ಐಗೂರು, ಸೆ. ೧೯: ನೇಪಾಳದ ಕಟ್ಮಂಡುವಿನಲ್ಲಿ ನಡೆದ ಮೂರನೇ ವರ್ಲ್ಡ್ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಭಾರತ ತಂಡದ ಪರವಾಗಿ ಭಾಗವಹಿಸಿದ್ದ ಕೊಡಗು ಜಿಲ್ಲೆಯ ನಾಲ್ಕು ಜನ ಕ್ರೀಡಾಪಟುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಐಗೂರಿನ ಮುತ್ತಪ್ಪ ದೇವಾಲಯದ ಆವರಣದಲ್ಲಿ ಐಗೂರಿನ ಭಗತ್ ಸಿಂಗ್ ರಾಷ್ಟçಪ್ರೇಮಿ ಯುವಕ ಸಂಘದ ವತಿಯಿಂದ ನಡೆದ ಕಾರ್ಯಕ್ರಮವು ಸೌಹಾರ್ದತೆಗೆ ಮಾದರಿಯಾಯಿತು. ಬೆಳ್ಳಿಯ ಪದಕ ಪಡೆದ ಕಾಜೂರು ಗ್ರಾಮದ ಎಂ.ಕೆ. ಮೋಹನ್ ಸುನಿತಾ ದಂಪತಿ ಪುತ್ರ ಅತ್ತೂರು ಜ್ಞಾನ ಗಂಗಾ ವಸತಿ ಶಾಲೆಯ ವಿದ್ಯಾರ್ಥಿ ಮನ್ವಿತ್ ಮೋಹನ್, ಚಿನ್ನದ ಪದಕ ಪಡೆದ ಗರಗಂದೂರು ಗ್ರಾಮದ ಆಶಾ ಚಂಗಪ್ಪ ದಂಪತಿ ಪುತ್ರ ಯು.ಸಿ. ಕೌಶಿಕ್ ಕುಮಾರ್, ಚಿನ್ನದ ಪದಕ ಪಡೆದ ಬಜೆಗುಂಡಿಯ ಖಾದರ್ ಅವರ ಪುತ್ರ ಸೋಮವಾರಪೇಟೆಯ ಜಿಎಂಪಿ ಶಾಲೆಯ ವಿದ್ಯಾರ್ಥಿ ಹಫೀಸ್ ಮತ್ತು ಚಿನ್ನದ ಪದಕ ಪಡೆದ ಬಜೆಗುಂಡಿಯ ರಶೀದ್ ಅವರ ಪುತ್ರ ಸೋಮವಾರಪೇಟೆಯ ಓಎಲ್‌ವಿ ಶಾಲೆಯ ವಿದ್ಯಾರ್ಥಿ ಯಾಸಿನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಕರ್ನಾಟಕ ಮಿಕ್ಸ್ ಬಾಕ್ಸಿಂಗ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಹಾಗೂ ಶಿಕ್ಷಕ ಎನ್.ಸಿ ಸುದರ್ಶನ್, ಭಗತ್ ಸಿಂಗ್ ರಾಷ್ಟçಪ್ರೇಮಿ ಯುವಕ ಸಂಘದ ಸದಸ್ಯರು ಮತ್ತು ಗ್ರಾಮಸ್ಥರು ಇದ್ದರು.