ಮಡಿಕೇರಿ, ಸೆ.೨೨; ಐತಿಹಾಸಿಕ ಮಡಿಕೇರಿ ದಸರಾ ಆಚರಣೆ ಸಂಬAಧ ನಿನ್ನೆ ನಡೆದ ಪೂರ್ವಭಾವಿ ಸಭೆಯಲ್ಲಿ ಚರ್ಚೆಗಳು ನಡೆದವು.
ದಸರಾ ಸಮಿತಿ ಅಧ್ಯಕ್ಷೆ ಕಲಾವತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಸರಾ ಆಚರಿಸುವ ಸಂಬAಧ ಹಲವಾರು ಸಲಹೆಗಳು ಕೇಳಿಬಂದವು.
ಸಭೆಯಲ್ಲಿ ಮಾತನಾಡಿದ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಅವರು, ಕಳೆದ ಬಾರಿಯ ಜಾನಪದ ದಸರಾ ಕಾರ್ಯಕ್ರಮದ ಅನುದಾನ ಬಾರದಿರುವ ಬಗ್ಗೆ ಪ್ರಸ್ತಾಪಿಸಿದರಲ್ಲದೆ, ಈ ಬಾರಿ ಬಾಕಿ ಇರುವದನ್ನು ಸೇರಿಸಿ ಕೊಡುವಂತೆ ಹೇಳಿದರು. ಸಂಚಾಲಕ ಅನಿಲ್ ಎಚ್.ಟಿ. ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಕಲಾವಿದರ ಸಂಭಾವನೆಗಳನ್ನು ಮೊದಲು ಪಾವತಿ ಮಾಡಬೇಕು, ಜಾನಪದ ದಸರಾ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳ ಕಲಾವಿದರುಗಳ ಸಂಭಾವನೆ ಕೂಡ ಬಾಕಿ ಉಳಿದಿರುವ ಬಗ್ಗೆ ಗಮನ ಸೆಳೆದರು.
ತಾಂತ್ರಿಕ ತೊಂದರೆಗಳಿAದಾಗಿ ಪಾವತಿ ಬಾಕಿ ಉಳಿದಿದೆ, ಈ ಬಾರಿಯ ಅನುದಾನದಲ್ಲಿ ಸೇರಿಸಿ ಕೊಡುವ ಬಗ್ಗೆ ಪರಿಶೀಲಿಸಲಾಗುವದೆಂದು ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್‌ಕುಮಾರ್ ಹೇಳಿದರು.
ಯುವ ದಸರಾ ಆಚರಣೆಗೆ ಅನುದಾನ ಸಾಕಾಗುವದಿಲ್ಲವೆಂದು ಸಮಿತಿ ಅಧ್ಯಕ್ಷ ಕವನ್ ಪ್ರಸ್ತಾಪಿಸಿದಾಗ ಯುವ ದಸರಾಗೆ ಕಳೆದ ಬಾರಿ ಹೆಚ್ಚಿಗೆ ಅನುದಾನ ನೀಡಲಾಗಿದೆ. ಯಾವದೇ ಸಾರ್ವಜನಿಕ ಹಣ ಸಂಗ್ರಹ ಮಾಡುವದಾದರೆ ಸಮಿತಿಯ ಗಮನಕ್ಕೆ ತರಬೇಕು ಎಂದು ಅರುಣ್ ಹೇಳಿದರು.
ಹಿರಿಯ ಗೌರವ ಸಲಹೆಗಾರ ಟಿ.ಪಿ. ರಮೇಶ್ ಮಾತನಾಡಿ, ದಸರಾ ಸಮಿತಿ ತಳಹದಿಯಲ್ಲಿ ಉಪ ಸಮಿತಿಗಳು ಬರಲಿದ್ದು, ನಿಯಮನುಸಾರ ಕೆಲಸ ಮಾಡಬೇಕಿದೆ. ಉಪಸಮಿತಿಗಳು ತಮ್ಮ ಕಾರ್ಯಕ್ರಮಗಳ ಖರ್ಚು ವೆಚ್ಚದ ಬಗ್ಗೆ ದಸರಾ ಸಮಿತಿಯ ಗಮನಕ್ಕೆ ತಂದು ಕೆಲಸ ಮಾಡಬೇಕಿದೆ ಎಂದು ಸಲಹೆ ಮಾಡಿದರು.
ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೆರ ಮಾತನಾಡಿ, ಪ್ರಸ್ತುತ ದಸರಾ ಸಮಿತಿ ನೀಡುವ ಅನುದಾನದಲ್ಲಿ ಯಾವುದೇ ಕಾರ್ಯಕ್ರಮ ಮಾಡಲು ಸಾಧ್ಯವಿಲ್ಲ, ಕ್ರೀಡಾಕೂಟಕ್ಕೆ ರೂ. ೧೦ ರಿಂದ ೧೨ ಲಕ್ಷ ವೆಚ್ಚವಾಗಲಿದೆ ಎಂದು ಸಭೆಯ ಗಮನಕ್ಕೆ ತಂದರು.
ಗೌರವ ಸಲಹೆಗಾರ ಜಿ. ಚಿದ್ವಿಲಾಸ್ ಮಾತನಾಡಿ, ದಸರಾ ಸಮಿತಿ ಹಾಗೂ ಉಪಸಮಿತಿಗಳಲ್ಲಿ ಹೊಂದಾಣಿಕೆ ಕೊರತೆಯಿದೆ, ಹಾಗಾಗಿ ಪ್ರತಿ ಉಪ ಸಮಿತಿಗಳಿಗೆ ಓರ್ವ ಮೇಲುಸ್ತುವಾರಿಯನ್ನು ನೇಮಕ ಮಾಡಿದಲ್ಲಿ ಸಂವಹನ ಸುಲಭ ಸಾಧ್ಯವಾಗಲಿದೆ. ಯಾವದೇ ಕಾರ್ಯಕ್ರಮಗಳಿದ್ದರೂ ಸಮಿತಿಯ ಗಮನಕ್ಕೆ ತರಬೇಕು, ಮಡಿಕೇರಿ ದಸರಾ ಬಗ್ಗೆ ಕಲಾವಿದರುಗಳಲ್ಲಿ ಅಸಮಾಧಾನವಿದೆ, ಕಪ್ಪು ಚುಕ್ಕೆ ಬಾರದ ಹಾಗೆ ನೊಡಿಕೊಳ್ಳಬೇಕು. ಕಲಾವಿದರಿಗೆ ಬಟ್ಟೆ ಬದಲಾಯಿಸಲು ಕೊಠಡಿ ವ್ಯವಸ್ಥೆ, ಶೌಚಾಲಯ ಸಮರ್ಪಕವಾಗಿರುವಂತೆ ನೋಡಿಕೊಳ್ಳಬೇಕು. ಊಟ, ತಿಂಡಿ ವ್ಯವಸ್ಥೆ ಬಗ್ಗೆಯೂ ಗಮನ ಹರಿಸಬೇಕೆಂದು ಸಲಹೆ ಮಾಡಿದರು.
ಸ್ವಾಗತ ಸಮಿತಿಯ ಲೋಕೇಶ್ ಮಾತನಾಡಿ, ನಗರ ಅಲಂಕಾರಕ್ಕೆ ಸಂಬAಧಿಸಿದAತೆ ಕೆಲವು ಕಡೆಗಳಲ್ಲಿ ರಸ್ತೆಗೆ ಅಡ್ಡಲಾಗಿ ವಿದ್ಯುತ್ ಬಲ್ಬ್ಗಳನ್ನು ಅಳವಡಿಸಲು ಸೂಚಿಸಲಾಗಿದೆ. ಇದರಿಂದ ಮಂಟಪಗಳ ಸಂಚಾರಕ್ಕೆ ಕಷ್ಟವಾಗಲಿದೆ. ಈ ಬಗ್ಗೆ ಸಂಬAಧಿಸಿದವರು ಗಮನ ಹರಿಸುವಂತೆ ಗಮನ ಸೆಳೆದರು.
ಪದಾಧಿಕಾರಿ ವಿ.ಜಿ. ಮೋಹನ್ ಮಾತನಾಡಿ, ಈ ಹಿಂದಿನAತೆಯೇ ಮಂಟಪಗಳು ಗಣಪತಿ ಬೀದಿ ಮಾರ್ಗವಾಗಿ ಸಂಚರಿಸಿ ಮಹದೇವಪೇಟೆಗಾಗಿ ವಾಪಸ್ ಬರುವಂತೆ ಅವಕಾಶ ಮಾಡಿಕೊಡಬೇಕು, ಗಣಪತಿ ಬೀದಿಯಲ್ಲಿ ಬೆಳಕಿನ ವ್ಯವಸ್ಥೆಯೊಂದಿಗೆ ರಸ್ತೆ ಬದಿಯಲ್ಲಿನ ವಾಹನಗಳ ತೆರವಿಗೆ ಕ್ರಮ ಕೈಗೊಳ್ಳಬೇಕೆಂದು ಕೋರಿದರು.
ಕವಿಗೋಷ್ಠಿ ಸಮಿತಿ ಅಧ್ಯಕ್ಷ ಉಜ್ವಲ್ ರಂಜಿತ್ ಅ. ೧೫ ರಂದು ಹಮ್ಮಿಕೊಳ್ಳಲಾಗಿರುವ ಕವಿಗೋಷ್ಠಿ ಕಾರ್ಯಕ್ರಮದ ವಿವರ ನೀಡಿದರು. ಸಭೆಯಲ್ಲಿ ದಸರಾ ಸಮಿತಿ ಪದಾಧಿಕಾರಿಗಳು, ಉಪ ಸಮಿತಿ ಪದಾಧಿಕಾರಿಗಳು, ದಶಮಂಟಪ ಸಮತಿಯವರು ಇದ್ದರು.