ವೀರಾಜಪೇಟೆ, ಸೆ. ೨೧: ವೀರಾಜಪೇಟೆ ಮೂರ್ನಾಡು ರಸ್ತೆಯ ಕಾವೇರಿ ಗಣೇಶೋತ್ಸವ ಸಮಿತಿಯ ವತಿಯಿಂದ ಆಯೋಜಿಸ ಲಾಗಿರುವ ೩೬ನೇ ವರ್ಷದ ಗೌರಿ-ಗಣೇಶೋತ್ಸವದ ಅಂಗವಾಗಿ ನಡೆದ ಸಾಂಸ್ಕöÈತಿಕ ಹಾಗೂ ಧಾರ್ಮಿಕ ವೇದಿಕೆ ಕಾರ್ಯಕ್ರಮವು ಅತ್ಯಂತ ಸಡಗರ-ಸಂಭ್ರಮದಿAದ ಜರುಗಿತು.

ಸಾರ್ವಜನಿಕರ ಅಪಾರ ಜನಸ್ತೋಮದ ನಡುವೆ ನಡೆದ ಈ ಕಾರ್ಯಕ್ರಮವು ಪಟ್ಟಣದಲ್ಲಿ ಹಬ್ಬದ ಕಳೆಯನ್ನು ಇಮ್ಮಡಿಗೊಳಿಸಿತು. ಜ್ಯೋತಿ ಬೆಳಗಿಸುವ ಮೂಲಕ ಅತಿಥಿ ಗಣ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರು, ಶ್ರೀ ಈಶ್ವರ ಇಗ್ಗುತ್ತಪ್ಪ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಮಂಡೇಪAಡ ಕಾಂತಿ ಸತೀಶ್ ಮಾತನಾಡಿ, ಕಾವೇರಿ ಗಣೇಶೋತ್ಸವ ಸಮಿತಿಯ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ ಅನುಭವ ನನಗಿದೆ. ಪ್ರಸ್ತುತ ಈ ಸಮಿತಿಯಲ್ಲಿ ಯುವಕರು ಅತ್ಯಂತ ಉತ್ಸಾಹದಿಂದ ತೊಡಗಿಸಿಕೊಂಡು, ತಮ್ಮ ಸ್ವಂತ ಖರ್ಚು ಹಾಗೂ ಪರಿಶ್ರಮದಿಂದ ಬೃಹತ್ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸುತ್ತಿದ್ದಾರೆ. ಇಂತಹ ಯುವಕರ ಶ್ರಮಕ್ಕೆ ಪ್ರತಿಯೊಬ್ಬರೂ ಕೈಜೋಡಿಸಿ ಬೆಂಬಲಿಸಬೇಕು ಎಂದರು.

ಕಾವೇರಿ ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷರು, ವಕೀಲರಾದ ಟಿ.ಪಿ. ಕೃಷ್ಣ ಮಾತನಾಡಿ, ಈ ಹಿಂದೆ ಕಾವೇರಿ ಗಣೇಶೋತ್ಸವ ಸಮಿತಿಯಲ್ಲಿ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹಿರಿಯರು ಇಂದು ವೇದಿಕೆಯಲ್ಲಿ ಉಪಸ್ಥಿತರಿರುವುದು ಶ್ಲಾಘನೀಯ. ಸಮಿತಿಯ ಯುವಕರು ಮನೆ ಮನೆಗೆ ವಂತಿಗೆಗಾಗಿ ಬಂದಾಗ, ಅವರು ತಮ್ಮ ಸ್ವಂತ ಲಾಭಕ್ಕಾಗಿಯಲ್ಲ, ಬದಲಿಗೆ ಇಡೀ ಊರಿನ ಕಾರ್ಯಕ್ರಮದ ಯಶಸ್ಸಿಗಾಗಿ ಬರುತ್ತವೆ. ಅಂತಹವರನ್ನು ಯಾರೂ ನಿರಾಶೆಗೊಳಿಸದೆ, ಮುಕ್ತಮನಸ್ಸಿನಿಂದ ಪ್ರೋತ್ಸಾಹ ಮತ್ತು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ವಕೀಲರಾದ ಅಂಬಿಕಾ ಉತ್ತಪ್ಪ ಮಾತನಾಡಿ, ಶ್ರೀ ಗಣೇಶನಿಗೆ ಆನೆಯ ಮುಖ ಬಂದ ಹಿನ್ನೆಲೆ ಹಾಗೂ ‘ವಕ್ರತುಂಡ ಮಹಾಕಾಯ ಎಂಬ ನಾಮಧೇಯದ ಮಹತ್ವವನ್ನು ವಿವರಿಸಿದರು.

ವೇದಿಕೆಯಲ್ಲಿ ಉದ್ಯಮಿ ಪಟ್ರಪಂಡ ರಘು ನಾಣಯ್ಯ, ಕಾವೇರಿ ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷರಾದ ಬಟ್ಟೀರ ಡಿಕ್ಕ ಅಚ್ಚಪ್ಪ, ಸರಕಾರಿ ಶಾಲಾ ನಿವೃತ್ತ ಶಿಕ್ಷಕರಾದ ಎ.ವಿ. ವೆಂಕಟೇಶ್, ಉದ್ಯಮಿ ರಾಹುಲ್ ಹಾಗೂ ಮಾಜಿ ಕೌನ್ಸಿಲರ್ ಸುನೀತಾ ಜೂನಾ, ಕಾವೇರಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ನಂಬುಡುಮಾಡ ಆನಂದ್ ನಂಜಪ್ಪ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಮನಸೆಳೆದ ನೃತ್ಯ ಪ್ರದರ್ಶನ

ಕಾರ್ಯಕ್ರಮದ ಭಾಗವಾಗಿ ‘ನಾಟ್ಯಾಂಜಲಿ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕöÈತಿಕ ಹಾಗೂ ಶಾಸ್ತಿçÃಯ ನೃತ್ಯ ಪ್ರದರ್ಶನ ನೆರವೇರಿತು. ಮಕ್ಕಳು ಅಭಿನಯಿಸಿದ ಮನಮೋಹಕ ನೃತ್ಯ ರೂಪಕಗಳು ನೆರೆದಿದ್ದ ವೀಕ್ಷಕರ ಮನಸೊರೆಗೊಂಡವು. ಕಲಾಪ್ರದರ್ಶನ ನೀಡಿ ಜನಮೆಚ್ಚುಗೆ ಗಳಿಸಿದ ಪುಟ್ಟ ಕಲಾವಿದರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಮಿತಿಯ ವತಿಯಿಂದ ಪ್ರೋತ್ಸಾಹಕ ಬಹುಮಾನಗಳನ್ನು ವಿತರಿಸಿ ಗೌರವಿಸಲಾಯಿತು.

ಮೂರ್ನಾಡು ರಸ್ತೆ ಹಾಗೂ ಸುತ್ತಮುತ್ತಲ ಬಡಾವಣೆಗಳ ನೂರಾರು ಸಾರ್ವಜನಿಕರು, ಭಕ್ತಾದಿಗಳು ಹಾಗೂ ಕಲಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಈ ಸಂದರ್ಭ ಶಿನೋಜ್, ಚೇತನ್, ವಿವೇಕ್, ಭುವೇಶ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದ ಸುಸೂತ್ರ ನಿರ್ವಹಣೆಗೆ ಶ್ರಮಿಸಿದರು.ನಾಪೋಕ್ಲು, ಸೆ. ೨೧: ಗೌರಿ ಗಣೇಶೋತ್ಸವದ ಅಂಗವಾಗಿ ಪಟ್ಟಣದ ವಿವಿಧ ಗಣೇಶ ಸೇವಾ ಸಮಿತಿಗಳ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಮೂರ್ತಿಗಳ (ಶೋಭಾ ಯಾತ್ರೆ) ವಿಸರ್ಜನೋತ್ಸವವು ಅತ್ಯಂತ ವಿಜೃಂಭಣೆಯಿAದ ನಡೆಯಿತು.

ವೆಂಕಟರಮಣ ದೇವಸ್ಥಾನದ ಸಮಿತಿ: ಕಕ್ಕುಂದಕಾಡಿನ ವೆಂಕಟರಮಣ ದೇವಸ್ಥಾನದ ಗಣಪತಿ ಸೇವಾ ಸಮಿತಿ ವತಿಯಿಂದ ೨೧ನೇ ವರ್ಷದ ಅದ್ದೂರಿ ಗೌರಿ ಗಣೇಶ ಉತ್ಸವ ನಡೆಯಿತು. ಮಧ್ಯಾಹ್ನ ಮಹಾಪೂಜೆಯ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು. ವಿಟ್ಲದ ಕಲಾ ರಸಿಕರ ಹಾರ್ಟ್ರಂಗ್‌ದ ಮಜಲ್ ತಂಡದಿAದ ಡೊಳ್ಳು ಕುಣಿತ ಹಾಗೂ ಕೀಲು ಗೊಂಬೆ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳ ನೃತ್ಯದೊಂದಿಗೆ ಅಲಂಕೃತ ಮಂಟಪಗಳ ಮೆರವಣಿಗೆ ಸಾಗಿ ಜನಮನ ರಂಜಿಸಿತು. ಈ ಸಂದರ್ಭ ಇಲ್ಲಿಯ ಸಂತೆ ಮೈದಾನದಲ್ಲಿ ಸಾರ್ವಜನಿಕರಿಗೆ ಅನ್ನದಾನವನ್ನು ಏರ್ಪಡಿಸಲಾಗಿತ್ತು.

ಇಂದಿರಾನಗರ ಸಮಿತಿ: ಇಂದಿರಾನಗರ ವಿವೇಕಾನಂದ ಸಂಘದ ಗಣೇಶೋತ್ಸವ ಸೇವಾ ಸಮಿತಿಯ ೨೧ನೇ ವರ್ಷದ ಉತ್ಸವದಲ್ಲಿ ಸ್ಥಳೀಯರಿಂದ ಹಾಡುಗಾರಿಕೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರವಿ ಬಳಗದಿಂದ ‘ಸಂಗೀತ ಸಂಜೆ’ ಜರುಗಿತು.

ಶ್ರೀ ಪೊನ್ನುಮುತ್ತಪ್ಪ ವಿನಾಯಕ ಸೇವಾ ಸಮಿತಿ: ಹಳೆತಾಲೂಕಿನ ಶ್ರೀ ಪೊನ್ನುಮುತ್ತಪ್ಪ ವಿನಾಯಕ ಸೇವಾ ಸಮಿತಿಯ ೧೭ನೇ ವರ್ಷದ ಉತ್ಸವದಲ್ಲಿ ಮಡಿಕೇರಿಯ ತಂಡದಿAದ ಚಲಿಸುವ ಬೃಹತ್ ಗಾತ್ರದ ದೇವತೆ ಹಾಗೂ ರಾಕ್ಷಸರ ಪ್ರತಿರೂಪಗಳನ್ನೊಳಗೊಂಡ ಗಣೇಶನ ಕಥಾವಸ್ತು ಪ್ರದರ್ಶನಗೊಂಡಿತು. ಆದಿವಾಸಿ ಬಳಗದಿಂದ ಕುಣಿತ, ಬೆಂಗಳೂರಿನ ತಂಡದ ಆಕರ್ಷಕ ಲೈಟಿಂಗ್ಸ್, ಸೌಂಡ್ಸ್ ಹಾಗೂ ಸಿಡಿಮದ್ದು ಪ್ರದರ್ಶನ ಸಾರ್ವಜನಿಕರನ್ನು ರೋಮಾಂಚನಗೊಳಿಸಿತು.

ನಾಪೋಕ್ಲುನಾಡು ಗೌರಿ ಗಣೇಶ ಸಮಿತಿ ವತಿಯಿಂದ ಹಳೆತಾಲೂಕಿನ ಭಗವತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಮಂಟಪ ಹಾಗೂ ಶ್ರೀರಾಮ ಟ್ರಸ್ಟ್ ವತಿಯಿಂದ ಸ್ಥಾಪಿಸಲಾಗಿದ್ದ ಗಣೇಶ ಮೂರ್ತಿಯ ಮಂಟಪಗಳು ಮೆರವಣಿಗೆಯ ವೈಭವಕ್ಕೆ ಮೆರುಗು ತಂದವು.

ವಿವಿಧ ಸಮಿತಿಗಳ ಗೌರಿ ಗಣೇಶ ಮೂರ್ತಿಗಳನ್ನು ಆಕರ್ಷಕ ಕಲಾತಂಡಗಳ ವೇಷಭೂಷಣ ಮತ್ತು ನೃತ್ಯದೊಂದಿಗೆ, ಸಾರ್ವಜನಿಕರ ಉಲ್ಲಾಸದ ನಡುವೆ ಅಲಂಕೃತ ವಾಹನಗಳಲ್ಲಿ ಕೊಂಡೊಯ್ದು ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು.

ಗೌರಿ ಗಣೇಶ ಶೋಭಾಯಾತ್ರೆ ಸಂದರ್ಭ ಮುಸ್ಲಿಂ ಬಾಂಧವರು ತಂಪು ಪಾನೀಯ ಹಾಗೂ ಸಿಹಿ ಹಂಚಿ ಸಹಕರಿಸಿದ್ದು ವಿಶೇಷವಾಗಿತ್ತು. ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಎ ಇಸ್ಮಾಯಿಲ್, ಬ್ಲೂ ಬಾಯ್ಸ್ ತಂಡ ನಾಪೋಕ್ಲು ಅಬ್ದುಲ್ಲ, ನೌಫಲ್, ಫಾರೂಕ್, ಹಾರಿಸ್, ನೌಶಾದ್, ಶಫೀಕ್, ರಝಕ್, ಸೌಕಾತ್, ಝುಬೈರ್, ಇಶಾಕ್, ರಫೀಕ್, ರಿಜ್ವಾನ್, ನೌಫಲ್, ನೌಶದ್ ಮತ್ತು ಮನ್ಸೂರ್, ರಜಾಕ್ ಇನ್ನಿತರರು ಸಹಬಾಳ್ವೆಗೆ ಸಾಕ್ಷಿಯಾದರು. ಕಾರ್ಯಕ್ರಮದಲ್ಲಿ ವಿವಿಧ ಸೇವಾ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನಸ್ತೋಮಕ್ಕೆ ಪೊಲೀಸ್ ಇಲಾಖೆಯ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.