ಮಡಿಕೇರಿ, ಸೆ. ೨೨: ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನ ಕೋರಮಂಗಲದಲ್ಲಿ ಜರುಗಿದ ದಕ್ಷಿಣ ಭಾರತದ ಐದು ರಾಜ್ಯಗಳನ್ನು ಒಳಗೊಂಡ ಸೌತ್‌ಜೋನ್ ೧sಣ ಎಲೈಟ್ ಬಾಕ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಕೊಡಗು ಜಿಲ್ಲೆಯ ಯುವತಿಯರಿಬ್ಬರು ಮುಖಾಮುಖಿಯಾಗಿ ಚಿನ್ನ ಹಾಗೂ ಬೆಳ್ಳಿ ಪದಕದ ಸಾಧನೆ ಮಾಡಿದ್ದಾರೆ.

ಕರ್ನಾಟಕ ಎ ತಂಡವನ್ನು ಪ್ರತಿನಿಧಿಸಿದ್ದ ಅಲ್ಲುಮಾಡ ಸಾಂಚಿ ಬೊಳ್ಳಮ್ಮ ಚಿನ್ನದ ಪದಕದೊಂದಿಗೆ ಮೊದಲ ಸ್ಥಾನ ಹಾಗೂ ಕರ್ನಾಟಕ ಬಿ ತಂಡವನ್ನು ಪ್ರತಿನಿಧಿಸಿದ್ದ ಬೊಳ್ತುರ ರೋಶನಿ ಮುತ್ತಣ್ಣ ಅವರುಗಳು ೬೫-೭೦ ಕೆ.ಜಿ. ವಿಭಾಗದಲ್ಲಿ ಫೈನಲ್ ಸುತ್ತಿಗೆ ತಲುಪಿದ್ದು ವಿಶೇಷವಾಗಿತ್ತು. ಇವರಿಬ್ಬರ ನಡುವಿನ ಸ್ಪರ್ಧೆಯಲ್ಲಿ ಸಾಂಚಿ ಬೊಳ್ಳಮ್ಮ ಚಿನ್ನ ಹಾಗೂ ರೋಶನಿ ಮುತ್ತಣ್ಣ ಬೆಳ್ಳಿ ಪದಕದೊಂದಿಗೆ ಈ ವಿಭಾಗದ ಮೊದಲ ಎರಡು ಪ್ರಶಸ್ತಿ ಗಳಿಸಿದರು. ೪ಏಳನೇ ಪುಟಕ್ಕೆ