ಸಿದ್ದಾಪುರ, ಸೆ.೨೧ : ಲಕ್ಷಾಂತರ ರೂಪಾಯಿ ಮೌಲ್ಯದ ಶ್ರೀಗಂಧವನ್ನು ಕಳ್ಳತನ ಮಾಡಿ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ತಿತಿಮತಿ ವಲಯ ಅರಣ್ಯ ಇಲಾಖಾಧಿಕಾರಿಗಳು ಮತ್ತು ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಕೆ.ಎಂ. ಪ್ರಕಾಶ್ ಎಂಬವರಿಗೆ ಸೇರಿದ ಜಾಗದಿಂದ ಶ್ರೀಗಂಧ ಮರಗಳನ್ನು ಕಡಿದು ಕಳ್ಳತನ ಮಾಡಿ ವಾಹನದಲ್ಲಿ ಸಾಗಾಟ ಮಾಡಿ ಚೆನ್ನಯ್ಯನ ಕೋಟೆ ಗ್ರಾಮದ ಜೆಲ್ಲಕಟ್ಟೆ ಎಂಬಲ್ಲಿ ಶ್ರೀಗಂಧದ ನಾಟಾಗಳನ್ನು ಹಾಗೂ ತಿರುಳುಗಳನ್ನು ಸ್ವಚ್ಛಗೊಳಿಸುತ್ತಿದ್ದ ಸಂದರ್ಭ ತಿತಿಮತಿ ವಲಯ ಅರಣ್ಯ ಅಧಿಕಾರಿ ರಾಕೇಶ್ ನೇತೃತ್ವದಲ್ಲಿ ಉಪ ವಲಯ ಅರಣ್ಯ ಅಧಿಕಾರಿ ಶಶಿ ಪಿ.ಟಿ. ಮತ್ತು ಅರಣ್ಯ ಸಿಬ್ಬಂದಿ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಚೆನ್ನಯ್ಯನ ಕೋಟೆ ಗ್ರಾಮದ ಕೋಟೆ ಪೈಸಾರಿ ನಿವಾಸಿ ಚಂದ್ರ ಎಂ.ಎA.(೪೯) ಮತ್ತು ಚೆನ್ನಯ್ಯನ ಕೋಟೆ ಗ್ರಾಮದ ಜಲ್ಲಕಟ್ಟೆ ನಿವಾಸಿ ಉಮೇಶ್ (೨೭) ಎಂಬಿಬ್ಬರನ್ನು ಬಂಧಿಸಲಾಗಿದ್ದು ಇತರ ಆರೋಪಿಗಳು ಪರಾರಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ ೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ೨೦ ಕೆಜಿ ಶ್ರೀಗಂಧ ಮತ್ತು ೧೫ ಕೆ.ಜಿ ಶ್ರೀಗಂಧ ಮರಗಳ ನಾಟಾಗಳು ೨೦ ಕೆ.ಜಿ ಮರದ ಚಕ್ಕೆಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ವಿನುತಾ ಚÀÀÀÀವ್ಹಾಣ್ ಅವರ ಮಾರ್ಗದರ್ಶನದಲ್ಲಿ ತಿತಿಮತಿ ವಲಯ ಅರಣ್ಯ ಅಧಿಕಾರಿ ರಾಕೇಶ್ ನೇತೃತ್ವದಲ್ಲಿ ಉಪ ಅರಣ್ಯ ಅಧಿಕಾರಿ ಶಶಿ ಪಿ.ಟಿ. ಅರಣ್ಯ ರಕ್ಷಕ ರಾಜೇಶ್, ಆರ್.ಆರ್ ಟಿ. ತಂಡದ ಸಿಬ್ಬಂದಿಗಳಾದ ರೋಷನ್ , ಪ್ರದೀಪ್, ಪ್ರವೀಣ, ಮಂಜು, ನಿತಿನ್, ಚಾಲಕರಾದ ಸಂಜು ಮತ್ತು ಪ್ರಮೋದ್, ಉಪವಲಯ ಅರಣ್ಯ ಅಧಿಕಾರಿಗಳಾದ ಚಂದ್ರಾವತಿ, ಕಾವೇರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.