ಮಡಿಕೇರಿ, ಸೆ. ೨೨: ಮದೆ ಗ್ರಾಮದ ವಿದ್ಯಾರ್ಥಿನಿ, ಯೋಗಾಸನದಲ್ಲಿ ಹಲವಾರು ದಾಖಲೆ ನಿರ್ಮಿಸಿ ಸಾಧನೆ ಮಾಡಿರುವ ಸಿಂಚನಾಳ ಮತ್ತೊಂದು ಸಾಧನೆಯಾಗಿ ೩ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರ್ಪಡೆ ಕಾರ್ಯಕ್ರಮ ತಾ. ೨೫ ರಂದು ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಗೋಳಿಕಜೆ ಧನಂಜಯ, ಮದೆ ಗ್ರಾಮದ ಬಿಜಿಎಸ್ ಶಾಲೆಯಲ್ಲಿ ೭ನೇ ತರಗತಿ ವ್ಯಾಸಂಗ ಮಾಡುತ್ತಿರುವ ಕೀರ್ತಿಕುಮಾರ್ ಹಾಗೂ ರೇಣುಕ ದಂಪತಿಯ ಪುತ್ರಿ ಸಿಂಚನ ಈಗಾಗಲೇ ಯೋಗಾಸನದಲ್ಲಿ ರಾಜ್ಯ, ರಾಷ್ಟç, ಅಂತರರಾಷ್ಟಿçÃಯ ಮಟ್ಟದಲ್ಲಿ ಹಲವಾರು ಸಾಧನೆಗಳನ್ನು ಮಾಡಿದ್ದಾಳೆ. ಇದೀಗ ಮುಂದಿನ ಹಂತದಲ್ಲಿ ಮತ್ತೆ ಮೂರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದು, ಈ ಕಾರ್ಯಕ್ರಮ ತಾ. ೨೫ ರಂದು ದೇವರಕೊಲ್ಲಿಯ ಶ್ರೀ ಚಾಮುಂಡೇಶ್ವರಿ ಕಲಾಮಂದಿರ ಸಭಾಂಗಣದಲ್ಲಿ ನಡೆಯಲಿದೆ.
ಚಾಮುಂಡೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಜೆ.ಂ iÀÄಶೋಧರ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟನೆ ಮಾಡುವರು. ಮುಖ್ಯ ಅತಿಥಿಗಳಾಗಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಜಿ. ಬೋಪಯ್ಯ, ಸಾಹಿತಿ ಬಿ.ಆರ್. ಜೋಯಪ್ಪ, ನಿವೃತ್ತ ಶಿಕ್ಷಕ ಎಂ.ಎಸ್. ಶಿವರಾವ್, ಮದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಗೋಳಿಕಜೆ ಧನಂಜಯ, ಯೋಗ ಭಾರತಿಯ ಯೋಗ ಗುರು ಕೆ.ಕೆ. ಮಹೇಶ್ ಕುಮಾರ್, ರೊಟರಿ ಮಿಸ್ಟಿ ಹಿಲ್ಸ್ ನಿರ್ದೇಶಕ ಎಚ್.ಟಿ ಅನಿಲ್, ನಾಪೋಕ್ಲು ಬಿಲ್ಲವ ಸಂಘದ ಅಧ್ಯಕ್ಷ ಬಿ. ಪ್ರದೀಪ್ ಹಾಗೂ ಏಷ್ಯಾ ಹೆಡ್ ಗೋಲ್ಡನ್ ಬುಕ್ ಆಫ್ ರೆಕಾರ್ಡ್ನ ಮುಖ್ಯ ತೀರ್ಪುಗಾರ ಡಾ. ಮನಿಷ್ ವೈಷ್ಣೋಯಿ ಉಪಸ್ಥಿತರಿರುವರೆಂದು ತಿಳಿಸಿದರು. ಸಿಂಚನಾಳ ತಾಯಿ ರೇಣುಕ ಮಾತನಾಡಿ, ಸಿಂಚನ ಇದುವರೆಗೆ ೧೫ ದಾಖಲೆಗಳನ್ನು ಮಾಡಿದ್ದು,
ತಾ. ೨೫ ರಂದು ಮತ್ತೆ ಮೂರು ವಿಶ್ವ ದಾಖಲೆ ಮಾಡುವ ಪ್ರಯತ್ನದಲ್ಲಿದ್ದಾಳೆ. ೫ ನಿಮಿಷ ಚಲಿಸುವ ಬಿಂಬಾಸನ, ೫ ನಿಮಿಷ ತಿರುಗುವ ಧನುರಾಸನ ಹಾಗೂ ಒಂದು ನಿಮಿಷಕ್ಕೂ ಅಧಿಕ ಕಾಲದ ಡಿಂಬಾಸನ, ಸುಪ್ತ ಡಿಂಬಾಸನ ಮಾಡಲಿದ್ದಾಳೆ ಎಂದು ಮಾಹಿತಿ ನೀಡಿದರು.
ಯೋಗ ಗುರು ಮಹೇಶ್‌ಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶದಿಂದ ಬಂದ ಬಾಲ ಪ್ರತಿಭೆ ಸಿಂಚನ ಸಾಕಷ್ಟು ದಾಖಲೆಗಳೊಂದಿಗೆ ಪ್ರಶಸ್ತಿ ಗಳಿಸಿದ್ದಾಳೆ. ಇದೇ ಹಾದಿಯಲ್ಲಿ ಇನ್ನೊಂದಿಷ್ಟು ಸಾಧನೆ ಮಾಡುವ ಉದ್ದೇಶದೊಂದಿಗೆ ಪ್ರಯತ್ನ ಮುಂದುವರಿಸಿದ್ದಾಳೆ. ಯೋಗಾಸನ ಕ್ಷೇತ್ರದಲ್ಲಿ ಕೊಡಗು ಜಿಲ್ಲೆಯ ಹೆಸರನ್ನು ಪಸರಿಸಲು ಮುಂದಾಗಿದ್ದಾಳೆ, ಆಕೆಯ ಪ್ರಯತ್ನಕ್ಕೆ ಎಲ್ಲರ ಪ್ರೋತ್ಸಾಹ ಅಗತ್ಯವಿದೆ ಎಂದು ಹೇಳಿದರು.
ಚಾಮುಂಡೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ಬಿ.ಜೆ. ಯಶೋಧರ ಮಾತನಾಡಿ, ಸಿಂಚನ ಯೋಗಾಸನದಲ್ಲಿ ಅದ್ಭುತ ಯಶಸ್ಸು ಕಾಣುತ್ತಿರುವ ಪ್ರತಿಭೆಯಾಗಿದ್ದು, ಮತ್ತೊಂದು ವಿಶ್ವ ದಾಖಲೆ ಮಾಡುವ ಪ್ರಯತ್ನದಲ್ಲಿದ್ದಾಳೆ. ಮತ್ತಷ್ಟು ದಾಖಲೆ ಮಾಡುವಂತೆ ಎಲ್ಲರೂ ಪ್ರೋತ್ಸಾಹ ನೀಡಬೇಕೆಂದರು.
ಪ್ರತಿಭೆ ಸಿಂಚನ ತನ್ನ ಪ್ರಯತ್ನಕ್ಕೆ ಪ್ರೊತ್ಸಾಹಿಸುವಂತೆ ಕೋರಿಕೊಂಡಳು. ಗೋಷ್ಠಿಯಲ್ಲಿ ನಿವೃತ್ತ ಶಿಕ್ಷಕ ಎಂ.ಎಸ್. ಶಿವರಾವ್ ಇದ್ದರು.