ಮಡಿಕೇರಿ, ಸೆ. ೨೩: ಈಜಿಫ್ಟ್ನ ಕೈರೋದಲ್ಲಿ ನಡೆಯಲಿರುವ ವರ್ಲ್ಡ್ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗೆ ಬೊಪ್ಪಂಡ ದಿಯಾ ಭೀಮಯ್ಯ ಆಯ್ಕೆಯಾಗಿದ್ದಾರೆ.
ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್ (ಇನ್.ಸಿ.ಇ) ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತಾ. ೧೮ ರಿಂದ ೨೧ ರವರೆಗೆ ನಡೆಸಲಾದ ಬಿ.ಡಬ್ಲ್ಯೂ.ಎಫ್ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್ ಆಯ್ಕೆ ಪ್ರಕ್ರಿಯೆಯಲ್ಲಿ ಕೊಡಗಿನ ಬೊಪ್ಪಂಡ ದಿಯಾ ಭೀಮಯ್ಯ ಹಾಗೂ ಹರಿಯಾಣದ ಬಾರುಣಿ ಪರುಸ್ವಾಲ್ ಜೊತೆಗೂಡಿ ಅತ್ಯುತ್ತಮ ಪ್ರದರ್ಶನ ನೀಡಿ ಲಭ್ಯವಿದ್ದ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಜೂನಿಯರ್ ಡಬಲ್ಸ್ನಲ್ಲಿ ಭಾರತದ ಅಗ್ರ ಶ್ರೇಯಾಂಕಿತೆ ದಿಯಾ ಈಜಿಪ್ಟ್ನ ಕೈರೋದಲ್ಲಿ ಅಕ್ಟೋಬರ್ ೫ ರಿಂದ ೧೭ ರವರೆಗೆ ನಡೆಯುವ ವರ್ಲ್ಡ್ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ೨೦೨೬ ರ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈ ವರ್ಷ ಜಪಾನ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್, ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಡಚ್ ಮತ್ತು ಜರ್ಮನಿನ ಜೂನಿಯರ್ ಇಂಟರ್ ನ್ಯಾಷನಲ್ ಹಾಗೂ ಕೈರೋದ ಪ್ರತಿಷ್ಠಿತ ವರ್ಲ್ಡ್ ಜೂನಿಯರ್‌ಗೆ ಆಯ್ಕೆಯಾದ ಇವರು ಭಾರತದ ಬ್ಯಾಡ್ಮಿಂಟನ್ ಸಂಸ್ಥೆಯಾದ ಎನ್.ಸಿ.ಇ ಗುವಾಹಟಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ದಿಯಾ ಮಡಿಕೇರಿಯ ನಿವಾಸಿ ಬೊಪ್ಪಂಡ ಭೀಮಯ್ಯ ಮತ್ತು ಕುಸುಮ ದಂಪತಿ ಪುತ್ರಿ.