ಪೊನ್ನಂಪೇಟೆ, ಸೆ. ೨೪: ಸಾಯಿ ಶಂಕರ ವಿದ್ಯಾಸಂಸ್ಥೆಯ ಭಜನಾ ಮಂದಿರದಲ್ಲಿ ಶ್ರೀ ಸದ್ಗುರು ಸಾಯಿ ಶಂಕರ ಸ್ವಾಮಿಯವರ ೬೦ನೇ ಸಾಕ್ಷಾತ್ಕಾರ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಆರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಮೆರುಗು ನೀಡಿದರು.
ಭಜನೆ ಹಾಗೂ ಪ್ರಾರ್ಥನೆಯೊಂದಿಗೆ ಆರಂಭಗೊAಡ ಕಾರ್ಯಕ್ರಮದಲ್ಲಿ ಶ್ರೀ ಸದ್ಗುರು ಸಾಯಿ ಶಂಕರ ಸ್ವಾಮಿಯವರ ಆಧ್ಯಾತ್ಮಿಕ ಚಿಂತನೆಗಳು, ಆದರ್ಶಗಳು ಹಾಗೂ ಸಮಾಜಕ್ಕೆ ನೀಡಿದ ಮಾರ್ಗದರ್ಶನವನ್ನು ಸ್ಮರಿಸಲಾಯಿತು. ಭಜನಾ ಮಂದಿರವು ಭಕ್ತಿಗೀತೆಗಳ ಗಾಯನದಿಂದ ಭಕ್ತಿಮಯ ವಾತಾವರಣದಿಂದ ಕಂಗೊಳಿಸಿತು.
ಈ ಸಂದರ್ಭದಲ್ಲಿ ಸಾಯಿ ಶಂಕರ ವಿದ್ಯಾಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು, ಟ್ರಸ್ಟಿಗಳು, ಶ್ರೀ ಸದ್ಗುರು ಸಾಯಿ ಶಂಕರ ಸ್ವಾಮಿಯವರ ಭಕ್ತಾದಿಗಳು, ಶಿಕ್ಷಕರು ಹಾಗೂ ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.
ದಿನಾಚರಣೆಯ ಅಂಗವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಅನ್ನದಾನವನ್ನು ಏರ್ಪಡಿಸಲಾಗಿತ್ತು. ಭಕ್ತಿಭಾವ ಹಾಗೂ ಸೇವಾ ಮನೋಭಾವದಿಂದ ನಡೆದ ಅನ್ನದಾನ ಕಾರ್ಯಕ್ರಮವು ದಿನಾಚರಣೆಯ ವಿಶೇಷ ಆಕರ್ಷಣೆಯಾಗಿತ್ತು.
ಶ್ರೀ ಸದ್ಗುರು ಸಾಯಿ ಶಂಕರ ಸ್ವಾಮಿಯವರ ಆದರ್ಶಗಳು ಹಾಗೂ ಅಧ್ಯಾತ್ಮಿಕ ಸಂದೇಶಗಳನ್ನು ಸ್ಮರಿಸುತ್ತಾ ನಡೆದ ಈ ದಿನಾಚರಣೆಯು ಎಲ್ಲರ ಮನದಲ್ಲಿ ಭಕ್ತಿ, ಶಾಂತಿ ಮತ್ತು ಸಕಾರಾತ್ಮಕ ಚಿಂತನೆಯ ಭಾವವನ್ನು ಮೂಡಿಸಿ, ಅರ್ಥಪೂರ್ಣವಾಗಿ ಸಂಪನ್ನಗೊAಡಿತು.