ಕೋವರ್‌ಕೊಲ್ಲಿ ಇಂದ್ರೇಶ್

ಬೆಂಗಳೂರು, ಸೆ. ೨೨: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಡೆದ ಕಾಡು ಹಂದಿ ಬೇಟೆ ಪ್ರಕರಣಕ್ಕೆ ಸಂಬAಧಿಸಿದAತೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅಧಿಕೃತ ಅಧಿಕಾರಿ ದೂರು ಸಲ್ಲಿಸದೆ, ಪೊಲಿಸರೇ ನೇರವಾಗಿ ತನಿಖೆ ನಡೆಸಿ ಕ್ರಿಮಿನಲ್ ಪ್ರಕರಣ ದಾಖಲಿಸುವುದು ಕಾನೂನು ಬಾಹಿರ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.

ತಮ್ಮ ವಿರುದ್ಧದ ಆರೋಪ ಪಟ್ಟಿ ರದ್ದು ಕೋರಿ ರಮೇಶ್ ಎನ್. ಸೇರಿದಂತೆ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ನಿಗದಿಪಡಿಸಿದ ಅರ್ಹ ಅಧಿಕಾರಿಗಳ ಮೂಲಕ ಹೊಸದಾಗಿ ದೂರು ದಾಖಲಿಸಲು ಕಾನೂನು ಪ್ರಕಾರ ಪ್ರಕ್ರಿಯೆ ಮುಂದುವರಿಕೆಗೆ ಅನುಮತಿ ನೀಡಿದೆ. ಜೊತೆಗೆ, ಆರೋಪಿಗಳಿಂದ ವಶಪಡಿಸಿಕೊಂಡಿದ್ದ ಏರ್ ಗನ್ ಬಿಡುಗಡೆಗೆ ಸೂಚನೆ ನೀಡಿದೆ.ವನ್ಯಜೀವಿ ಸಂರಕ್ಷಣಾ ಕಾಯ್ದೆ-೧೯೭೨ರ ಸೆಕ್ಷನ್ ೫೫ರ ಪ್ರಕಾರ, ವನ್ಯಜೀವಿ ಸಂರಕ್ಷಣಾ ನಿರ್ದೇಶಕರು, ಮುಖ್ಯ ವನ್ಯಜೀವಿ ರಕ್ಷಕರು ಅಥವಾ ಸರ್ಕಾರದಿಂದ ಅಧಿಕಾರ ಪಡೆದ ನಿರ್ದಿಷ್ಟ ಅಧಿಕಾರಿಗಳು ದೂರು ಸಲ್ಲಿಸಿದರೆ ಮಾತ್ರ ನ್ಯಾಯಾಲಯಗಳು ಕಾಗ್ನಿಜೆನ್ಸ್ ಪಡೆದುಕೊಳ್ಳಲು ಅವಕಾಶವಿರಲಿದೆ. ಈ ಪ್ರಕರಣದಲ್ಲಿ ಪೊಲೀಸರು ನೇರವಾಗಿ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿರುವುದು ಕಾಯ್ದೆಯ ಸೆಕ್ಷನ್ ೫೫ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪೀಠ ಹೇಳಿದೆ. ಆರೋಪಿಗಳು ಹೊಂದಿದ್ದ ಬಂದೂಕಿಗೆ ನಿಯಮಾನುಸಾರ ಪರವಾನಗಿ ಪಡೆಯಲಾಗಿದೆ. ಆದ್ದರಿಂದ ಬಂದೂಕು ಮಾರಾಟ, ಅಕ್ರಮ ತಯಾರಿಕೆ ಅಥವಾ ನಿಷೇಧಿತ ಅಸ್ತ್ರಗಳ ಬಳಕೆಗೆ ಸಂಬAಧಿಸಿದAತೆ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ ೩, ೨೫ ಮತ್ತು ೨೭ ಅನ್ವಯಿಸುವುದಿಲ್ಲ. ಪರವಾನಗಿ ಷರತ್ತುಗಳ ಉಲ್ಲಂಘನೆಯಾಗಿದ್ದರೆ ಕೇವಲ ಸೆಕ್ಷನ್ ೩೦ ಮಾತ್ರ ಅನ್ವಯಿಸುತ್ತದೆ ಎಂದು ಪೀಠ ತಿಳಿಸಿದೆ.

ಆದ್ದರಿಂದ ಆರೋಪಿತರಿಂದ ಜಪ್ತಿ ಮಾಡಲಾಗಿದ್ದ ‘ಪ್ರೆಸಿಹೋಲ್ ಸ್ಪೋರ್ಟ್ಸ್’ ಏರ್‌ಗನ್ ೨೦೧೬ರ ಶಸ್ತ್ರಾಸ್ತ್ರ ನಿಯಮಾವಳಿ ಪ್ರಕಾರ ಇದನ್ನು ಹೊಂದಲು ಯಾವುದೇ ಲೈಸನ್ಸ್ ಅಗತ್ಯವಿಲ್ಲ, ಅಲ್ಲದೆ ಎಫ್‌ಎಸ್‌ಎಲ್ ವರದಿಯಲ್ಲಿ ಈ ಏರ್ ಗನ್ ಅನ್ನು ಬೇಟೆಗೆ ಬಳಸಿರುವುದು ದೃಢಪಟ್ಟಿಲ್ಲ. ಆದ್ದರಿಂದ, ೧ ಲಕ್ಷ ರೂ. ಬಾಂಡ್ ಪಡೆದು ಅರ್ಜಿದಾರ ರಮೇಶ್ ಅವರಿಗೆ ಏರ್ ಗನ್ ಬಿಡುಗಡೆ ಮಾಡಬೇಕು ಎಂದು ನ್ಯಾಯಪೀಠ ತನಿಖಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಅಷ್ಟೇ ಅಲ್ಲದೆ, ಪೊಲೀಸರ ಆರೋಪಪಟ್ಟಿ ಹಾಗೂ ಮ್ಯಾಜಿಸ್ಟೆçÃಟ್ ನ್ಯಾಯಾಲಯ ತೆಗೆದುಕೊಂಡಿದ್ದ ಕ್ರಿಮಿನಲ್ ಪ್ರಕ್ರಿಯೆಯನ್ನು ರದ್ದುಗೊಳಿಸಿದ್ದು, ಪ್ರಕರಣ ಸಂಬAಧ ರಾಜ್ಯ ಸರ್ಕಾರದ ಸೂಕ್ತ ಅಧಿಕಾರಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ ೫೫ರ ಅಡಿಯಲ್ಲಿ ನಿಯಮಾನುಸಾರ ದೂರು ಸಲ್ಲಿಸಿ, ಪ್ರಕ್ರಿಯೆ ಮುಂದುವರಿಸಲು ತನಿಖಾ ಸಂಸ್ಥೆಗೆ ಪೂರ್ಣ ಸ್ವಾತಂತ್ರö್ಯ ಇರಲಿದೆ ಎಂದು ಪೀಠ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ: ೨೦೧೯ರ ಆಗಸ್ಟ್ ೨೫ರಂದು ಮುಂಜಾನೆ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಪರವಾನಗಿ ಹೊಂದಿದ್ದ ಬಂದೂಕನ್ನು ಬಳಸಿ ಕಾಡು ಹಂದಿಯನ್ನು ಬೇಟೆಯಾಡಲಾಗುತ್ತಿದೆ ಎಂಬುದಾಗಿ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಸಂಬAಧ ದಾಳಿ ನಡೆಸಿದ್ದ ಪೊಲೀಸರು. ವನ್ಯಜೀವಿ ಮಾಂಸ, ೩೦.೦೬ ಸ್ಪೋರ್ಟಿಂಗ್ ರೈಫಲ್, ಏರ್ ಗನ್ ಹಾಗೂ ಸರಕು ವಾಹನವನ್ನು ಜಪ್ತಿ ಮಾಡಿದ್ದರು. ತನಿಖೆ ಪೂರ್ಣಗೊಳಿಸಿದ್ದ ಪೊಲೀಸರು, ಶ್ರೀರಂಗಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ಭಾರತೀಯ ಶಸ್ತಾçಸ್ತç ಕಾಯ್ದೆ ಸೆಕ್ಷನ್ ೩, ೨೫(೧), ೨೭, ವನ್ಯಜೀವಿ ಸಂರಕ್ಷಣಾ ಕಾಯ್ದೆ-೧೯೭೨ರ ಸೆಕ್ಷನ್ ೯ ಮತ್ತು ೫೧ ಹಾಗೂ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.