ಸೋಮವಾರಪೇಟೆ, ಸೆ. ೨೦: ಚೌಡ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ ರೂ. ೩೧.೮೫ ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಟಿ. ಪರಮೇಶ್ ತಿಳಿಸಿದರು.
ಚೌಡ್ಲು ಸಹಕಾರ ಭವನದಲ್ಲಿ ಆಯೋಜಿಸಿದ್ದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ೨೦೨೫-೨೬ನೇ ಸಾಲಿನಲ್ಲಿ ಕೆ.ಸಿ.ಸಿ.ಸಾಲ ೯೨೦ ಸದಸ್ಯರಿಗೆ ರೂ.೧೯.೯೬ ಲಕ್ಷ ಮತ್ತು ಅಡಮಾನ ಸಾಲ ೩೨೯ ಸದಸ್ಯರಿಗೆ ರೂ. ೩.೯೨ ಲಕ್ಷ ವಿತರಿಸಲಾಗಿದೆ ಎಂದರು.
ಸದಸ್ಯರು ತಮ್ಮ ಕೆ.ಸಿ.ಸಿ.ಸಾಲವನ್ನು ೩೬೫ದಿನಗಳೊಳಗೆ ಪಾವತಿಸಿ ಸರ್ಕಾರದ ಬಡ್ಡಿ ಸಹಾಯಧನ ಪಡೆದುಕೊಳ್ಳಲು ಮುಂದಾಗಬೇಕು ಎಂದ ಅವರು, ಸದಸ್ಯರಿಗೆ ಗೊಬ್ಬರ ಸಾಲವಾಗಿ ರೂ.೧.೬೫ ಲಕ್ಷ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಘದಿAದಲೇ ಹೆಚ್ಚಿಗೆ ಗೊಬ್ಬರ ಖರೀದಿಸುವಂತೆ ಮನವಿ ಮಾಡಿದರು. ಒಟ್ಟಾರೆ ಲಾಭಾಂಶವು ಈ ವರ್ಷ ರೂ.೩೫,೮೧,೨೯೯ ಬಂದಿದ್ದು ಕಳೆದ ವರ್ಷಕ್ಕಿಂತ ಈ ವರ್ಷ ರೂ. ೮,೫೧.೭೭೩ ಹೆಚ್ಚಾಗಿದೆ. ಆರ್.ಟಿ.ಸಿ. ಸರಿಯಿಲ್ಲದೆ ಸದಸ್ಯರು ಅಡಮಾನ ಸಾಲಕ್ಕೆ ವರ್ಗಾಯಿಸಿ ಸರ್ಕಾರದ ಶೂನ್ಯ ಬಡ್ಡಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಮಾರ್ಚ್ ಅಂತ್ಯಕ್ಕೆ ೨೭೩೧ ಸದಸ್ಯರಿಗೆ ಶೇ ೮ ರಂತೆ ಡಿವಿಡೆಂಡ್ನ್ನು ನೀಡಲು ತೀರ್ಮಾನಿಸಿರುವುದಾಗಿ ಮಾಹಿತಿ ನೀಡಿದರು.
ಸಂಘದಲ್ಲಿ ಮರಣ ನಿಧಿ ಸೌಲಭ್ಯ ಒದಗಿಸಲಾಗಿದೆ. ಸಹಕಾರ ಸಂಘಗಳಲ್ಲಿ ಸಾಲ ಕೊಡುವ ವ್ಯವಸ್ಥೆಯು ಗಣಕೀಕರಣಗೊಂಡಿದ್ದು ಸರ್ಕಾರದ ಸಹಕಾರ ನಿಯಮದಂತೆ ಎಲ್ಲಾ ಸದಸ್ಯರು ಮೊದಲು ಕೃಷಿ ಇಲಾಖೆಯಿಂದ ಎಫ್.ಐ.ಡಿ. ಮಾಡಿಸಿ ಸಾಲ ಪಡೆಯಬೇಕೆಂದು ತಿಳಿಸಿದರು.
ಕೆ.ಸಿ.ಸಿ. ಸಾಲ ಪಡೆಯುವ ಸದಸ್ಯರು ಸಂಘದಲ್ಲೇ ಕಾವೇರಿ ೨ ತಂತ್ರಾAಶದಲ್ಲಿ ನೋಂದಣಿ ಮಾಡುತ್ತಿದ್ದು ಸಂಘದಲ್ಲಿ ಈಗಾಗಲೇ ೧೧೬೦ ಸದಸ್ಯರು ನೋಂದಣೆ ಮಾಡಿಸಿದ್ದಾರೆ. ಉಳಿದ ಕೆ.ಸಿ.ಸಿ. ಸಾಲದ ಸದಸ್ಯರು ತಮ್ಮ ಆರ್.ಟಿ.ಸಿ.ಯನ್ನು ಉಪನೋಂದಣಿ ಕಛೇರಿಯಲ್ಲಿ ಸಾಮಾನ್ಯ ಅಡಮಾನ ಮಾಡಿದ ನಂತರ ಸರ್ಕಾರದ ಬಡ್ಡಿ ಸೌಲಭ್ಯ ದೊರೆಯುವುದರಿಂದ ಕಡ್ಡಾಯವಾಗಿ ಎಲ್ಲಾ ಸದಸ್ಯರು ನೋಂದಣಿ ಮಾಡಿಸಬೇಕೆಂದು ಮನವಿ ಮಾಡಿದರು.
ಸಹಕಾರ ಸಂಘಗಳು ಸದಸ್ಯರ ಸಹಕಾರದಿಂದ ಮಾತ್ರ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಪಡೆದ ಸಾಲವನ್ನು ನಿಯಮಿತವಾಗಿ ಪಾವತಿಸಬೇಕು. ಇದರೊಂದಿಗೆ ಸಂಘದ ಮೂಲಕ ಲಭ್ಯವಿರುವ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ತಿಳಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಎ.ಜೆ. ಕೃಷ್ಣಪ್ಪ, ನಿರ್ದೇಶಕರುಗಳಾದ ಜಾನಕಿ ವೆಂಕಟೇಶ್, ಕೆ.ಪಿ. ಭಾನುಪ್ರಕಾಶ್, ವಿ. ಹರೀಶ್, ಪದ್ಮಾವತಿ, ಸಿ.ಎಸ್. ಧರ್ಮಪ್ಪ, ಹೆಚ್.ಆರ್. ಪೃಥ್ವಿ, ವಿ.ಜೆ. ಭಾರತಿ, ಸಿ.ಕೆ. ರಾಘವೇಂದ್ರ, ಡಿ.ಎಸ್. ಸುರೇಶ್ ರಘು, ಹೆಚ್.ಹೆಚ್. ಹೂವಯ್ಯ, ಕೆ.ಡಿ.ಸಿ.ಸಿ. ಬ್ಯಾಂಕ್ ಮೇಲ್ವಿಚಾರಕ ವಿ.ಸಿ. ಅಜಿತ್ ಅವರುಗಳು ಇದ್ದರು.