಲ್ಲಿಯೆ ಇರಿಸಿ ಹೆಚ್ಚಿನ ಬಡ್ಡಿಯನ್ನು ಪಡೆಯುವಂತಾಗಬೇಕು. ಸದಸ್ಯರುಗಳಿಗೆ ಬೇಕಾದ ಕೆಸಿಸಿ ಸಾಲ, ಮಧ್ಯಮಾವಧಿ ಸಾಲ, ದೀರ್ಘಾವಧಿ ಸಾಲ, ಆಭರಣ ಸಾಲ, ವಾಹನ ಸಾಲ, ಸ್ವಸಹಾಯ ಸಂಘ ಸಾಲ, ದಾಸ್ತಾನು ಮುಂಗಡ ಸಾಲ, ಗೃಹ ವಸ್ತುಗಳ ಸಾಲ, ಪಶುಸಂಗೋಪನ ಸಾಲ, ಗೃಹ ನಿರ್ಮಾಣ ಸಾಲ, ಮದುವೆ ಸಾಲ ಸೇರಿದಂತೆ ಎಲ್ಲಾ ರೀತಿಯ ಸಾಲ ಸೌಲಭ್ಯಗಳನ್ನು ಸಂಘದ ಸದಸ್ಯರುಗಳಿಗೆ ಸಕಾಲದಲ್ಲಿ ನೀಡಲಾಗುತ್ತಿದೆ. ಇದರ ಪ್ರಯೋಜನ ಪ್ರತಿ ಸದಸ್ಯರು ಹೊಂದಿಕೊಳ್ಳುವAತೆ ಕರೆ ನೀಡಿದರು.
ಸಂಘದಲ್ಲಿ ಸಾಲ ಪಡೆಯುವ ಸದಸ್ಯರ ಸಂಖ್ಯೆ ಕಡಿಮೆಯಾಗುತ್ತಿದೆ. ಸಂಘದ ಕಾರ್ಯ ವ್ಯಾಪ್ತಿಯಲ್ಲಿರುವ ಸದಸ್ಯರ ಸ್ವಾಧೀನದಲ್ಲಿ ಜಾಗ ಇದ್ದರೂ ಆರ್ಟಿಸಿ ಸ್ವಂತ ಹೆಸರಿನಲ್ಲಿ ಇರುವುದಿಲ್ಲ. ಆರ್ಟಿಸಿ ಸಮಸ್ಯೆ ಇರುವ ಸದಸ್ಯರು ಪೌತಿಖಾತೆ ಹೊಂದಿರುವ ಸದಸ್ಯರು ಕಂದಾಯ ಇಲಾಖೆಯೊಂದಿಗೆ ವ್ಯವಹರಿಸಿ ಆರ್ಟಿಸಿಯನ್ನು ತಮ್ಮ ಸ್ವಂತ ಹೆಸರಿಗೆ ಮಾಡಿಸಿಕೊಂಡು ಸರ್ಕಾರದಿಂದ ಶೂನ್ಯ ಬಡ್ಡಿದರದಲ್ಲಿ ರೂ. ೫ ಲಕ್ಷದವರೆಗೆ ದೊರೆಯುವ ಕೆಸಿಸಿ ಸಾಲ ಮತ್ತು ಇತರ ಸಾಲ ಸೌಲಭ್ಯಗಳನ್ನು ಪಡೆಯುವುದರ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕೆAದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ೭ನೇ ತರಗತಿ, ೧೦ನೇ ತರಗತಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಸನ್ಮಾನಿಸಿ ಗೌರವಿಸುವ ಮೂಲಕ ಪ್ರೋತ್ಸಾಹಕ ಬಹುಮಾನವನ್ನು ನೀಡಲಾಯಿತು ಸಭೆಯಲ್ಲಿ ಹಿರಿಯ ಸಹಕಾರಿಗಳು ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಕಳೆದ ಮಹಾಸಭೆಯ ನಡಾವಳಿ ಆಡಳಿತ ಮಂಡಳಿ ಅಂಗೀಕಾರ, ಕಳೆದ ಸಾಲಿನ ಆಡಿಟ್ ವರದಿ ಅಂಗೀಕಾರ. ಮುಂದಿನ ಸಾಲಿನ ಅಂದಾಜು ಬಜೆಟ್ ಮಂಜೂರು. ಮುಂದಿನ ಸಾಲಿಗೆ ಆಡಿಟರ್ ಆಯ್ಕೆಗೆ ಮಹಾಸಭೆಯು ಒಕ್ಕೋರಲಿನ ಅನುಮೋದನೆ ನೀಡಿತು. ಹಾತೂರು, ಕೊಳತ್ತೋಡು, ಬೈಗೋಡು, ಕುಂದ, ಈಚೂರು ಹಾಗೂ ಕಳತ್ಮಾಡು ಗ್ರಾಮದ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಂಘವು ೧೦೧೬ ಸದಸ್ಯರನ್ನು ಒಳಗೊಂಡಿದೆ.
ವೇದಿಕೆಯಲ್ಲಿ ಕುಂದ, ಈಚೂರು, ಸಹಕಾರ, ದವಸ ಭಂಡಾರದ ಅಧ್ಯಕ್ಷರು, ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಗುಮ್ಮಟ್ಟಿರ ಕಿಲನ್ ಗಣಪತಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಎಸ್.ಕೆ. ಮಂದಣ್ಣ, ಹೆಚ್.ಡಿ. ಶ್ರೀನಿವಾಸ್, ಕೆ.ಬಿ. ಉತ್ತಪ್ಪ, ಎಂ.ಟಿ. ಅಯ್ಯಪ್ಪ, ಪಿ.ಡಿ. ದಿನೇಶ್, ಕೊಲ್ಲಿರ ಗೋಪಿ ಚಿಣ್ಣಪ್ಪ, ಟಿ.ಎಸ್. ಗಣಪತಿ, ಬಿ.ಪಿ. ದಿನೇಶ್, ಚೇಂದAಡ. ಜೆ. ರೂಪ, ಪಟ್ರಂಗಡ ಎಸ್. ಗಂಗಮ್ಮ, ಸಿಇಓ ಎಂ.ಎಸ್. ಪ್ರತಿಮ ಉಪಸ್ಥಿತರಿದ್ದರು.
ಆರಂಭದಲ್ಲಿ ಶಾಲಾ ವಿದ್ಯಾರ್ಥಿ ಯೋಶಿ ನೀಲಮ್ಮ ಪ್ರಾರ್ಥಿಸಿ, ನಿರ್ದೇಶಕ ಕೊಲ್ಲಿರ ಗೋಪಿ ಚಿಣ್ಣಪ್ಪ ಸ್ವಾಗತಿಸಿ, ಸಂಘದ ಪ್ರಬಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್. ಪ್ರತಿಮಾ ನಿರೂಪಿಸಿ, ನಿರ್ದೇಶಕ ಹೆಚ್.ಡಿ. ಶ್ರೀನಿವಾಸ್ ವಂದಿಸಿದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರಿಗಳು ಭಾಗವಹಿಸಿದ್ದರು.