ಬೆಂಗಳೂರು, ಸೆ. ೨೧: ಪರಿಸರ ಸೂಕ್ಷö್ಮ ವಲಯ ಹಿನ್ನೆಲೆಯ ಕಸ್ತೂರಿರಂಗನ್ ವರದಿ ಜಾರಿಗೆ ಇಂದು ವಿಧಾನಸಭಾ ಅಧಿವೇಶನದಲ್ಲಿ ಪಕ್ಷಾತೀತವಾಗಿ ಒಮ್ಮತದ ವಿರೋಧ ವ್ಯಕ್ತಗೊಂಡಿತು. ವಿಧಾನಪರಿಷತ್‌ನಲ್ಲಿಯೂ ಒಮ್ಮತದ ವಿರೋಧ ಅಭಿಪ್ರಾಯ ವ್ಯಕ್ತಗೊಂಡಿತು. ಈಗಾಗಲೇ ಈ ವರದಿ ಜಾರಿಗೆ ರಾಜ್ಯದ ಆಯಾ ಪ್ರದೇಶಗಳಲ್ಲಿ ರೈತರಿಂದ ಹಾಗೂ ಸ್ಥಳೀಯರಿಂದ ಪ್ರತಿಭಟನೆ ನಡೆದಿರುವುದಕ್ಕೆ ಪೂರಕವಾಗಿ ಜನಪ್ರತಿನಿಧಿಗಳೂ ರೈತರ ಹೋರಾಟಕ್ಕೆ ಒಕ್ಕೊರಲಿನ ಬೆಂಬಲ ಸೂಚಿಸರುವ ಬೆಳವಣಿಗೆ ಕಂಡುಬAದಿತು. ಆಯಾ ಸ್ಥಳಗಳಿಗೆ ಭೌತಿಕವಾಗಿ ತೆರಳದೆ ಉಪಗ್ರಹ ಸಮೀಕ್ಷೆಯ ಆಧಾರದ ಮೇಲೆ ಸಿದ್ಧಪಡಿಸಲಾದ ಈ ವರದಿಯಿಂದ ಸ್ಥಳೀಯ ರೈತರು ಮತ್ತು ನಿವಾಸಿಗಳ ಬದುಕಿಗೆ ತೊಂದರೆಯಾಗಲಿದೆ ಎಂದು ಸದನದಲ್ಲಿ ಮಾತನಾಡಿದ ಶಾಸಕರು ಅಭಿಪ್ರಾಯಪಟ್ಟರು. ಈ ಕುರಿತು ಸ್ಪಂದಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯದ ರೈತರ ಹಾಗೂ ಜನರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಅಧಿವೇಶನದ ಮುಕ್ತಾಯದ ವೇಳೆಗೆÀ ನಿರ್ಧಾರ ಕೈಗೊಳ್ಳುವ ಸುಳಿವು ನೀಡಿದ್ದಾರೆ. ಈ ವಿಚಾರದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಅವರೂ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸದನದಲ್ಲಿ ಮಾತನಾಡಿದ ಶಾಸಕರುಗಳು ಉಪಗ್ರಹ ಸಮೀಕ್ಷೆ ಆಧರಿತ ಕಸ್ತೂರಿರಂಗನ್ ವರದಿ ಅಸಮರ್ಪಕವಾದುದು ಎಂದು ಅಭಿಪ್ರಾಯಪಟ್ಟರು. ಕಸ್ತೂರಿರಂಗನ್ ಕರಡು ಮಸೂದೆಯಿಂದ ರೈತರ ಬದುಕಿಗೆ ಕಂಟಕವಾಗಲಿದ್ದು ಜನರ ಭವಿಷ್ಯ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಶಾಸಕರುಗಳು ಆಗ್ರಹಿಸಿದರು.
ಪ್ರಾರಂಭದಲ್ಲಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಕಸ್ತ್ತೂರಿರಂಗನ್ ವರದಿ ಜಾರಿಗೊಂಡರೆ ರಾಜ್ಯದ ಆಯಾ ಭಾಗದಲ್ಲಿ ರೈತರಿಗೆ ಸಂಕಷ್ಟ ಎದುರಾಗಲಿದೆ ಎನ್ನುವ ಕುರಿತು ವಿವರವಾದ ಮಾಹಿತಿ ನೀಡಿದರು.
ರೈತರ ರಕ್ಷಣೆಗೆ ಬದ್ಧ- ಮುಖ್ಯಮಂತ್ರಿ
‘ರಾಜ್ಯದ ರೈತರು, ಜನರ ರಕ್ಷಣೆ ನನಗೆ ಮುಖ್ಯವಾಗಿದೆ. ಅದಕ್ಕೆ ನಾನು ಬದ್ಧನಾಗಿದ್ದೇನೆ. ದೊರೆತಿರುವ ಈ ಅವಕಾಶವನ್ನು ಬಳಸಿಕೊಂಡು ಎಲ್ಲರನ್ನೂ ರಕ್ಷಣೆ ಮಾಡಬೇಕು. ಸಮಸ್ಯೆಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುವ ಉದ್ದೇಶ ನನಗಿಲ್ಲ’ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸ್ಪಷ್ಟಪಡಿಸಿದರು.
ಕಸ್ತೂರಿ ರಂಗನ್ ವರದಿ ಪರಿಣಾಮ ಹಾಗೂ ನಾಡಿನ ರೈತರ, ಬರದ ಬಗ್ಗೆ ಚರ್ಚೆ ನಡೆಸಿ, ಪರಿಹಾರ ಕಂಡುಕೊಳ್ಳಲು ೩ ದಿನಗಳ ಅಧಿವೇಶನವನ್ನು ಕರೆದಿದ್ದೇವೆ. ‘ನಾವು ನಿಂತಿರುವ ಈ ಭೂಮಿ ನಾವೆಲ್ಲಾ ನಮ್ಮದೇ ಅಂದುಕೊAಡಿದ್ದೇವೆ. ನಾವು ಸತ್ತಾಗ ಈ ಭೂಮಿಗೇ ಸೇರುತ್ತೇವೆ. ಸುಡುವಾಗ ಭೂಮಿಯ ಸೌದೆಯಿಂದಲೇ ಸುಟ್ಟು ಅದನ್ನೂ ಭೂಮಿಗೇ ಬಿಡುತ್ತಾರೆ. ಹಾಗಾಗಿ ಈ ಭೂಮಿಯನ್ನು ಬಿಟ್ಟುಕೊಡುವ ಮಾತೇ ಇಲ್ಲ’ ಎಂದು ಭರವಸೆ ನೀಡಿದರು.
‘ಕಸ್ತೂರಿ ರಂಗನ್ ವರದಿ ವಿಚಾರವಾಗಿ ನಮ್ಮ ರೈತರ ಬದುಕಿನ ಹಕ್ಕು, ಜನರ ಆಕ್ರೋಶ ಸ್ವಾಭಿಮಾನ ಅರಿತಿದ್ದೇನೆ. ಅವರ ಜೊತೆ ಮುಕ್ತವಾಗಿ ಚರ್ಚೆ ನಡೆಸಿದ್ದೇನೆ. ಎಲ್ಲಾ ಸಂಸತ್ ಸದಸ್ಯರು, ಶಾಸಕರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ರೈತ ಪ್ರತಿನಿಧಿಗಳೊಂದಿಗೂ ಈ ವಿಚಾರವಾಗಿ ಮಾತನಾಡಿದ್ದೇನೆ. ಸಾವಿರಾರು ಜನ ಅರ್ಜಿಗಳನ್ನೂ ಕೊಟ್ಟಿದ್ದಾರೆ’ ಎಂದು ಹೇಳಿದರು.
ಗಾಡ್ಗಿಲ್ ವರದಿಯಿಂದ ಕಸ್ತೂರಿರಂಗನ್ ವರದಿವರೆಗೆ
ಕಸ್ತೂರಿರಂಗನ್ ವರದಿ ಜಾರಿಗೆ ಬಿಜೆಪಿ ನಾಯಕ ಹಾಗೂ ವಿಧಾನಸಭಾ ವಿಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ರಾಷ್ಟಿçÃಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಆದೇಶದಂತೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದ್ದಾರೆ. ಗೋವಾದ ಪರಿಸರ ಸಂಸ್ಥೆಯೊAದು ಈ ದಿಸೆಯಲ್ಲಿ ನ್ಯಾಯಮಂಡಳಿ ಮುಂದೆ ನಿರಂತರ ಪುಕಾರುಗಳನ್ನು ಸಲ್ಲಿಸುತ್ತಿರುವುದರಿಂದ ಈ ಸಮಸ್ಯೆ ಸಂಭವಿಸಿದೆ ಎಂದು ದಾಖಲೆ ಸಹಿತ ವಿವರ ಮಾಹಿತಿಯಿತ್ತರು. ಪಶ್ಚಿಮ ಘಟ್ಟಗಳಿಗೆ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಯುಪಿಎ ಸರ್ಕಾರ ೨೦೧೦ರಲ್ಲಿ ಮಾಧವ ಗಾಡ್ಗಿಲ್ ಸಮಿತಿಯನ್ನು ರಚಿಸಿತ್ತು. ಪಶ್ಚಿಮ ಘಟ್ಟಗಳಾದ್ಯಂತ ಕಠಿಣ ನಿರ್ಬಂಧಗಳನ್ನು ವಿಧಿಸುವಂತೆ ಈ ಸಮಿತಿ ಶಿಫಾರಸು ಮಾಡಿತ್ತು. ಇದಕ್ಕೆ ವಿರೋಧ ವ್ಯಕ್ತವಾಗಿ ಪ್ರತಿಭಟನೆಗಳು ನಡೆದ ಬಳಿಕ ಕಸ್ತೂರಿರಂಗನ್ ಸಮಿತಿ ರಚನೆಯಾಯಿತು ಎಂದು ಅಶೋಕ್ ವಿವರಿಸಿದರು.
ಕಸ್ತೂರಿರಂಗನ್ ಸಮಿತಿ ಪಶ್ಚಿಮ ಘಟ್ಟಗಳ ಶೇ. ೩೭ರಷ್ಟು ಪ್ರದೇಶ ಅಂದರೆ ೫೯,೯೪೦ ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷö್ಮ ಪ್ರದೇಶವೆಂದು ಘೋಷಿಸಲು ಶಿಫಾರಸು ಮಾಡಿತ್ತು. ಜನವಸತಿ ಪ್ರದೇಶಗಳು ಹಾಗೂ ತೋಟಗಳನ್ನು ಹೊರಗಿಡುವುದರ ಜತೆಗೆ ಕಲ್ಲು ಗಣಿಗಾರಿಕೆ, ಉಷ್ಣ ವಿದ್ಯುತ್ ಯೋಜನೆಗಳು ಹಾಗೂ 'ರೆಡ್ ಕೆಟಗರಿ' ಕೈಗಾರಿಕೆಗಳಂತಹ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸುವಂತೆ ಶಿಫಾರಸು ಮಾಡಿತ್ತು ಎಂದು ಹೇಳಿದರು.
ಈ ವಿಚಾರವನ್ನು ರಾಜಕೀಯಗೊಳಿಸುವ ಬದಲು ರಾಜ್ಯ ಸರ್ಕಾರ ವಾಸ್ತವ ಪರಿಸ್ಥಿತಿಯನ್ನು ತಿಳಿಯಲು ಗ್ರಾಮ ಮಟ್ಟದಲ್ಲಿ ಸಮೀಕ್ಷೆ ನಡೆಸಬೇಕು. ಪ್ರಸ್ತಾವಿತ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಬರುವ ಗ್ರಾಮಗಳು, ಕಾಫಿ ತೋಟಗಳು, ಕೃಷಿ ಭೂಮಿ ಹಾಗೂ ವಸತಿ ಪ್ರದೇಶಗಳ ವಾಸ್ತವ ಸ್ಥಿತಿಯನ್ನು ದಾಖಲಿಸಿ ಕೇರಳ ಮಾದರಿಯಲ್ಲಿ ವರದಿ ಸಿದ್ಧಪಡಿಸಬೇಕು ಎಂದು ಅಶೋಕ್ ಒತ್ತಾಯಿಸಿದರು.
"ಇದು ಪ್ರಧಾನಿ ನರೇಂದ್ರ ಮೋದಿ ಅವರು ಹೊರಡಿಸಿರುವ ಆದೇಶವಲ್ಲ. ಎನ್ಜಿಟಿ ಆದೇಶದಂತೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳುತ್ತಿದೆ. ಈ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ" ಎಂದು ಅಶೋಕ್ ಹೇಳಿದರು.
ಕೇಂದ್ರಕ್ಕೆ ಮುಖ್ಯಮಂತ್ರಿ ನೇತೃತದಲ್ಲಿ ನಿಯೋಗ ತೆರಳಿ ಈ ಬಗ್ಗೆ ಪ್ರಸ್ತಾಪಿಸಲು ವಿಪಕ್ಷ ಸದಾ ಸಿದ್ಧವಿದೆ ಎಂದು ತಮ್ಮ ಇಂಗಿತ ಪ್ರಕಟಿಸಿದರು. ಕಸ್ತೂರಿರಂಗನ್ ವರದಿ ಜಾರಿಯಾದರೆ ರೈತರು ಹಾಗೂ ನಿವಾಸಿಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಪರಿಸರ ಸಂರಕ್ಷಣೆಯ ಜತೆಗೆ ಜನರ ಜೀವನೋಪಾಯವನ್ನೂ ರಕ್ಷಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಕಸ್ತೂರಿರಂಗನ್ ವರದಿಯಲ್ಲಿ ಕರ್ನಾಟಕದ ೧,೫೭೬ ಗ್ರಾಮಗಳು ಹಾಗೂ ೨೦,೬೬೮ ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವಾಗಿ (ಇಎಸ್‌ಎ) ವ್ಯಾಪ್ತಿಗೆ ಸೇರಿಸಲು ಪ್ರಸ್ತಾಪಿಸಲಾಗಿದೆ. ಪರಿಣಾಮ ಎದುರಿಸಲಿರುವ ರಾಜ್ಯಗಳ ಪೈಕಿ ಕರ್ನಾಟಕದಲ್ಲೇ ಅತಿ ಹೆಚ್ಚು ಪ್ರದೇಶ ಈ ವ್ಯಾಪ್ತಿಯಲ್ಲಿದೆ ಎಂದು ಅಶೋಕ್ ಹೇಳಿದರು.
ಉಪಗ್ರಹ ಚಿತ್ರಗಳನ್ನು ಆಧರಿಸಿ ಪ್ರದೇಶಗಳನ್ನು ಗುರುತಿಸಿರುವುದರಿಂದ ಕೃಷಿ ಭೂಮಿ ಹಾಗೂ ಕಾಫಿ ತೋಟಗಳನ್ನೂ ಅರಣ್ಯ ಪ್ರದೇಶವೆಂದು ಪರಿಗಣಿಸಿರುವುದು ಕಂಡುಬAದಿದೆ ಎಂದು ಅವರು ಮಾಹಿತಿಯಿತ್ತರು. ವರದಿ ಜಾರಿಯಾದರೆ ರಸ್ತೆ ಹಾಗೂ ಸೇತುವೆಗಳ ನಿರ್ಮಾಣ, ದುರಸ್ತಿ, ವಿದ್ಯುತ್ ಸಂಪರ್ಕ, ಮನೆಗಳ ದುರಸ್ತಿ ಮತ್ತು ತೋಟಗಾರಿಕೆ ಸಂಬAಧಿತ ಚಟುವಟಿಕೆಗಳ ಮೇಲೂ ನಿರ್ಬಂಧಗಳು ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆಗಳು ಉತ್ತಮ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.
ಕೋರ್ಟ್ ಆದೇಶಗಳಿಂದ ಕೇಂದ್ರಕ್ಕೆ ನಿರ್ಬಂಧ
ಕಸ್ತೂರಿರAಗನ್ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸುವಂತೆ ಗೋವಾ ಫೌಂಡೇಶನ್ ಹಲವು ಬಾರಿ ನ್ಯಾಯಾಲಯದ ಮೊರೆ ಹೋಗಿದೆ. ಎನ್ಜಿಟಿಯ ನಿರ್ದೇಶನಗಳಿಂದ ಅಧಿಸೂಚಿತ ಪ್ರದೇಶದಲ್ಲಿ ಬದಲಾವಣೆ ಮಾಡಲು ಕೇಂದ್ರ ಸರ್ಕಾರದ ಕ್ರಮಗಳಿಗೆ ನಿರ್ಬಂಧ ಉಂಟಾಗಿದೆ ಎಂದು ಅಶೋಕ್ ಹೇಳಿದರು.
ಈ ವಿಚಾರ ಪರಿಶೀಲಿಸಲು ಕೇಂದ್ರ ಸರ್ಕಾರ ಸಂಜಯ್ ಕುಮಾರ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದು, ಅದರ ಅವಧಿ ೨೦೨೭ರವರೆಗೆ ಇದೆ ಎಂದು ಅವರು ತಿಳಿಸಿದರು.
ಕೇರಳ ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ ಗ್ರಾಮ ಮಟ್ಟದಲ್ಲಿ ಸಮೀಕ್ಷೆ ನಡೆಸಬೇಕು ಎಂದು ಅಶೋಕ್ ಆಗ್ರಹಿಸಿದರು. ಪ್ರತಿ ಗ್ರಾಮದ ಮನೆಗಳು, ತೋಟಗಳು ಹಾಗೂ ಇತರ ಪ್ರದೇಶಗಳನ್ನು ಗುರುತಿಸಿ ಸಮಗ್ರ ವರದಿ ಸಿದ್ಧಪಡಿಸಿ ಅದನ್ನು ಎನ್ಜಿಟಿ ಹಾಗೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಎಂದರು.
"ಈಗ ಏನೂ ಮಾಡದೆ ಸುಮ್ಮನಿದ್ದರೆ ವರದಿ ಖಂಡಿತವಾಗಿಯೂ ಜಾರಿಗೆ ಬರಲಿದೆ" ಎಂದು ಎಚ್ಚರಿಸಿದ ಅವರು, ಈ ಕುರಿತು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು ಎಂದು ಒತ್ತಾಯಿಸಿದರು.
ಸೋಮವಾರ ಸದನದಲ್ಲಿ ನಡೆದ ವಿಶೇಷ ಚರ್ಚೆಯಲ್ಲಿ ಕಾಂಗ್ರೆಸ್ ಸದಸ್ಯ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಕಸ್ತೂರಿ ರಂಗನ್ ವರದಿ ವಿಚಾರವಾಗಿ "ಹಳ್ಳಿ ಪ್ರದೇಶದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಜನರಲ್ಲಿ ಭಯ, ಆತಂಕ ತೀವ್ರವಾಗಿದೆ. ಮಲೆ ನಾಡಿನ ಜನರ ಬದುಕು, ಮಕ್ಕಳ ಭವಿಷ್ಯ ರಕ್ಷಣೆಯ ನಿಟ್ಟಿನಲ್ಲಿ ಚರ್ಚೆ ಆಗಬೇಕಾಗಿದೆ. ರೈತರ ಜೀವನ ಉಳಿಯಬೇಕಾದರೆ ಮತ್ತೆ ಕಸ್ತೂರಿರಂಗನ್ ಕರಡು ಮಸೂದೆ ಬರಬಾರದು. ಕಾಡು, ಪರಿಸರ, ಜೀವ ವೈವಿಧ್ಯ ಉಳಿಯಬೇಕು. ಆದರೆ, ರೈತರ ಬದುಕು ಕೂಡಾ ಉಳಿಯಬೇಕಾಗಿದೆ" ಎಂದರು.
ಕಾAಗ್ರೆಸ್ ಸದಸ್ಯ ಆರ್ ವಿ ದೇಶಪಾಂಡೆ ಮಾತನಾಡಿ, "ಕಸ್ತೂರಿ ರಂಗನ್ ಅವರು ಪಶ್ಚಿಮ ಘಟ್ಟಗಳ ಪ್ರದೇಶಕ್ಕೆ ಭೇಟಿ ಕೊಟ್ಟಿಲ್ಲ. ಉಪಗ್ರಹ ಮೂಲಕ ಸಮೀಕ್ಷೆ ಮಾಡಿದ್ದಾರೆ. ನೂರಾರು ವರ್ಷಗಳಿಂದ ಜನರು ಅರಣ್ಯವಾಸಿಯಾಗಿ ಅಲ್ಲಿನ ಜನ ಜೀವನ ಮಾಡುತ್ತಿದ್ದಾರೆ. ಅಷ್ಟು ವರ್ಷಗಳಿಂದ ಜೀವನ ಮಾಡುತ್ತಿರುವ ಜನ ಎಲ್ಲಿಗೆ ಹೋಗಬೇಕು" ಎಂದು ಪ್ರಶ್ನಿಸಿದರು.
ಅರಣ್ಯ ನಾಶ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಿ. ವಾಸ ಮಾಡುವ ಜನರ ಬಗ್ಗೆ ಚಿಂತನೆ ಮಾಡಿಲ್ಲ. ಸ್ಥಳಕ್ಕೆ ಯಾರೂ ಹೋಗದೆ ಸಮೀಕ್ಷೆ ಮಾಡಿದ್ದಾರೆ. ಹೀಗಾಗಿ ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಪಕ್ಷದವರು ಕಸ್ತೂರಿ ರಂಗನ್ ವರದಿಗೆ ವಿರೋಧ ಮಾಡುತ್ತಿದ್ದಾರೆ. ಅದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಜೆಡಿಎಸ್ ಸದಸ್ಯೆ ಶಾರದಾ ಪೂರ್ಯ ನಾಯ್ಕ್ ಹಾಗೂ ಇನ್ನಿತರ ಅನೇಕ ಮಂದಿ ಮಾತನಾಡಿದರು.
ವಿಧಾನ ಪರಷತ್‌ನಲ್ಲಿಯೂ ದೀರ್ಘ ಚರ್ಚೆ ನಡೆಯಿತು. ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಶಾಸಕ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ರೈತರಿಗೆ ಅನಾವಶ್ಯಕ ತೊಂದರೆ ಕೊಡುವುದನ್ನು ನಿಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದರು. ಇನ್ನೂ ಅನೇಕ ಮಂದಿ ಮಾತನಾಡಿದರು.