ಮಡಿಕೇರಿ, ಸೆ. ೨೨: ಕೊಡಗಿನ ಆದಿಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಯವರ ೧೫೮ ನೆ ಹುಟ್ಟು ಹಬ್ಬವನ್ನು ಕವಿ ಜನಿಸಿದ ನಾಪೋಕ್ಲು ಸಮೀಪದ ಕಿರುಂದಾಡು ಗ್ರಾಮದ ಮನೆಯಲ್ಲಿ ಆಚರಿಸಲಾಯಿತು.ಅಪ್ಪಚ್ಚ ಕವಿ ಬಗ್ಗೆ ಪೊಂಬೊಳ್ಚ ಕೂಟದ ಸದಸ್ಯರು ತಾವೇ ರಚಿಸಿದ ಕವನ ವಾಚನ ಮಾಡುವ ಮೂಲಕ ಅಪ್ಪನೆರವಂಡ ಕುಟುಂಬಸ್ಥರೊAದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪೊಂಬೊಳ್ಚ ಕೂಟದ ಅಧ್ಯಕ್ಷ ಚಂಗೇಟಿರ ಸೋಮಣ್ಣ, ಸ್ಥಾಪಕ ಕೋಟೆರ ಪೂಣಚ್ಚ, ಉಪಾಧ್ಯಕ್ಷೆ ಮುಂಡ್ಯೋಳAಡ ಧರಣಿ ಜಗದೀಶ್, ಕಾರ್ಯದರ್ಶಿ ಜಮ್ಮಡ ಮೋನ ಭೀಮಯ್ಯ, ಖಜಾಂಚಿ ಶಿವಚಾಳಿಯಂಡ ರೋಹಿಣಿ ಬೋಪಣ್ಣ, ಸಹಕಾರ್ಯದರ್ಶಿ ಅಜ್ಜಿಕುಟ್ಟಿರ ಭವ್ಯ ಬೋಪಣ್ಣ ಸೇರಿದಂತೆ ಪೊಂಬೊಳ್ಚ ಕೂಟದ ಸದಸ್ಯರು ಹಾಜರಿದ್ದರು. ಕೂಟದ ಸದಸ್ಯರುಗಳಾದ ಕುಂಡ್ಯೋಳAಡ ಬೋಪಣ್ಣ, ಅಪ್ಪನೆರವಂಡ ವಿನು ಮಾದಪ್ಪ,ಕ್ಯಾಪ್ಟನ್ ಬಿದ್ದಂಡ ನಾಣಿ ದೇವಯ್ಯ, ಚೊಟ್ಟಂಡ ಪ್ರಭು ಸೋಮಯ್ಯ, ಉಳುವಂಗಡ ಕಿಶೋರ ಮುತ್ತಪ್ಪ, ಕೊಳ್ಳಿಮಾಡ ಕಟ್ಟಿ ಮುತ್ತಣ್ಣ,ಶಿವಚಾಳಿಯಂಡ ಬೋಪಣ್ಣ, ಮಾಳೇಟಿರ ಸೀತಮ್ಮವಿವೇಕ್, ಸುಳ್ಳಿಮಾಡ ಶಿಲ್ಪ ಅಪ್ಪಣ್ಣ, ಕದ್ದಣಿಯಂಡ ವಂದನ ಚಿಣ್ಣಪ್ಪ, ಕೊಟ್ಟಂಗಡ ಕವಿತ ವಾಸುದೇವ, ಕೊಣೇರಿರ ಗೀತ ಕಾವೇರಪ್ಪ, ಚೆಕ್ಕೇರ ಚಂದ್ರಪ್ರಕಾಶ್, ಗಿರೀಶ್ ಭೀಮಯ್ಯ, ಮತ್ತು ಅಪ್ಪನೆರವಂಡ ಕುಟುಂಬಸ್ಥರು ಹಾಜರಿದ್ದರು ಕವಿಗಳು ತಮ್ಮ ಕವನ ವಾಚಿಸಿದರು. ಪೊಂಬೊಳ್ಚ ಕೂಟದ ವತಿಯಿಂದ ತೂಕ್ ಬೊಳಕನ್ನು ಕೊಡುಗೆಯಾಗಿ ನೀಡಲಾಯಿತು.