ಒಂದು ಕಾಲದಲ್ಲಿ ಅಂಗಡಿಯ ಮೇಜಿನ ಮೇಲೆ ಕ್ಯಾಷ್ ಬಾಕ್ಸ್ ಇರುತ್ತಿತ್ತು. ಅಂಗಡಿಗೆ ಹೋಗುವಾಗ ಜೇಬಿನಲ್ಲಿ ಹಣ ಇರಲೇಬೇಕಿತ್ತು. ನಂತರ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಬಂದವು. ಮೊಬೈಲ್ ಬ್ಯಾಂಕಿAಗ್ ಬಂತು. ಕಳೆದ ಕೆಲವು ವರ್ಷಗಳಲ್ಲಿ ಈ ಎಲ್ಲವನ್ನೂ ಮೀರಿ ಮೊಬೈಲ್‌ನಲ್ಲಿರುವ UPI ಕಿಖ ಕೋಡ್ ಜನರ ಬದುಕಿನ ಭಾಗವಾಗಿದೆ. ಗ್ರಾಹಕ ಮೊಬೈಲ್ ತೆಗೆದು ಕಿಖ ಕೋಡ್ ಸ್ಕಾö್ಯನ್ ಮಾಡುತ್ತಾನೆ. ಹಣ ಕ್ಷಣಾರ್ಧದಲ್ಲಿ ಪಾವತಿಯಾಗುತ್ತದೆ. ರಸೀದಿ ಬೇಕಾದರೂ, ಬೇಕಿಲ್ಲದಿದ್ದರೂ ವ್ಯವಹಾರ ಮುಗಿದು ಹೋಗುತ್ತದೆ. ಭಾರತದ ಡಿಜಿಟಲ್ ಪಾವತಿ ಕ್ರಾಂತಿಯ ದೊಡ್ಡ ಶಕ್ತಿ ಇದೇ ಸರಳತೆ. ಚಹಾಕ್ಕೆ ₹ ೨೦, ತರಕಾರಿಗೆ ₹ ೧೦೦, ಬಟ್ಟೆಗೆ ₹ ೨,೫೦೦, ಆಸ್ಪತ್ರೆಯ ಬಿಲ್ಗೆ ₹೨೦,೦೦೦ -ಮೊಬೈಲ್ ತೆಗೆದು ಕಿಖ ಕೋಡ್ ಸ್ಕಾö್ಯನ್ ಮಾಡಿದರೆ ಸಾಕು. ಹಣ ಕೈ ಬದಲಾಯಿಸುವ ಅಗತ್ಯವೇ ಇಲ್ಲ. ಚಹಾದ ಅಂಗಡಿಯಿAದ ದೊಡ್ಡ ಶೋರೂಂವರೆಗೆ, ಆಟೋದಿಂದ ಆಸ್ಪತ್ರೆಯ ವರೆಗೆ ‘UPI ಇದೆಯಾ?’ ಎಂಬುದು ಸಹಜ ಪ್ರಶ್ನೆಯಾಗಿದೆ. ಹೀಗೆ ಬಹುತೇಕ ಉಚಿತವಾಗಿ ಬೆಳೆದ UPI ವ್ಯವಸ್ಥೆಗೆ ಈಗ ಹೊಸ ಅಧ್ಯಾಯ ಆರಂಭವಾಗುತ್ತಿದೆ. ಕಿಖ ಕೋಡ್‌ನ ಹಿಂದೆ ಇರುವ ವ್ಯವಸ್ಥೆಯ ನಿರ್ವಹಣಾ ವೆಚ್ಚದ ಪ್ರಶ್ನೆ ಮುನ್ನೆಲೆಗೆ ಬಂದಿದೆ.
ಉಚಿತ UPI ಎಂದರೆ ಅದರ ಹಿಂದೆ ಯಾವುದೇ ವೆಚ್ಚವಿಲ್ಲ ಎಂದರ್ಥವೇ ?
ಅಕ್ಟೋಬರ್ ೧೫ ರಿಂದ ಜಾರಿಗೆ ಬರಲಿರುವ ಹೊಸ ವ್ಯವಸ್ಥೆಯಲ್ಲಿ, ₹ ೨,೦೦೦ಕ್ಕಿಂತ ಹೆಚ್ಚಿನ ಕೆಲವು Peಡಿsoಟಿ-ಣo-ಒeಡಿಛಿhಚಿಟಿಣ (P೨ಒ) UPI ವ್ಯವಹಾರಗಳಿಗೆ ೦.೪% ಒeಡಿಛಿhಚಿಟಿಣ ಆisಛಿouಟಿಣ ಖಚಿಣe (ಒಆಖ) ಅನ್ವಯವಾಗಲಿದೆ. ₹ ೭೫,೦೦೦ ಅಥವಾ ಅದಕ್ಕಿಂತ ಹೆಚ್ಚಿನ ವ್ಯವಹಾರಕ್ಕೆ ಪ್ರತಿ ವ್ಯವಹಾರಕ್ಕೆ ಗರಿಷ್ಠ ₹ ೩೦೦ ಮಿತಿ ಇರುತ್ತದೆ. ಆದರೆ ಎಲ್ಲ UPI ವ್ಯವಹಾರಗಳಿಗೂ ಇದು ಅನ್ವಯಿಸುವುದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಮಾಡುವ P೨P ಪಾವತಿಗಳು ಸಂಪೂರ್ಣ ಉಚಿತವಾಗಿಯೇ ಇರುತ್ತವೆ. ₹ ೨,೦೦೦ ರವರೆಗಿನ P೨ಒ ಪಾವತಿಗಳಿಗೂ ಒಆಖ ಇಲ್ಲ. ಸಣ್ಣ ವ್ಯಾಪಾರಿಗಳಿಗೆ zeಡಿo-ಒಆಖ ವ್ಯವಸ್ಥೆಯೂ ಮುಂದುವರಿಯಲಿದೆ. ಹಾಗಾದರೆ ಇದರ ಪರಿಣಾಮ ಏನು ?
UPI ಉಚಿತವಾಗಿರುವುದೇ ಅದರ ದೊಡ್ಡ ಬಲ : UPIಯ ಯಶಸ್ಸಿನ ಹಿಂದೆ ಅದರ ವೇಗ ಮಾತ್ರವಲ್ಲ, ಅದರ ಸರಳತೆ ಮತ್ತು ಕಡಿಮೆ ವೆಚ್ಚವೂ ಇದೆ. ₹ ೨೦ರ ಚಹಾ, ₹ ೧೦೦ರ ತರಕಾರಿ, ₹ ೫೦೦ರ ದಿನಸಿ-ಇಂತಹ ಸಣ್ಣ ಪಾವತಿಗಳಿಗೆ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲ. ಇದರಿಂದ UPI ಸಾಮಾನ್ಯ ಜನರ ಪಾವತಿ ವಿಧಾನವಾಯಿತು. ಆದರೆ ಅದರ ಹಿಂದೆ ಬ್ಯಾಂಕ್‌ಗಳು ಠಿಚಿಥಿmeಟಿಣ seಡಿviಛಿe ಠಿಡಿoviಜeಡಿs, ತಂತ್ರಜ್ಞಾನ ಮೂಲಸೌಕರ್ಯ, ಜಿಡಿಚಿuಜ ಠಿಡಿeveಟಿಣioಟಿ ಮತ್ತು ಛಿಥಿbeಡಿseಛಿuಡಿiಣಥಿ ವ್ಯವಸ್ಥೆಗಳು ನಿರಂತರವಾಗಿ ಕೆಲಸ ಮಾಡುತ್ತವೆ. ಈ ವ್ಯವಸ್ಥೆಯನ್ನು ನಿರಂತರವಾಗಿ ನಿರ್ವಹಿಸಲು ವೆಚ್ಚವಾಗುತ್ತದೆ. ಹೀಗಾಗಿ ಈಗ ಎದುರಾಗಿರುವ ಪ್ರಶ್ನೆ ಕೇವಲ ‘UPIಗೆ ಶುಲ್ಕ ಬಂತೇ ?’ ಎನ್ನುವುದಲ್ಲ. ಇಷ್ಟು ದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ದೀರ್ಘಕಾಲದವರೆಗೆ ಸುಸ್ಥಿರವಾಗಿ ನಡೆಸಲು ಬೇಕಾದ ವೆಚ್ಚವನ್ನು ಯಾರು ಭರಿಸಬೇಕು ? ಎನ್ನುವುದೂ ಹೌದು.
₹ ೧೦,೦೦೦ ಪಾವತಿಸಿದರೆ ಏನಾಗುತ್ತದೆ ? : ಒಂದು ಸರಳ ಉದಾಹರಣೆ ನೋಡೋಣ. ಒಬ್ಬ ಗ್ರಾಹಕ ₹ ೧೦,೦೦೦ ಮೌಲ್ಯದ ವಸ್ತುವನ್ನು ಖರೀದಿಸಿ UPI ಮೂಲಕ ಪಾವತಿಸುತ್ತಾನೆ ಎಂದುಕೊಳ್ಳಿ. ೦.೪% ಒಆಖ ಅನ್ವಯಿಸುವ ವ್ಯವಹಾರವಾಗಿದ್ದರೆ ₹ ೧೦,೦೦೦ಕ್ಕೆ ₹ ೪೦ ಒಆಖ ಬರುತ್ತದೆ. ಇಲ್ಲಿ ಒಂದು ವಿಷಯ ಸ್ಪಷ್ಟವಾಗಿರಬೇಕು. ಈ ₹ ೪೦ ಗ್ರಾಹಕನಿಗೆ ವಿಧಿಸುವ UPI ಶುಲ್ಕವಲ್ಲ. ಒಆಖ ಎನ್ನುವುದು ವ್ಯಾಪಾರಿ ಪಾವತಿ ವ್ಯವಸ್ಥೆಯೊಳಗೆ ಭರಿಸುವ ವೆಚ್ಚ. ಸರ್ಕಾರ ಅಥವಾ ಓPಅI ಈ ಹಣವನ್ನು ತೆರಿಗೆಯಾಗಿ ಸಂಗ್ರಹಿಸುವುದಿಲ್ಲ; ಪಾವತಿ ವ್ಯವಸ್ಥೆಯಲ್ಲಿ ಭಾಗವಹಿಸುವ ವಿವಿಧ ಸಂಸ್ಥೆಗಳ ನಡುವೆ ಅದು ಹಂಚಿಕೆಯಾಗುತ್ತದೆ. ಹೀಗಾಗಿ ಗ್ರಾಹಕ ₹ ೧೦,೦೦೦ ಪಾವತಿಸಿದರೂ, ವ್ಯಾಪಾರಿಗೆ ಸಿಗುವ seಣಣಟemeಟಿಣ ಮೊತ್ತದಲ್ಲಿ ₹ ೪೦ ಒಆಖ ಕಡಿತವಾಗುತ್ತದೆ. ಈ ಹಣ ಸರ್ಕಾರದ ಬೊಕ್ಕಸಕ್ಕೆ ಹೋಗುವ ತೆರಿಗೆಯಲ್ಲ. ಇದು UPI ಠಿಚಿಥಿmeಟಿಣ eಛಿosಥಿsಣemನಲ್ಲಿ ಭಾಗವಹಿಸುವ ವಿವಿಧ ಪಾಲುದಾರರಿಗೆ ಸಂಬAಧಿಸಿದ ಠಿಚಿಥಿmeಟಿಣ-ಠಿಡಿoಛಿessiಟಿg ಡಿeveಟಿue. ಹೀಗಾಗಿ ಒಆಖನ ಪರಿಣಾಮ ಗ್ರಾಹಕರ ಮೇಲೆ ಕಾಣಿಸಿಕೊಳ್ಳಬಹುದು. ಇಲ್ಲಿಂದಲೇ ಮುಂದಿನ ಪ್ರಶ್ನೆ ಶುರುವಾಗುತ್ತದೆ.
ವ್ಯಾಪಾರಿಗೆ ₹ ೪೦ ದೊಡ್ಡದೇ ?: ದೊಡ್ಡ ವ್ಯಾಪಾರಿಗೆ ₹ ೧೦,೦೦೦ ವ್ಯವಹಾರದ ಮೇಲೆ ₹ ೪೦ ಅಷ್ಟೊಂದು ದೊಡ್ಡ ಮೊತ್ತವಾಗದಿರಬಹುದು. ಆದರೆ ದಿನಕ್ಕೆ ನೂರಾರು ಅಥವಾ ಸಾವಿರಾರು ಇಂತಹ ವ್ಯವಹಾರಗಳು ನಡೆದರೆ ಒಟ್ಟು ವೆಚ್ಚ ಗಮನಾರ್ಹವಾಗಬಹುದು. ವ್ಯಾಪಾರಿ ಈ ವೆಚ್ಚವನ್ನು ಸ್ವತಃ ಭರಿಸಬಹುದು. ಮತ್ತೊಂದು ಪಾವತಿ ವಿಧಾನವನ್ನು ಪೋತ್ಸಾಹಿಸಬಹುದು. ಅಥವಾ ದೀರ್ಘಾವಧಿಯಲ್ಲಿ ತನ್ನ ಒಟ್ಟು ವ್ಯವಹಾರ ವೆಚ್ಚವನ್ನು ಲೆಕ್ಕ ಹಾಕಿ ಬೆಲೆ ನಿಗದಿಯಲ್ಲಿ ಪರಿಗಣಿಸಬಹುದು. ಆದರೆ ಇಲ್ಲಿ ಎಚ್ಚರಿಕೆ ಅಗತ್ಯ. ಒಆಖ ನೇರವಾಗಿ ಗ್ರಾಹಕರ ಮೇಲೆ ಹಾಕಲಾಗುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಸರ್ಕಾರದ ಇತ್ತೀಚಿನ ಮಾರ್ಗಸೂಚಿಯ ಪ್ರಕಾರ, ಬ್ಯಾಂಕ್‌ಗಳು ವ್ಯಾಪಾರಿಗಳು ಒಆಖ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸದಂತೆ ನೋಡಿಕೊಳ್ಳಬೇಕು. UPI ಆ್ಯಪ್‌ಗಳು ಕೂಡ ಠಿಟಚಿಣಜಿoಡಿm ಜಿee ಅಥವಾ hiಜಜeಟಿ ಛಿhಚಿಡಿges ವಿಧಿಸಬಾರದು. ಹೀಗಾಗಿ ‘ಇಂದು ವ್ಯಾಪಾರಿಯ ವೆಚ್ಚ, ನಾಳೆ ಯಾರ ಜೇಬಿಗೆ ?’ ಎನ್ನುವುದು ಈಗ ಉತ್ತರವಾಗಿರುವ ಪ್ರಶ್ನೆಯಲ್ಲ; ಮುಂದೆ ಗಮನಿಸಬೇಕಾದ ಪ್ರಶ್ನೆ.
ಸಣ್ಣ ವ್ಯಾಪಾರಿಗಳಿಗೆ ರಕ್ಷಣೆ ಏಕೆ ?: ಹೊಸ ವ್ಯವಸ್ಥೆಯ ಪ್ರಮುಖ ಅಂಶವೆAದರೆ ಸಣ್ಣ ವ್ಯಾಪಾರಿಗಳಿಗೆ ನೀಡಿರುವ ರಕ್ಷಣೆ. UPI ಕಿಖ ಕೋಡ್ ಮೂಲಕ ತಿಂಗಳಿಗೆ ₹ ೧ ಲಕ್ಷದವರೆಗೆ ಸ್ವೀಕರಿಸುವ P೨Pಒ ವರ್ಗದ ಸಣ್ಣ ವ್ಯಾಪಾರಿಗಳು ಎಲ್ಲ ವ್ಯವಹಾರಗಳಿಗೂ zeಡಿo ಒಆಖ ಸೌಲಭ್ಯ ಮುಂದುವರಿಸಲಾಗುತ್ತದೆ. ಬೀದಿ ಬದಿ ವ್ಯಾಪಾರಿಗಳು, ಸಣ್ಣ ಅಂಗಡಿಗಳಿಗೆ ಇದು ಮುಖ್ಯ. ಅದೇ ರೀತಿ ₹ ೨,೦೦೦ ರವರೆಗಿನ P೨ಒ ಪಾವತಿಗಳಿಗೂ ಒಆಖ ಇಲ್ಲ. ಇದರ ಪರಿಣಾಮವಾಗಿ ಸರ್ಕಾರದ ಮಾಹಿತಿಯ ಪ್ರಕಾರ ಸುಮಾರು ೯೬% ಒಆಖನಿಂದ ಹೊರಗೇ ಉಳಿಯಲಿವೆ. ಒಆಖ ಅನ್ವಯಿಸುವುದು ಸುಮಾರು ೪% meಡಿಛಿhಚಿಟಿಣ ಣಡಿಚಿಟಿsಚಿಛಿಣioಟಿsಗೆ ಮಾತ್ರ ಎಂದು ಸರ್ಕಾರ ಹೇಳಿದೆ. ಅಂದರೆ ಇದು ಎಲ್ಲ UPI ಬಳಕೆದಾರರಿಗೂ ಅಥವಾ ಎಲ್ಲ ವ್ಯಾಪಾರಿಗಳಿಗೂ ಒಂದೇ ರೀತಿಯಲ್ಲಿ ಅನ್ವಯಿಸುವ ಶುಲ್ಕವಲ್ಲ.
ಹಾಗಾದರೆ ಕ್ಯಾಷ್‌ಗೆ ಮತ್ತೆ ಅವಕಾಶವೇ ?: ಇಲ್ಲಿ ಮತ್ತೊಂದು ಕುತೂಹಲಕಾರಿ ಅಂಶ ಇದೆ. ದೊಡ್ಡ ಮೊತ್ತದ ಖರೀದಿಯಲ್ಲಿ UPI ಮೂಲಕ ಪಾವತಿಸಿದಾಗ ವ್ಯಾಪಾರಿಗೆ ಒಆಖ ಅನ್ವಯಿಸುವ ಸಾಧ್ಯತೆ ಇದೆ. ಅದೇ ಸಂದರ್ಭದಲ್ಲಿ ನಗದು ಪಾವತಿಗೆ UPI ಒಆಖ ಇರುವುದಿಲ್ಲ. ಇದರಿಂದ ಕೆಲವರು ದೊಡ್ಡ ವ್ಯವಹಾರಗಳಿಗೆ ಮತ್ತೆ ಕ್ಯಾಷ್ ಬಳಸಲು ಯೋಚಿಸಬಹುದೇ ? ಸಾಧ್ಯತೆ ಇದೆ. ಆದರೆ ಕ್ಯಾಷ್ ಕೂಡ ಸಂಪೂರ್ಣ ಉಚಿತವಲ್ಲ. ನಗದು ಇಟ್ಟುಕೊಳ್ಳುವುದು, ಎಣಿಸುವುದು, ಸುರಕ್ಷಿತವಾಗಿ ಸಾಗಿಸುವುದು, ಬ್ಯಾಂಕ್‌ಗೆ ಜಮೆ ಮಾಡುವುದು, ಲೆಕ್ಕಪತ್ರ ನಿರ್ವಹಿಸುವುದು ಇವೆಲ್ಲವೂ ವೆಚ್ಚ ಮತ್ತು ಸಮಯವನ್ನು ನೀಡಬೇಕು. ಹೀಗಾಗಿ UPI ಹಿಂದಕ್ಕೆ ಹೋಗಿ ನಗದು ಸಂಪೂರ್ಣವಾಗಿ ಮರಳುತ್ತದೆ ಎನ್ನುವುದು ಸರಿಯಾದ ಚಿತ್ರವಲ್ಲ. ಬದಲಿಗೆ UPI + ಕ್ಯಾಷ್ + ಕಾರ್ಡ್ + ಬ್ಯಾಂಕ್ ವರ್ಗಾವಣೆ ಎಂಬ ಬಹು-ಪಾವತಿ ವ್ಯವಸ್ಥೆ ಮುಂದುವರಿಯುವ ಸಾಧ್ಯತೆಯೇ ಹೆಚ್ಚು.
UPIಯ ಮುಂದಿನ ಪರೀಕ್ಷೆ ₹ ೨,೦೦೦ ಅಲ್ಲ !: ವಾಸ್ತವವಾಗಿ, UPIಯ ಮುಂದಿನ ಪರೀಕ್ಷೆ ₹ ೨,೦೦೦ರ ಗಡಿ ಮಾತ್ರವಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುತ್ತಿರುವ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಸುರಕ್ಷಿತವಾಗಿ, ವೇಗವಾಗಿ ಮತ್ತು ವಿಶ್ವಾಸಾರ್ಹವಾಗಿ ಮುಂದುವರಿಸಲು ಬೇಕಾದ ಹಣ ಎಲ್ಲಿಂದ ಬರಬೇಕು ಎಂಬುದೇ ದೊಡ್ಡ ಪ್ರಶ್ನೆ. ಅಥಿbeಡಿseಛಿuಡಿiಣಥಿ ಹೆಚ್ಚಿಸಬೇಕು. ಈಡಿಚಿuಜ ಠಿಡಿeveಟಿಣioಟಿ ಬಲಪಡಿಸಬೇಕು. ತಂತ್ರಜ್ಞಾನ ಮೂಲಸೌಕರ್ಯವನ್ನು ನಿರಂತರವಾಗಿ ನವೀಕರಿಸಬೇಕು. ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳಲ್ಲೂ ವ್ಯವಸ್ಥೆಯ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಅಂದರೆ UPI ಕೇವಲ ಒಂದು ಠಿಚಿಥಿmeಟಿಣ ಚಿಠಿಠಿ ಅಲ್ಲ. ಅದರ ಹಿಂದೆ ದೊಡ್ಡ ಠಿಚಿಥಿmeಟಿಣ eಛಿosಥಿsಣem ಇದೆ. ಹೀಗಾಗಿ ‘ಉಚಿತ’ ಎಂಬ ಮಾದರಿಯಿಂದ ‘ಸುಸ್ಥಿರ’ ಮಾದರಿಯತ್ತ UPI ಸಾಗಬೇಕಾದ ಹಂತ ಬಂದಿದೆಯೇ ? ಎಂಬ ಚರ್ಚೆ ಸಹಜ. ಇಲ್ಲಿ ಸಮತೋಲನ ಬಹಳ ಮುಖ್ಯ. ಗ್ರಾಹಕನಿಗೆ ಡಿಜಿಟಲ್ ಪಾವತಿ ಸುಲಭ ಮತ್ತು ಕೈಗೆಟುಕುವಂತೆಯೇ ಇರಬೇಕು. ಸಣ್ಣ ವ್ಯಾಪಾರಿಗೆ ಹೆಚ್ಚುವರಿ ಹೊರೆ ಬೀಳಬಾರದು. ಅದೇ ಸಮಯದಲ್ಲಿ ಈ ವ್ಯವಸ್ಥೆಯನ್ನು ನಡೆಸುವ ಸಂಸ್ಥೆಗಳಿಗೂ ದೀರ್ಘಕಾಲಿಕವಾಗಿ ತಂತ್ರಜ್ಞಾನ ಮತ್ತು ಭದ್ರತೆಯಲ್ಲಿ ಹೂಡಿಕೆ ಮಾಡಲು ಸಾಧ್ಯವಾಗಬೇಕು.
ಉಚಿತ UPIಯಿಂದ ಸ್ವಾವಲಂಬಿ UPI ಯತ್ತ ? : ಹೀಗಾಗಿ ಇಂದಿನ ನಿಜವಾದ ಪ್ರಶ್ನೆ ‘UPIಗೆ ಶುಲ್ಕ ಬಂತೇ ?’ ಎನ್ನುವುದಲ್ಲ. ಉಚಿತವಾಗಿ ಬೆಳೆದ ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಮುಂದಿನ ಹತ್ತು ವರ್ಷಗಳ ಕಾಲ ಯಾರು, ಹೇಗೆ ಮತ್ತು ಎಷ್ಟು ವೆಚ್ಚದಲ್ಲಿ ನಡೆಸಬೇಕು ಎಂಬುದೇ ದೊಡ್ಡ ಪ್ರಶ್ನೆ.
ಒಆಖನ ಪರಿಣಾಮ ಸದ್ಯಕ್ಕೆ ನಿರ್ದಿಷ್ಟ ವ್ಯಾಪಾರಿ ವ್ಯವಹಾರಗಳಿಗೆ ಮಾತ್ರ ಸೀಮಿತವಾಗಿದೆ. ಸಾಮಾನ್ಯ ವ್ಯಕ್ತಿಯಿಂದ ವ್ಯಕ್ತಿಗೆ ಮಾಡುವ UPI ಪಾವತಿಗಳು ಉಚಿತವಾಗಿಯೇ ಇರುತ್ತವೆ. ₹ ೨,೦೦೦ ರವರೆಗಿನ meಡಿಛಿhಚಿಟಿಣ ಠಿಚಿಥಿmeಟಿಣsಗೂ ಶುಲ್ಕವಿಲ್ಲ. ಸಣ್ಣ ವ್ಯಾಪಾರಿಗಳಿಗೂ zeಡಿo-ಒಆಖ ರಕ್ಷಣೆ ಇದೆ. ಆದರೆ ಮುಂದೆ ವ್ಯವಹಾರಗಳ ಪ್ರಮಾಣ ಬದಲಾಗಬಹುದು. ಪಾವತಿ ಪದ್ಧತಿಗಳ ಆಯ್ಕೆಯೂ ಬದಲಾಗಬಹುದು. ವ್ಯಾಪಾರಿಗಳ ವೆಚ್ಚದ ಲೆಕ್ಕಾಚಾರವೂ ಬದಲಾಗಬಹುದು. ಭಾರತದ ಡಿಜಿಟಲ್ ಪಾವತಿ ಕ್ರಾಂತಿಯ ಬೆಲೆ ಕೊನೆಗೆ ಯಾರು ಕಟ್ಟಬೇಕು? UPIಯ ಮುಂದಿನ ಅಧ್ಯಾಯ ಬಹುಶಃ ಉಚಿತ UPIಯಿಂದ ಸ್ವಾವಲಂಬಿ UPIಯತ್ತ ಸಾಗುವ ಪ್ರಯತ್ನವಾಗಿರಬಹುದು. ಅದರ ನಡುವೆ ಕ್ಯಾಷ್‌ಗೆ ಮತ್ತೆ ಸ್ವಲ್ಪ ಜಾಗ ಸಿಗುತ್ತದೆಯೇ ? ಕಾದು ನೋಡಬೇಕಿದೆ.
- ಆರ್. ಕೆ. ಬಾಲಚಂದ್ರ,
ಬ್ಯಾAಕಿAಗ್ ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರರು
ನಿವೃತ್ತ ಜಿಲ್ಲಾ ಅಗ್ರಣಿ ಬ್ಯಾಂಕ್ ವ್ಯವಸ್ಥಾಪಕರು.