ಮಡಿಕೇರಿ, ಸೆ. ೨೧: ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ ಮಡಿಕೇರಿ ೨೦೨೫-೨೦೨೬ನೇ ಸಾಲಿನಲ್ಲಿ ರೂ. ೬೭.೪೯ ಲಕ್ಷ ನಿವ್ವಳ ಲಾಭ ಗಳಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂಘದ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಹುಣಸೂರಿನಲ್ಲಿ ವ್ಯಾಪಾರ ವಹಿವಾಟಿನಿಂದ ರೂ. ೯೬.೭೩ ಲಕ್ಷ ಮತ್ತು ಹೆಬ್ಬಾಲೆ ಉದ್ಯಮದ ವ್ಯಾಪಾರ ವಹಿವಾಟಿನಿಂದ ಒಟ್ಟು ರೂ. ೨೦.೪೪ ಲಕ್ಷಗಳ ವ್ಯಾಪಾರ ಆದಾಯ ಗಳಿಸಿದ್ದು, ಹುಣಸೂರು ಉದ್ಯಮ ಹಾಗೂ ಹೆಬ್ಬಾಲೆ ಉದ್ಯಮ ಸೇರಿ ಒಟ್ಟಾಗಿ ರೂ. ೧೧೭.೧೭ (ಒಂದು ಕೋಟಿ ಹದಿನೇಳು ಲಕ್ಷದ ಹದಿನೇಳು ಸಾವಿರ) ನಿವ್ವಳ ಲಾಭಾಂಶ ಗಳಿಸಿದೆ. ಮುಖ್ಯ ಕಚೇರಿಯ ರೂ. ೪೯.೬೭ ಲಕ್ಷ ನಷ್ಟವನ್ನು ಕಳೆದು ಒಟ್ಟು ರೂ. ೬೭.೪೯ ಲಕ್ಷ ನಿವ್ವಳ ಲಾಭಾಂಶ ಗಳಿಸಿದೆ ಎಂದು ತಿಳಿಸಿದರು.

ಸದಸ್ಯತ್ವ ಹಾಗೂ ಪಾಲು ಹಣ

ಸಂಘದಲ್ಲಿ ಒಟ್ಟು ೯೨೩೨ ಜನ ಸದಸ್ಯರಿದ್ದು ಅದರಲ್ಲಿ ೨೮೩೯ ಸದಸ್ಯರುಗಳು ಸಂಪೂರ್ಣ ಪಾಲು ಹಣ ಹೊಂದಿರುತ್ತಾರೆ. ತಾ. ೩೧.೦೩.೨೦೨೬ಕ್ಕೆ ಸದಸ್ಯರಿಂದ ಒಟ್ಟು ರೂ. ೧೨೬.೯೦ ಲಕ್ಷ ಹಾಗೂ ರಾಜ್ಯ ಸರ್ಕಾರದ ರೂ. ೩೦೪.೭೮ ಲಕ್ಷಗಳು ಸೇರಿ ಒಟ್ಟು ರೂ. ೪೩೧.೬೮ ಲಕ್ಷ ಪಾಲು ಬಂಡವಾಳವಿರುತ್ತದೆ. ಹಿಂದಿನ ಮಹಾಸಭೆಯ ನಿರ್ಣಯ ಹಾಗೂ ತಿದ್ದುಪಡಿಗೊಂಡಿರುವ ಬೈಲಾದ ಪ್ರಕಾರ ಸಂಘದ ಎ ತರಗತಿ ಸದಸ್ಯತ್ವದ ಪಾಲು ಹಣವನ್ನು ರೂ. ೫೦೦ ರಿಂದ ರೂ. ೨೦೦೦ಕ್ಕೆ ಪರಿಷ್ಕರಿಸಲಾಗಿದೆ ಎಂದು ತಿಳಿಸಿದರು.

ಸಂಘದ ವ್ಯವಹಾರಗಳು

ಸಂಘದ ಹುಣಸೂರು ಹಾಗೂ ಹೆಬ್ಬಾಲೆಯಲ್ಲಿ ಪೆಟ್ರೋಲ್ ಬಂಕ್ ವ್ಯವಹಾರ ನಡೆಸುತ್ತಿದ್ದು, ಹುಣಸೂರಿನಲ್ಲಿ ರೂ. ೨೫೮೧.೧೮ ಲಕ್ಷದ ವ್ಯವಹಾರ ನಡೆಸಿ ವಾರ್ಷಿಕವಾಗಿ ರೂ. ೪೭.೫೮ ಲಕ್ಷ ವಾರ್ಷಿಕ ಆದಾಯಗಳಿಸಿದೆ. ಹೆಬ್ಬಾಲೆಯಲ್ಲಿ ರೂ. ೭೬೯.೫೪ ಲಕ್ಷದ ವಾರ್ಷಿಕ ವ್ಯವಹಾರ ನಡೆಸಿದ್ದು ವಾರ್ಷಿಕವಾಗಿ ರೂ. ೧೯.೮೩ ಲಕ್ಷ ಆದಾಯ ಗಳಿಸಿದೆ. ಕಾಫಿ ಪುಡಿ ವ್ಯವಹಾರದಲ್ಲಿ ಒಟ್ಟು ೫೧೪೭ ಕೆ.ಜಿ. ಮಾರಾಟ ಮಾಡಿ ರೂ. ೫.೫೫ ಲಕ್ಷ ನಿವ್ವಳ ಲಾಭ ಗಳಿಸಲಾಗಿದೆ. ಕಾಫಿ ಸಂಸ್ಕರಣಾ ವ್ಯವಹಾರದಿಂದ ಒಟ್ಟು ರೂ. ೨.೩೦ ಲಕ್ಷ, ಜೇನು ಮಾರಾಟದಿಂದ ರೂ. ೪೧೭೭೮ ಆದಾಯ ದೊರೆತಿದೆ, ಸಂಘದ ಅವಶ್ಯಕ್ಕಿಂತ ಹೆಚ್ಚುವರಿ ಇರುವ ಕಟ್ಟಡಗಳನ್ನು ಬಾಡಿಗೆಗೆ ನೀಡಿದ್ದು, ಮುಖ್ಯ ಕಚೇರಿಯಲ್ಲಿ ರೂ. ೨೬.೬೪ ಲಕ್ಷ, ಹುಣಸೂರಿನಲ್ಲಿ ರೂ. ೮೫.೯೩ ಲಕ್ಷ ಹಾಗೂ ಹೆಬ್ಬಾಲೆಯಲ್ಲಿ ರೂ. ೭.೭೩ ಲಕ್ಷಗಳು ಸೇರಿ ಒಟ್ಟು ರೂ. ೧೨೩.೩೫ ಲಕ್ಷ (ಒಂದು ಕೋಟಿ ಇಪ್ಪತ್ತಮೂರು ಲಕ್ಷದ ಮೂವತ್ತೆöÊದು ಸಾವಿರ) ಬಾಡಿಗೆ ಆದಾಯ ಗಳಿಸಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.

ಸಾಲದ ವಿವರ

ಸಂಘವು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿAದ ಪಡೆದುಕೊಂಡಿದ್ದ ಅಲ್ಪಾವಧಿ ಫಸಲು ಸಾಲದ ಅಸಲು ರೂ. ೧.೯೦,೬೧.೫೮೨ ಮತ್ತು ಅದರ ಬಡ್ಡಿ ರೂ. ೧,೯೭,೨೫,೫೪೬ ಸೇರಿ ಒಟ್ಟು ರೂ. ೩,೮೭,೮೭,೧೨೮ ಪಾವತಿಸಲು ಬಾಕಿ ಇದ್ದು, ಸಂಘವು ಬಡ್ಡಿಯನ್ನು ಮನ್ನಾ ಮಾಡಿ ಅಸಲು ಮೊಬಲಗನ್ನು ಕಂತುಗಳ ಮುಖಾಂತರ ಪಾವತಿಸಲು ಅವಕಾಶ ನೀಡುವಂತೆ ಕೋರಿಕೊಂಡಿದ್ದ ಮೇರೆ ಬ್ಯಾಂಕಿನವರು ಸಾಲದ ಅಸಲು ರೂ. ೧,೯೦,೬೧,೫೮೨ ಮತ್ತು ಶೇ. ೫೦ ರಷ್ಟು ಬಡ್ಡಿ ರೂ. ೧,೦೯,೬೩,೯೫೨ ಸೇರಿ ಒಟ್ಟು ರೂ. ೩,೦೦,೨೫,೫೩೪ ಅನ್ನು ೯೭ ಮಾಸಿಕ ಕಂತುಗಳಲ್ಲಿ ಮಾಸಿಕ ರೂ. ೩.೧೧,೦೦೦ರಂತೆ ಪಾವತಿಸಲು ಅವಕಾಶ ನೀಡಿರುವ ಪ್ರಕಾರ ಮಾಸಿಕ ರೂ. ೩,೧೧,೦೦೦ಗಳನ್ನು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ಪಾವತಿಸಲಾಗಿದೆ. ತಾ. ೩೧.೦೩.೨೦೨೬ ರವರೆಗೆ ಅಸಲು ರೂ. ೨,೮೦,೬೪,೮೮೬ ಪಾವತಿಸಲಾಗಿದ್ದು, ರೂ. ೧೯,೬೦,೬೪೮ ಅಸಲು ಪಾವತಿಗೆ ಬಾಕಿ ಇದ್ದುದು ಸೇರಿ ಒಟ್ಟು ರೂ. ೨೩,೦೦,೪೯೩.೪೦ ಅನ್ನು ಸಂಪೂರ್ಣ ಪಾವತಿ ಮಾಡಲಾಗಿದೆ. ಬ್ಯಾಂಕ್‌ನಲ್ಲಿ ಸಾಲ ಇದ್ದುದರಿಂದ ದಾಖಲೆಗಳನ್ನು ನೀಡಲಾಗಿತ್ತು. ಇದರಿಂದಾಗಿ ಇತರ ಬ್ಯಾಂಕ್‌ಗಳಿAದ ಸಾಲ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಸಾಲ ಸಂಪೂರ್ಣ ಮರು ಪಾವತಿಯಾಗಿರುವದರಿಂದ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಅಭಿವೃದ್ಧಿ ಕೆಲಸಗಳು ಹುಣಸೂರು ಉದ್ದಿಮೆಯಲ್ಲಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಕಂಪೆನಿಯ ಮುಖಾಂತರ ವಿದ್ಯುತ್ ಚಾಲಿತ ವಾಹನಗಳಿಗೆ ಚಾರ್ಜಿಂಗ್ ಸ್ಟೇಷನ್ ಪ್ರಾರಂಭಿಸಲಾಗಿದೆ.

ಹುಣಸೂರು ಉದ್ದಿಮೆ ಘಟಕ-೨ ಹೆಬ್ಬಾಲೆಯಲ್ಲಿನ ೧,೫೧,೦೦೦ ಚದರ ಅಡಿ ವಿಸ್ತೀರ್ಣದ ಗೋದಾಮುಗಳನ್ನು ಕಾಫಿ ಸಂಸ್ಕರಣಾ ಹಾಗೂ ಕಾಫಿ ವ್ಯವಹಾರ ನಡೆಸಲು ಮಾಸಿಕ ರೂ. ೫,೦೦,೦೦೦ ಲಕ್ಷಕ್ಕೆ ಬಾಡಿಗೆಗೆ ನೀಡಲಾಗಿದೆ. ಸಂಘದ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗಲು ಸಂಘದ ೩ ಶಾಖೆಗಳಿಗೆ ಸಹಕಾರಿಯಾಗುವಂತೆ ಸಾಫ್ಟ್ವೇರ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸುರೇಶ್, ಮಾಜಿ ಅಧ್ಯಕ್ಷ ಎಂ.ಬಿ. ದೇವಯ್ಯ, ನಿರ್ದೇಶಕರುಗಳಾದ ವರದರಾಜೇ ಅರಸ್, ಕಡ್ಲೇರ ತುಳಸಿ ಮೋಹನ್, ಸಂದೀಪ್ ಇದ್ದರು.