ಮುಳ್ಳೂರು, ಸೆ. ೨೦: ಸಹಕಾರಿ ಸಂಘದ ಸದಸ್ಯರ ಸಲಹೆ ಸಹಕಾರದಿಂದ ಸಂಘವು ಅಭಿವೃದ್ದಿ ಹೊಂದಲು ಪೂರಕವಾಗುತ್ತದೆ ಎಂದು ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಎನ್.ಮಲ್ಲೇಶ್ ಅಭಿಪ್ರಾಯಪಟ್ಟರು.

ನಿಡ್ತ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಂಘದ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಕಾಲದಲ್ಲಿ ಸಾಲ ಮರು ಪಾವತಿಸುವುದರಿಂದ ಸಂಘವು ಅಭಿವೃದ್ಧಿ ಸಾಧಿಸುತ್ತದೆ. ಸಂಘವು ಈ ಸಾಲಿನಲ್ಲಿ ರೂ.. ೩೮ ಲಕ್ಷಕ್ಕೂ ಹೆಚ್ಚು ನಿವ್ವಳ ಲಾಭಗಳಿಸಿದ್ದು ಮುಂದಿನ ದಿನದಲ್ಲಿ ಮತ್ತಷ್ಟು ಲಾಭಗಳಿಸಲು ಎಲ್ಲಾ ಸದಸ್ಯರ ಸಹಕಾರ ಬೇಕೆಂದು ಕೋರಿದರು.

ಶನಿವಾರಸಂತೆ ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ತುಂಗರಾಜ್ ಮಾತನಾಡಿ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ೬೦ ಲಕ್ಷದವರೆಗೆ ಕೃಷಿ ಸಾಲ ನೀಡುತ್ತದೆ. ಕೃಷಿ ಸಂಬAಧಿತ ಸಾಲಗಳಿಗೆ ಶೇ೩ ರಷ್ಟು ಸಬ್ಸಿಡಿ ನೀಡುತ್ತದೆ. ರೈತರು, ಸಹಕಾರಿ ಸದಸ್ಯರು ಇವುಗಳನ್ನು ಸದುಪಯೋಗಿಸಿಕೊಳ್ಳುವಂತೆ ಮನವಿ ಮಾಡಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಇ.ಹೂವಣ್ಣ ವಾರ್ಷಿಕ ವರದಿ ಮಂಡಿಸಿದರು ಸಂಘದ ಹಿರಿಯ ಲೆಕ್ಕಾಧಿಕಾರಿ ಹೆಚ್.ಆರ್.ಧರಣಿ ಲೆಕ್ಕ ಪರಿಶೋಧನಾ ವರದಿ ಮಂಡಿಸುತ್ತಾ, ನಿಡ್ತ ಕೃಷಿ ಪತ್ತಿನ ಸಂಘದಲ್ಲಿ ೨೬೫೭ ಮಂದಿ ಸದಸ್ಯರಿದ್ದು ಸದಸ್ಯರ ಶೇರು ಹಣ ೧.೯೮ ಕೋಟಿ, ಡಿಸಿಸಿ ಬ್ಯಾಂಕ್ ಪಾಲು ಹಣ ರೂ. ೮೬ ಲಕ್ಷ, ಸಂಘದ ಕ್ಷೇಮ ನಿಧಿ ೯೫.೧೯ ಲಕ್ಷವಿದೆ ಎಂದರು ಸಂಘವು ಒಟ್ಟು ರೂ. ೧೬.೮೦ ಕೋಟಿ ಸಾಲ ವಿತರಿಸಿದ್ದು ಈ ಪೈಕಿ ಡಿಸಿಸಿ ಬ್ಯಾಂಕ್‌ನಿAದ ರೂ. ೧೬.೨೫ ಲಕ್ಷ ಕೋಟಿ ಸಾಲ ಪಡೆಯಲಾಗಿದೆ ಸಂಘವು ರೂ. ೩೮.೨೭ ಲಕ್ಷ ನಿವ್ವಳ ಲಾಭಗಳಿಸಿದೆ ಎಂದರು.

ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಎಸ್.ಎ. ಪೂಜಾ ನಿರ್ದೇಶಕರಾದ ಡಿ.ಬಿ. ಧರ್ಮಪ್ಪ, ಜಿ.ಜಿ. ಪರಮೇಶ್, ಎಸ್.ಎಂ. ಉಮಾಶಂಕರ್, ವೆಂಕಟೇಶ್, ಎನ್.ಆರ್. ಪುಟ್ಟಯ್ಯ, ಹೆಚ್.ಪಿ. ಮೋಹನ್, ಎಸ್.ಆರ್.ಕಾರ್ತಿಕ್, ಬಿ.ವಿ. ಸುಜಾತ, ಎಚ್.ಎಂ. ರಾಜ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕಿ ಎಂ.ಕೆ. ಲಲಿತ ಹಾಗೂ ಸಂಘದ ಸಿಬ್ಬಂದಿ ಹಾಜರಿದ್ದರು.