ವೀರಾಜಪೇಟೆ, ಸೆ. ೨೧: ಬಾಳುಗೋಡು ಅಂಬಟ್ಟಿ ಗ್ರಾಮದ ಶ್ರೀ ವಿಜಯ ವಿಘ್ನೇಶ್ವರ ಸೇವಾ ಸಮಿತಿ ವತಿಯಿಂದ ಅಂಬಟ್ಟಿಯಲ್ಲಿ ಆಯೋಜಿಸಲಾಗಿದ್ದ ೨ನೇ ವರ್ಷದ ಗೌರಿ ಗಣೇಶೋತ್ಸವ ವಿಜೃಂಭಣೆಯಿAದ ನಡೆಯಿತು.

ಶ್ರೀ ವಿಜಯ ವಿಘ್ನೇಶ್ವರ ಸೇವಾ ಸಮಿತಿಯ ಅಧ್ಯಕ್ಷರಾದ ಎನ್.ಸಿ. ವಿಜಯಕುಮಾರ್ ನೇತೃತ್ವದಲ್ಲಿ ಶಾಸ್ತೊçÃಕ್ತವಾಗಿ ಶ್ರೀ ವಿಘ್ನೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಸತತ ಐದು ದಿನಗಳ ಕಾಲ ಪ್ರತಿದಿನ ರಾತ್ರಿ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ಮಾದಂಡ ತಿಮ್ಮಯ್ಯ ಹಾಗೂ ಶುಷ್ಮ ಕುಟುಂಬಸ್ಥರ ಸೇವಾರ್ಥವಾಗಿ ಬೃಹತ್ ಅನ್ನಸಂತರ್ಪಣೆ ನೆರವೇರಿತು. ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಭಕ್ತಾದಿಗಳು ತೀರ್ಥ-ಪ್ರಸಾದ ಸ್ವೀಕರಿಸಿದರು.

ಸಂಜೆ ಮಹಾಪೂಜೆಯ ನಂತರ ಕಣ್ಣು ವಿದ್ಯುತ್ ದೀಪಾಲಂಕಾರ ಹಾಗೂ ವಾದ್ಯಮೇಳದೊಂದಿಗೆ ವಿಘ್ನೇಶ್ವರ ಮೂರ್ತಿಯ ಶೋಭಾಯಾತ್ರೆ ಆರಂಭವಾಯಿತು. ಶೋಭಾಯಾತ್ರೆಯು ಬಿಟ್ಟಂಗಾಲ ಜಂಕ್ಷನ್ ಹಾಗೂ ಕೇರಳ ಬಾಳುಗೋಡು ರಸ್ತೆಯ ಮೂಲಕ ವೈಭವದಿಂದ ಸಾಗಿ, ಕುಪ್ಪಂಡ ಸಂದೇಶ್ ಅವರ ಕೆರೆಯಲ್ಲಿ ಮೂರ್ತಿಯನ್ನು ವಿಸರ್ಜಿಸಲಾಯಿತು.

ಸಮಿತಿಯ ಅಧ್ಯಕ್ಷರಾದ ಎನ್.ಸಿ. ವಿಜಯಕುಮಾರ್ ನೇತೃತ್ವದಲ್ಲಿ ವಿಸರ್ಜನೋತ್ಸವ ಯಶಸ್ವಿಯಾಗಿ ನಡೆಯಿತು.

ಉಪಾಧ್ಯಕ್ಷರಾದ ಅಟ್ರಂಗಡ ವಿಶ್ವನಾಥ್, ಕಾರ್ಯದರ್ಶಿ ಪ್ರಮೋದ್, ಸಹ ಕಾರ್ಯದರ್ಶಿ ಹೇಮ, ಖಜಾಂಚಿ ಚೇಂದAಡ ಗಣೇಶ್, ಸದಸ್ಯ ಚೇಂದAಡ ಸುರೇಶ್, ವಿಜಯ, ಕುಶಾಲಪ್ಪ, ಚರಣ್, ಜಾಜಿ, ರಾಧಕೃಷ್ಣ, ಅಮ್ಮಿ, ರಾಜೇಶ್, ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.