ನಾಪೋಕ್ಲು, ಸೆ. ೧೯: ಮಡಿಕೇರಿ ಗ್ರಾಮಾಂತರ ಒಬಿಸಿ ಮೋರ್ಚಾದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಾಚರಣೆ ಆಚರಿಸಲಾಯಿತು.

ನಾಪೋಕ್ಲುವಿನಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸಮಾರಂಭದ ಭಾಗವಾಗಿ ಪ್ರಥಮವಾಗಿ ನಾಪೋಕ್ಲುವಿನ ಶ್ರೀ ಭಗವತಿ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ವಿಶೇಷ ಅರ್ಚನೆ ಹಾಗೂ ಮಹಾ ಮಂಗಳಾರತಿ ನೆರವೇರಿಸಲಾಯಿತು.

ನಂತರ, ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕೊಡುಗೆ ನೀಡಿದ ಹಿರಿಯರನ್ನು ಗೌರವಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ನಾಪೋಕ್ಲುವಿನ ಹಿಂದೂ ರುದ್ರಭೂಮಿಯ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿದ್ದಲ್ಲದೆ, ಗಿಡಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ರವಿ ಕಾಳಪ್ಪ, ಜಿಲ್ಲಾ ಕಾರ್ಯದರ್ಶಿ ಉಮಾ, ಹಿಂದುಳಿದ ವರ್ಗಗಳ (ಒಬಿಸಿ) ಮೋರ್ಚಾದ ಜಿಲ್ಲಾ ಅಧ್ಯಕ್ಷರಾದ ಕೊಲೆಯಂಡ ಗಿರೀಶ್, ಮಡಿಕೇರಿ ಗ್ರಾಮಾಂತರ ಮಂಡಲದ ಒಬಿಸಿ ಅಧ್ಯಕ್ಷರಾದ ಬಿ. ಎಂ. ಪ್ರತೀಪ್, ಕಾರ್ಯದರ್ಶಿ ಭೀಮಯ್ಯ, ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಜಗದೀಶ್, ಸಮಿತಿಯ ಸದಸ್ಯರು ಹಾಗೂ ಪಕ್ಷದ ಪ್ರಮುಖ ನಾಯಕರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.ಸೋಮವಾರಪೇಟೆ, ಸೆ. ೧೯: ಕೊಡಗು ಯುವ ಸೇನೆಯ ಸೋಮವಾರಪೇಟೆ ತಾಲೂಕು ಘಟಕದ ವತಿಯಿಂದ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ವಿದ್ಯಾಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭ ಆಟೋ ಚಾಲಕರ ಸಂಘದ ಮಾಜಿ ಅಧ್ಯಕ್ಷ ಗಂಗಾಧರ್ ಮಾತನಾಡಿ, ಕಳೆದ ೨೫ ವರ್ಷಗಳಿಂದ ದಣಿವರಿಯದೆ ದೇಶದ ಕಾಯಕವನ್ನು ಪ್ರಧಾನ ಸೇವಕನಂತೆ ಮಾಡುತ್ತಿರುವ ಪ್ರಧಾನಿ ಮೋದಿಯವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಈ ಸಂದರ್ಭ ಕೊಡಗು ಯುವಸೇನೆಯ ಜಿಲ್ಲಾ ಉಪಾಧ್ಯಕ್ಷ ಎಡವಾರೆ ಮಂಜುನಾಥ್, ತಾಲೂಕು ಅಧ್ಯಕ್ಷ ತೋಳೂರುಶೆಟ್ಟಳ್ಳಿ ಶೇಖರ್, ಕಾರ್ಯದರ್ಶಿ ಪ್ರಭಾ, ಆಟೋ ಚಾಲಕರ ಸಂಘದ ಮಾಜಿ ಅಧ್ಯಕ್ಷ ಸಿ.ಡಿ.ನೆಹರು, ಪದಾಧಿಕಾರಿಗಳಾದ ವೆನಿಲ್ ಅಮ್ಮಣ್ಣ, ಬಜೆಗುಂಡಿ ಗಣೇಶ್, ತೇಜು, ಎಲೈಸಿ ರಾಜು , ಹಾನಗಲ್ ಗಣೇಶ್ ಸೇರಿದಂತೆ ಹಲವರು ಹಾಜರಿದ್ದರು. ಕ್ಷೇತ್ರದ ಅರ್ಚಕರಾದ ಚಂದ್ರಶೇಖರ್ ಶಾಸ್ತ್ರಿಗಳು ಪೂಜಾ ಕಾರ್ಯವನ್ನು ನೆರವೇರಿಸಿಕೊಟ್ಟರು. ನಂತರ ದೇವಾಲಯದ ಭಕ್ತಾದಿಗಳಿಗೆ ಸಿಹಿಯನ್ನು ವಿತರಿಸಲಾಯಿತು. ಸುಂಟಿಕೊಪ್ಪ, ಸೆ. ೧೯: ಬಿಜೆಪಿ ಘಟಕದ ವತಿಯಿಂದ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಶ್ರೀ ರಾಮ ಮಂದಿರಲ್ಲಿ ವಿಶೇಷ ಪೂಜೆ ಹಾಗೂ ಸಿಹಿ ಹಂಚುವ ಮೂಲಕ ಆಚರಿಸಲಾಯಿತು.

ಮೊದಲಿಗೆ ಗಣಪತಿ ದೇವರಿಗೆ ಮೋದಿ ಅವರ ಹೆಸರಿನಲ್ಲಿ ಪುಷ್ಪಾರ್ಚನೆ ಸಲ್ಲಿಸಿ ವಿಶೇಷ ಪೂಜೆ ನಡೆಸಲಾಯಿತು.

ಬಿಜೆಪಿ ಮುಖಂಡ ಪಿ.ಆರ್ ಸುನಿಲ್ ಕುಮಾರ್, ಬಿಜೆಪಿ ನಗರಾಧ್ಯಕ್ಷ ಧನು ಕಾವೇರಪ್ಪ, ಮುಖಂಡರಾದ ವಾಸುದೇವ, ವಿಘ್ನೇಶ್, ಲೀಲಾ ಮೇದಪ್ಪ, ರಾಜ, ಈಶ್ವರ, ಸಂದೀಪ್ ಹಾಗೂ ಕಾರ್ಯಕರ್ತರು ಇದ್ದರು.

ಕುಶಾಲನಗರ, ಸೆ. ೧೯: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ೭೬ನೇ ಹುಟ್ಟು ಹಬ್ಬದ ಅಂಗವಾಗಿ ಕುಶಾಲನಗರ ಪಟ್ಟಣ ಬಿಜೆಪಿ ವತಿಯಿಂದ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ನಂತರ ದೇವಾಲಯದ ಮುಂಭಾಗ ಸಾರ್ವಜನಿಕರಿಗೆ ಹುಟ್ಟು ಹಬ್ಬದ ಅಂಗವಾಗಿ ಉಪ್ಪಿಟ್ಟು, ಕೇಸರಿ ಬಾತ್, ಕಾಫಿ-ಟೀ ವಿತರಣೆ ನಡೆಯಿತು.

ಪಕ್ಷದ ಪ್ರಮುಖರಾದ ಬಿ.ಬಿ ಭಾರತೀಶ್, ಎಂ.ಎA ಚರಣ್, ಎಚ್.ಎಂ ಮಧುಸೂದನ್, ಎಂ.ಡಿ ಕೃಷ್ಣಪ್ಪ, ಕೆ.ಜಿ ಮನು, ಅಮೃತರಾಜ್, ಚಂದ್ರಶೇಖರ್, ಪಿಪಿ ಸತ್ಯನಾರಾಯಣ, ವೈಶಾಖ್, ಗೀತಾ, ಸರಳ, ರಾಮಣ್ಣ, ಬೋಸ್ ಮೊಣ್ಣಪ್ಪ, ರಾಮಚಂದ್ರ ಮತ್ತಿತರರು ಇದ್ದರು. ಮಡಿಕೇರಿ, ಸೆ. ೧೯: ಕೊಡಗು ಯುವ ಸೇನಾ ವತಿಯಿಂದ ವಿಶ್ವಗುರು ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿ ಅವರ ೭೬ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ದೇವಸ್ಥಾನ ದಲ್ಲಿ ವಿಶೇಷ ಪೂಜೆ ಆಗೂ ಸಿಹಿ ಹಂಚುವ ಮೂಲಕ ಕಾರ್ಯಕ್ರಮ ನಡೆಯಿತು.

ವೀರಾಜಪೇಟೆ ಗಣಪತಿ ದೇವಾಲಯದಲ್ಲಿ ಕೊಡಗು ಯುವ ಸೇನಾ ವೀರಾಜಪೇಟೆ ತಾಲೂಕು ಸಮಿತಿ ವತಿಯಿಂದ ಪುಷ್ಪರ್ಚನೆ ಸಲ್ಲಿಸಿ ವಿಶೇಷ ಪೂಜೆ ನೆಡೆಸಲಾಯ್ತು. ಈ ಸಂದರ್ಭದಲ್ಲಿ ಮಾತನಾಡಿದ ಯುವ ಸೇನಾ ಮುಖಂಡ ಕುಲದೀಪ್ ಪೂಣಚ್ಚ ಮೋದಿಜಿ ಯವರು ೨೫ ವರ್ಷಗಳಿಂದ ರಾಜಕೀಯದಲ್ಲಿದು ಯಾವುದೇ ಬಿಡುವಿಲ್ಲದೆ ದೇಶಕೋಸ್ಕರ ಕೆಲಸ ಮಾಡು ತ್ತಿದ್ದಾರೆ ಎಂದರು. ಈ ಸಂದರ್ಭ ಜಿಲ್ಲಾ ಸಂಚಾಲಕ ಮಾಚಟ್ಟಿರ ಸಚಿನ್ ಮಂದಣ್ಣ, ತಾಲೂಕು ಅಧ್ಯಕ್ಷ ತೆಕ್ಕೆರ ಜೀವನ್ ನಾಣಯ್ಯ, ಪ್ರಮುಖರಾದ ಪೂಜಿತ್ ರೈ, ವೇಣು ಮಂಜಪ್ಪ ಹಾಗೂ ಸ್ಥಳೀಯ ಕಾರ್ಯಕರ್ತರು ಹಾಜರಿದ್ದರು.

ಸೋಮವಾರಪೇಟೆ ತಾಲೂಕು ಕೊಡಗು ಯುವ ಸೇನಾ ಮೂಲಕ ನಗರದ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಯನ್ನು ಸಲ್ಲಿಸಲಾಯಿತು. ನೆರೆದಿದ ಭಕ್ತದಿಗಳಿಗೆ ಸಿಹಿ ಹಂಚಲಾಯಿತು. ಈ ಸಂದರ್ಭದಲ್ಲಿ ಯುವ ಸೇನಾ ಜಿಲ್ಲಾ ಉಪಾಧ್ಯಕ್ಷರು ಕೆ ವಿ ಮಂಜುನಾಥ್,ತಾಲೂಕು ಅಧ್ಯಕ್ಷರಾದ ಶೇಖರ್,ಕಾರ್ಯದರ್ಶಿ ಕೆ ವಿ ಪ್ರಭಾಕರ್,ಆಟೋ ಚಾಲಕರ ಸಂಘದ ಮಾಜಿ ಅಧ್ಯಕ್ಷರುಗಳಾದ ಸಿ ಡಿ ನೆಹರು, ಗಂಗಾಧರ ಸಂಘಟರು ಗಳಾದ ಗಣೇಶ್, ತೇಜು, ಟ.i.ಛಿ ರಾಜು, ವಿನಿಲ್ ಅಮ್ಮಣ್ಣ ಹಾಜರಿದ್ದರು.

ಮಡಿಕೇರಿ ತಾಲೂಕು ಕೊಡಗು ಯುವ ಸೇನಾ ವತಿಯಿಂದ ನಗರದ ಕೋಟೆ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಅಲ್ಲಿ ನೆರೆದಿದ್ದ ಪ್ರವಾಸಿಗರಿಗೆ ಆಗೂ ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು. ಈ ಸಂದರ್ಭ ತಾಲೂಕು ಅಧ್ಯಕ್ಷ ಜಯಣ್ಣ ಡಿ, ಕಾರ್ಯದರ್ಶಿ ಹೇಮಂತಕುಮಾರ್, ರಮೇಶ್ ಹಾಗೂ ಇತರ ಕಾರ್ಯಕರ್ತರು ಹಾಜರಿದ್ದರು.ಕಡಂಗ, ಸೆ. ೧೯: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ೭೬ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಕುಶಾಲನಗರ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ ಬಿಜೆಪಿ ಪಕ್ಷದ ಮುಖಂಡರು ಹಾಗೂ ಸಮಾಜ ಸೇವಕರಾದ ನಾಪೋಕ್ಲು ಸಮೀಪದ ಬಲ್ಲಮಾವಟಿ ಗ್ರಾಮದ ಪ್ರಸನ್ನ ಎಡಿಕೇರಿ ಅವರು ೩೦ಕ್ಕೂ ಹೆಚ್ಚು ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿದರು.

ಇದೇ ಸಂದರ್ಭದಲ್ಲಿ ಬಜರಂಗದಳ ಸಂಯೋಜಕ ಕಂಬಿ ಬಾಣೆ ಪ್ರವೀಣ್.ವಿ.ಎಚ್.ಪಿ. ಸಂತೋಷ್, ಪ್ರಕಾಶ್, ಕುಮಾರ್, ಪ್ರಕಾಶ್, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.ಶನಿವಾರಸಂತೆ, ಸೆ. ೧೯: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಶನಿವಾರಸಂತೆ ಶಕ್ತಿ ಕೇಂದ್ರದ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಆಚರಿಸಲಾಯಿತು.

ಶಕ್ತಿ ಕೇಂದ್ರದ ಅಧ್ಯಕ್ಷ ಯತೀಶ್ ಅವರ ನೇತೃತ್ವದಲ್ಲಿ ಮೋದಿ ಅಭಿಮಾನಿ ಭುವನೇಶ್ವರಿ ಅವರು ಕೇಕ್ ಕತ್ತರಿಸಿ, ಕಾರ್ಯಕರ್ತರಿಗೆ ಹಂಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಕ್ತಿ ಕೇಂದ್ರದ ಪದಾಧಿಕಾರಿಗಳಾದ ಬಿ.ಎಸ್.ಅನಂತ್ ಕುಮಾರ್ ಹಾಗೂ ಎ.ಆರ್ ರಕ್ಷಿತ್ ಮಾತನಾಡಿ, ಪ್ರಧಾನಿ ಮೋದಿಯವರ ಸಾಧನೆಗಳನ್ನು ಹಾಗೂ ಯೋಜನಾ ಕಾರ್ಯಗಳನ್ನು ಸ್ಮರಿಸುವ ಮೂಲಕ ಜನ್ಮ ದಿನದ ಶುಭ ಕೋರಿದರು.

ಈ ಸಂದರ್ಭದಲ್ಲಿ ಮೋದಿ ಅಭಿಮಾನಿಗಳಾದ ನಮಸ್ಕಾರ ಚಂದ್ರು, ಹರೀಶ್, ಅಶೋಕ್ ರೈ, ಸವಿತಾ, ಅಶ್ವಥ್, ಯೋಗಾನಂದ್, ತನ್ಮಯ್, ಮೂರ್ತಿ, ಮಹೇಶ್, ನಿತಿನ್, ನಟೇಶ್, ಪ್ರಭಾಕರ್, ನಿಂಗರಾಜ್, ಕೇಶವಮೂರ್ತಿ, ದಿವಾಕರ್, ಶಕ್ತಿ ಕೇಂದ್ರದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಮೋದಿ ಅಭಿಮಾನಿಗಳು ಹಾಜರಿದ್ದು ಪಟಾಕಿ ಸಿಡಿಸಿ, ಮೋದಿಯವರಿಗೆ ಜೈಕಾರ ಹಾಕಿದರು.ಚೆಟ್ಟಳ್ಳಿ, ಸೆ. ೧೯: ಪ್ರಧಾನಿ ನರೇಂದ್ರ ಮೋದಿ ಅವರ ೭೬ನೇ ಹುಟ್ಟುಹಬ್ಬದ ಅಂಗವಾಗಿ ಚೆಟ್ಟಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಶ್ರೀ ವೀರಾಂಜನೇಯ ಯುವಕ ಸಂಘದ ವತಿಯಿಂದ ಸಂಭ್ರಮಾಚರಣೆ ನಡೆಯಿತು.

ಚೆಟ್ಟಳ್ಳಿಯ ವಿಶ್ವಗುರು ಪ್ರಧಾನಿ ಶ್ರೀ ಮೋದಿ ರೈತ ಸಹಕಾರ ಭವನದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸೋಮವಾರಪೇಟೆ ಬಿಜೆಪಿ ಮಂಡಲ ವಕ್ತಾರ ಹಾಗೂ ವಕೀಲ ಬಲ್ಲಾರಂಡ ಕಂಠಿ ಕಾರ್ಯಪ್ಪ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ಕಾರ್ಯವೈಖರಿ ವಿಶ್ವಕ್ಕೆ ಮಾದರಿಯಾಗಿದೆ ಎಂದು ಹೇಳಿದರು. ಈ ಸಂದರ್ಭ ಚೆಟ್ಟಳ್ಳಿ ಬಿಜೆಪಿ ವಾರ್ಡ್ ಅಧ್ಯಕ್ಷ ಪುತ್ತರಿರ ಶಿವು ನಂಜಪ್ಪ, ಈರಳೆ-ವಳಮುಡಿ ವಾರ್ಡ್ ಅಧ್ಯಕ್ಷ ಚೋಳಪಂಡ ಗಣಪತಿ, ಪೊನ್ನತಮೊಟ್ಟೆ ವಾರ್ಡ್ ಅಧ್ಯಕ್ಷ ಮಾಯಾಕೃಷ್ಣ, ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಬಟ್ಟೀರ ವೇಣುಗೋಪಾಲ, ಚೆಟ್ಟಳ್ಳಿ ಬಿಜೆಪಿ ಯುವ ಘಟಕದ ಅಧ್ಯಕ್ಷ ಮಿಥುನ್, ವೀರಾಂಜನೇಯ ಯುವಕ ಸಂಘದ ಅಧ್ಯಕ್ಷ ಸುನಿಲ್, ಖಜಾಂಜಿ ರೀನಾ, ಸದಸ್ಯರಾದ ಜ್ಯೋತಿಶ್, ವರುಣ್, ಭರತ್, ಗಿರೀಶ್, ತಮ್ಮು, ಗೋಪಾಲ್, ರಾಜೇಶ್ ಹೆಚ್.ಎಸ್, ರಮ್ಯ, ಲೀಲಾವತಿ, ಮಂಜುನಾಥ್, ರಾಮೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸೋಮವಾರಪೇಟೆ, ಸೆ. ೧೯: ಇಲ್ಲಿನ ವಿಶ್ವಕರ್ಮ ಸಮಾಜದ ವತಿಯಿಂದ ಪಟ್ಟಣದ ಮಹಿಳಾ ಸಮಾಜದಲ್ಲಿ ವಿಶ್ವಕರ್ಮ ಜಯಂತಿ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಡಾ. ಮಂತರ್ ಗೌಡ, ವಿಶ್ವಕರ್ಮ ಅವರು ಇಡೀ ಜಗತ್ತಿನ ಸೃಷ್ಠಿ ಶಕ್ತಿಯ ಪ್ರತೀಕವಾಗಿರುವುದರಿಂದ ಎಲ್ಲರೂ ಅವರನ್ನು ಗೌರವಿಸಬೇಕೆಂದು ಅಭಿಪ್ರಾಯಿಸಿದರು.

ಕಾಯಕದ ಗೌರವ, ಕೌಶಲ್ಯದ ಮಹತ್ವ, ಸೃಜನಶೀಲತೆ ಹಾಗೂ ಸಮಾಜ ನಿರ್ಮಾಣದಲ್ಲಿ ಅವರ ಕೊಡುಗೆಯನ್ನು ನಾವು ಗೌರವಿಸಬೇಕು. ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು. ಸಮುದಾಯದಲ್ಲಿ ಜ್ಞಾನ ಮತ್ತು ಪ್ರತಿಭೆಯನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದರು.

ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಾದ ಎಸ್.ಬಿ ಲೀಲಾರಾಮ್, ತಾಲೂಕು ಘಟಕದ ಅಧ್ಯಕ್ಷರಾದ ಅಜಯ್ ಸೇರಿದಂತೆ ಪದಾಧಿಕಾರಿಗಳು, ವಿಶ್ವಕರ್ಮ ಸಮುದಾಯ ಬಾಂಧವರು ಉಪಸ್ಥಿತರಿದ್ದರು.