ಶ್ರೀಮಂಗಲ, ಸೆ. ೨೨: ನಂಬರ್ ೨೭೯೭ನೆ ಟಿ.ಶೆಟ್ಟಿಗೇರಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘವು ೨೦೨೫-೨೬ನೆ ಸಾಲಿನಲ್ಲಿ ರೂ.೯೦.೧೦ ಲಕ್ಷ ನಿವ್ವಳ ಲಾಭ ಗಳಿಸಿದ್ದು, ಆಡಿಟ್’ನಲ್ಲಿ ೧೫ ವರ್ಷಗಳಿಂದ ಸತತವಾಗಿ ‘ಎ’ ಗ್ರೇಡ್ ಪಡೆಯುತ್ತಿದೆ. ಸದಸ್ಯರ ಪಾಲು ಹಣದ ಮೇಲೆ ಶೇ. ೨೦ ರಷ್ಟು ಡಿವಿಡೆಂಟ್ ನೀಡಲು ತೀರ್ಮಾನಿಸಲಾಗಿದೆ ಎಂದು ಟಿ.ಶೆಟ್ಟಿಗೇರಿ ಕ್ರಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಮಚ್ಚಮಾಡ ಎನ್. ಸುಮಂತ್’ರವರು ಮಾಹಿತಿ ನೀಡಿದರು.

ಸಂಘದ ೨೦೨೫-೨೬ನೆ ಸಾಲಿನ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಂಘವು ಒಟ್ಟು ೨೪೭೯ ಸದಸ್ಯರನ್ನು ಹೊಂದಿದ್ದು, ರೂ.೨.೬೦ ಕೋಟಿ ಪಾಲು ಭಂಡವಾಳ ಹಾಗೂ ರೂ. ೨.೦೪ ಕೋಟಿ ಕ್ಷೇಮ ನಿಧಿಯನ್ನು ಹೊಂದಿದೆ. ಸಂಘದ ವಾರ್ಷಿಕ ವ್ಯವಹಾರ ರೂ. ೩೦೪.೫೫ ಕೋಟಿಗಳಾಗಿದ್ದು, ಸಂಘದ ದುಡಿಯುವ ಬಂಡವಾಳ ರೂ.೪೬.೬೬ ಕೋಟಿಗಳಾಗಿವೆ. ರೂ.೧೧.೬೨ ಕೋಟಿ ಹೂಡಿಕೆ ಮಾಡಲಾಗಿದೆ. ಪ್ರಸ್ತುತ ರೂ.೨೩.೫೧ ಕೋಟಿ ಠೇವಣಿಯನ್ನು ಸಂಗ್ರಹಿಸಲಾಗಿದ್ದು, ೨೦೨೫-೨೬ನೆ ಸಾಲಿನಲ್ಲಿ ೧೦೮೩ ಸದಸ್ಯರಿಗೆ ಕೃಷಿ ಸಾಲ ರೂ.೨೨.೧೫ ಕೋಟಿ ಹಾಗೂ ಕೃಷಿಯೇತರ ಸಾಲ ರೂ.೧೪.೫೬ ಕೋಟಿ ಸೇರಿದಂತೆ ಒಟ್ಟು ರೂ.೩೬.೭೧ ಕೋಟಿಯಷ್ಟು ಸಾಲ ವಿತರಿಸಲಾಗಿದೆ. ಸಂಘದ ಸ್ವಂತ ಬಂಡವಾಳದಿAದ ಸುಮಾರು ರೂ. ೧೮.೦೮ ಕೋಟಿ ಸಾಲವನ್ನು ನೀಡಲಾಗಿದ್ದು ವರದಿ ಸಾಲಿಗೆ ಶೇ. ೯೯.೭೭ರಷ್ಟು ಸಾಲ ವಸೂಲಿ ಆಗಿದೆ. ವಾಯಿದೆ ಮೀರಿದ್ದು ಕೇವಲ ಶೇ. ೦.೨೦ ಎಂದು ಮಾಹಿತಿ ನೀಡಿದರು.

ರೂ.೩.೪೭ಕೋಟಿ ಬೆಲೆಯ ಗೊಬ್ಬರ ಮಾರಾಟ ಮಾಡಲಾಗಿದೆ. ಸಂಘವು ೧೯೭೬ರಲ್ಲಿ ಸ್ಥಾಪಿತವಾಗಿ ಟಿ.ಶೆಟ್ಟಿಗೇರಿ, ತಾವಳಗೇರಿ, ಹರಿಹರ, ಈಸ್ಟ್ ನೆಮ್ಮಲೆ ಹಾಗೂ ವೆಸ್ಟ್ ನೆಮ್ಮಲೆ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದೆ. ಸಂಘದ ಟಿ.ಶೆಟ್ಟಿಗೇರಿ ಕಟ್ಟಡದ ೯ ಅಂಗಡಿ ಮಳಿಗೆಗಳನ್ನು ಬಾಡಿಗೆಗೆ ನೀಡಲಾಗಿದೆ. ಸಂಘವು ರೈತರಿಗೆ ಅನುಕೂಲವಾಗುವಂತೆ ಚಿನ್ನಾಭರಣ ಪರೀಕ್ಷಾ ಯಂತ್ರವನ್ನು ಅಳವಡಿಸಿದ್ದು, ಆಭರಣ ಸಾಲ ನೀಡಲಾಗುವುದು. ಸಂಘದಿAದ ಪ್ರತಿ ವರ್ಷವೂ ಸದಸ್ಯರ ಮಕ್ಕಳಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿ, ಸಂಘದ ಸದಸ್ಯರೆಲ್ಲರೂ ನಮ್ಮ ಸಂಘದಲ್ಲಿಯೆ ಆರ್ಥಿಕ ಹಾಗೂ ವ್ಯಾಪಾರ ವ್ಯವಹಾರ ನಡೆಸುವುದರೊಂದಿಗೆ ಸಮಯಕ್ಕೆ ಸಾಲ ಮರುಪಾವತಿ ಮಾಡಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಮಹಾಸಭೆಯ ಆರಂಭದಲ್ಲಿ ನಿರ್ದೇಶಕರಾದ ಕೆ.ಎಸ್.ಉಮೇಶ್ ಪ್ರಾರ್ಥಿಸಿ, ಉಪಾಧ್ಯಕ್ಷ ಚೆಟ್ಟಂಗಡ ರಂಜು ಕರುಂಬಯ್ಯ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಸಿ.ಎಸ್.ಸೀತಮ್ಮ ವಂದಿಸಿದರು.

ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ತೀತಿರ ಸೋಮಣ್ಣ, ಕುಂಞAಗಡ ಅರುಣ, ಮಚ್ಚಮಾಡ ಮುತ್ತಪ್ಪ, ಕಟ್ಟೇರ ವಿಶ್ವನಾಥ್, ಚೊಟ್ಟೆಯಾಂಡಮಾಡ ಎಂ. ಮುದ್ದಯ್ಯ, ಮಚ್ಚಮಾಡ ನಾಚಪ್ಪ, ಬೊಳ್ಳಜೀರ ಸುಶೀಲ, ಚೊಟ್ಟೆಯಾಂಡಮಾಡ ಸರಿತ, ಜೆ.ಎಂ.ರವಿ, ಆಂಡಮಾಡ ವಿಶ್ವನಾಥ್, ತೀತಿರ ಸುಬ್ರಮಣಿ ಹಾಗೂ ಅಕೌಂಟೆAಟ್ ಬಿ.ಎಂ.ಲೀಲಾವತಿ ಉಪಸ್ಥಿತರಿದ್ದರು.