(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ, ಸೆ. ೧೯: ಪುಟ್ಟ ಜಿಲ್ಲೆ ಕೊಡಗಿನಲ್ಲಿ ಶಿಶು ಮರಣ ಪ್ರಮಾಣ ಆತಂಕಕಾರಿ ರೀತಿಯಲ್ಲಿ ಏರಿಕೆಯಾಗಿದ್ದು, ಕಳೆದ ೬ ವರ್ಷದಲ್ಲಿ ೩೩೬ ಶಿಶುಗಳು ಹುಟ್ಟಿದ ಬಳಿಕ ಹಾಗೂ ೩೧೦ ಮಕ್ಕಳು ಹುಟ್ಟುವ ಮುನ್ನವೇ ತಾಯಿಯ ಗರ್ಭದಲ್ಲೇ ಮೃತಪಟ್ಟಿದ್ದಾರೆ. ಒಟ್ಟು ೬೪೬ ಮಕ್ಕಳು ಬಲಿಯಾಗಿರುವುದು ಆರೋಗ್ಯ ಇಲಾಖೆಯ ಅಧಿಕೃತ ವರದಿಯಿಂದ ಬಹಿರಂಗವಾಗಿದೆ. ಜಿಲ್ಲೆಯಲ್ಲಿ ಪ್ರತೀ ೫೩ ಜನನಕ್ಕೆ ಒಂದು ಮಗು ಸಾವನ್ನಪ್ಪುತ್ತಿದೆ.
ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ಜನನ ಪ್ರಮಾಣ ಕಡಿಮೆ ಇದೆ. ಕೊಡಗಿನಲ್ಲಿ ೨೦೨೧ರಿಂದ ೨೬ರ ಜುಲೈವರೆಗೆ ೩೪,೪೬೯ ಮಕ್ಕಳು ಜನಿಸಿದ್ದಾರೆ. ಜಿಲ್ಲೆಯಲ್ಲಿ ಶಿಶು ಮರಣ ಹಾಗೂ ಗರ್ಭದಲ್ಲೇ ಕಂದಮ್ಮಗಳು ಸಾವನ್ನಪ್ಪುತ್ತಿರುವ ಘಟನೆಗಳು ಆತಂಕಕಾರಿಯಾಗಿದೆ.
ಆರೋಗ್ಯ ಇಲಾಖೆಯಿಂದ ಲಭ್ಯವಾಗಿರುವ ೨೦೨೧-೨೨ ರಿಂದ ೨೦೨೬-೨೭ರ ಜುಲೈ ವರೆಗಿನ ವರದಿಯ ಪ್ರಕಾರ, ೨೦೨೧-೨೨ರಲ್ಲಿ ೬೬೦೭ ಜನನದಲ್ಲಿ ೪೯ ಶಿಶು ಸಾವು ಮತ್ತು ೮೯ Sಣiಟಟ ಃiಡಿಣh (ಹುಟ್ಟುವ ಮೊದಲೇ ಸತ್ತರೆ) ಸೇರಿ ೧೩೮ ಸಾವು ಸಂಭವಿಸಿದೆ. ೨೦೨೨-೨೩ ರಲ್ಲಿ ೬೯೭೧ ಜನನದಲ್ಲಿ ೬೭ ಶಿಶು ಮರಣ, ೭೯ Sಣiಟಟ biಡಿಣh ಸೇರಿ ೧೪೬ ಶಿಶುಗಳು ಸಾವನ್ನಪ್ಪಿದ್ದಾರೆ., ೨೦೨೩-೨೪ರಲ್ಲಿ ೬೪೨೦ ಜನನದಲ್ಲಿ ೪೮ ಶಿಶು ಮರಣ ಹಾಗೂ ೨೯ ಮಕ್ಕಳು ಗರ್ಭದಲ್ಲೇ ಸಾವನ್ನಪ್ಪಿದ್ದಾರೆ. ೨೦೨೪-೨೫ರಲ್ಲಿ ೬೨೮೭ ಜನನದಲ್ಲಿ ೬೦ ಶಿಶು ಮರಣ ಹಾಗೂ ೬೦ Sಣiಟಟ biಡಿಣh ಸಾವು ಸಂಭವಿಸಿದೆ.
ಆದರೆ ೨೦೨೫-೨೬ರಲ್ಲಿ ಅತೀ ಹೆಚ್ಚು ಶಿಶು ಮರಣ ಸಂಭವಿಸಿದ್ದು, ೬೪೩೬ ಜನನದಲ್ಲಿ ೯೩ ಶಿಶು ಸಾವು ಮತ್ತು ೪೫ Sಣiಟಟ ಃiಡಿಣh ಸೇರಿ ಒಟ್ಟು ೧೩೮ ಮಕ್ಕಳು ಮೃತಪಟ್ಟಿದ್ದಾರೆ. ಇದರ Iಒಖ ೧೪.೪೫ ಆಗಿದ್ದು, ೫ ವರ್ಷದಲ್ಲೇ ಅತಿ ಹೆಚ್ಚು. ಅದರಲ್ಲೂ ಜೂನ್-೨೫ರಲ್ಲಿ ಒಂದೇ ತಿಂಗಳು ೪೭೨ ಜನನದಲ್ಲಿ ೧೬ ಶಿಶುಗಳು ಮೃತಪಟ್ಟಿದ್ದಾರೆ.
ಪ್ರಸಕ್ತ ವರ್ಷ ೨೦೨೬-೨೭ರ ಕೇವಲ ೪ ತಿಂಗಳಲ್ಲಿ (ಏಪ್ರಿಲ್-ಜುಲೈ) ೧೭೪೮ ಜನನದಲ್ಲಿ ೧೯ ಶಿಶು ಸಾವು ಮತ್ತು ೮ Sಣiಟಟ ಃiಡಿಣh ಸೇರಿ ೨೭ ಮಕ್ಕಳು ಮೃತಪಟ್ಟಿದ್ದಾರೆ. ಏಪ್ರಿಲ್ನಲ್ಲಿ ೫, ಮೇನಲ್ಲಿ ೫, ಜೂನ್ನಲ್ಲಿ ೪, ಜುಲೈನಲ್ಲಿ ೫ ಶಿಶುಗಳು ಮೃತಪಟ್ಟಿದ್ದಾರೆ.
ಒಟ್ಟು ೬ ವರ್ಷದಲ್ಲಿ ೩೪೪೬೯ ಜೀವಂತ ಜನನದಲ್ಲಿ ೬೪೬ ಮಕ್ಕಳು ಬಲಿಯಾಗಿರುವ ಆಘಾತಕಾರಿ ಸಂಗತಿ ಆರೋಗ್ಯ ಇಲಾಖೆಯ ಮಾಹಿತಿಯಿಂದಲೇ ಬಹಿರಂಗಗೊAಡಿದೆ.
ಹುಟ್ಟಿದ ಮೊದಲ ದಿನವೇ ೫೫ ಶಿಶುಗಳು ಸಾವು; ೬ ವರ್ಷದಲ್ಲಿ ಒಟ್ಟು ೬೧ ಮಕ್ಕಳು ಹುಟ್ಟುವಾಗ ಉಸಿರುಕಟ್ಟಿ ಸಾವು
ಜಿಲ್ಲೆಯಲ್ಲಿ ಕಳೆದ ೬ ವರ್ಷದಲ್ಲಿ ಮೃತಪಟ್ಟ ೩೩೬ ಶಿಶುಗಳಲ್ಲಿ ೫೫ ಮಕ್ಕಳು ಹುಟ್ಟಿದ ಮೊದಲ ದಿನವೇ ಸಾವನ್ನಪ್ಪಿದ್ದರೆ, ೧೬೭ ಮಕ್ಕಳು ೨೯ ದಿನದಿಂದ ೧ ವರ್ಷದೊಳಗೆ ಮೃತಪಟ್ಟಿದ್ದಾರೆ.
೬ ವರ್ಷದಲ್ಲಿ ಒಟ್ಟು ೬೧ ಮಕ್ಕಳು ಹುಟ್ಟುವಾಗ ಉಸಿರುಕಟ್ಟಿ ಮೃತಪಟ್ಟಿದ್ದಾರೆ. ಇದರಲ್ಲಿ ೨೦೨೧-೨೨ರಲ್ಲಿ ೩, ೨೦೨೨-೨೩ರಲ್ಲಿ ೧೬, ೨೦೨೩-೨೪ರಲ್ಲಿ ೭, ೨೦೨೪-೨೫ರಲ್ಲಿ ೮ ಮತ್ತು ಕಳೆದ ವರ್ಷ ೨೦೨೫-೨೬ರಲ್ಲಿ ಅತಿ ಹೆಚ್ಚು ೨೭ ಮಕ್ಕಳು ಆಸ್ಫಿಕ್ಸಿಯಾದಿಂದಲೇ ಬಲಿಯಾಗಿದ್ದಾರೆ.
೬ ವರ್ಷದಲ್ಲಿ ೧೩೦ ಮಕ್ಕಳು ಇತರೆ ಕಾರಣದಿಂದ ಮೃತಪಟ್ಟಿದ್ದಾರೆ. ಸೆಪ್ಸಿಸ್ (ರಕ್ತ ಸೋಂಕು) ದಿಂದ ೬ ವರ್ಷದಲ್ಲಿ ೩೪ ಮಕ್ಕಳು ಬಲಿಯಾಗಿದ್ದಾರೆ. ೨೦೨೫-೨೬ರಲ್ಲಿ ೧೬, ೨೦೨೨-೨೩ರಲ್ಲಿ ೮ ಮಕ್ಕಳು ಇದರಿಂದ ಮೃತಪಟ್ಟಿದ್ದಾರೆ. ನ್ಯುಮೋನಿಯಾದಿಂದ ೨೯ ಮಕ್ಕಳು ಬಲಿಯಾಗಿದ್ದು, ೨೦೨೧-೨೨ರಲ್ಲಿ ಅತಿ ಹೆಚ್ಚು ೧೨, ನಂತರ ೪, ೩, ೪, ೬ ಮಕ್ಕಳು ವರ್ಷವಾರು ಬಲಿಯಾಗಿದ್ದಾರೆ. ಹೃದಯ ಸಂಬAಧಿ ಕಾಯಿಲೆಯಿಂದ ೨೮ ಮಕ್ಕಳು ಸಾವನ್ನಪ್ಪಿದ್ದಾರೆ. ೨೦೨೨-೨೩, ೨೦೨೩-೨೪, ೨೦೨೪-೨೫ರಲ್ಲಿ ತಲಾ ೯, ೯, ೧೦ ಮಕ್ಕಳು ಬಲಿಯಾಗಿದ್ದಾರೆ.
ಕಡಿಮೆ ತೂಕದಿಂದ ೨೧ ಮಕ್ಕಳು, ಅಕಾಲಿಕ ಜನನದಿಂದ ೧೫ ಮಕ್ಕಳು ಬಲಿಯಾಗಿದ್ದಾರೆ. ೨೦೨೩-೨೪ರಲ್ಲಿ ಕಡಿಮೆ ತೂಕದಿಂದ ೧೩ ಮಕ್ಕಳು ಮತ್ತು ೨೦೨೪-೨೫ರಲ್ಲಿ ಅಕಾಲಿಕ ಜನನದಿಂದ ೧೪ ಮಕ್ಕಳು ಮೃತಪಟ್ಟಿದ್ದಾರೆ.
ಕಾಮಾಲೆಯಿಂದ ೮ ಮಕ್ಕಳು (೨೦೨೧-೨೨ರಲ್ಲಿ ೬, ೨೦೨೫-೨೬ರಲ್ಲಿ ೨) ಮತ್ತು ಪೋಲಿಯೋದಿಂದ ೧೦ ಮಕ್ಕಳು (ಎಲ್ಲಾ ೧೦ ಮಕ್ಕಳು ೨೦೨೫-೨೬ರಲ್ಲಿ) ಮೃತಪಟ್ಟಿದ್ದಾರೆ. ಒಟ್ಟು ೬ ವರ್ಷದಲ್ಲಿ ೩೩೬ ಶಿಶು ಸಾವುಗಳಲ್ಲಿ ಆಸ್ಫಿಕ್ಸಿಯಾ ೬೧, ಇತರ ೧೩೦, ಸೆಪ್ಸಿಸ್ ೩೪, ನ್ಯುಮೋನಿಯಾ ೨೯, ಹೃದಯ ೨೮, ಕಡಿಮೆ ತೂಕ ೨೧, ಅಕಾಲಿಕ ೧೫, ಪೋಲಿಯೋ ೧೦, ಕಾಮಾಲೆ ೮ ಕಾರಣದಿಂದಾಗಿ ಸಾವನ್ನಪ್ಪಿದ್ದಾರೆ.
ಆಸ್ಪತ್ರೆಯಲ್ಲೇ ೨೩೫ ಮಕ್ಕಳು ಸಾವು
ಕೊಡಗು ಜಿಲ್ಲೆಯಲ್ಲಿ ಕಳೆದ ೬ ವರ್ಷದಲ್ಲಿ ಮೃತಪಟ್ಟ ೩೩೬ ಶಿಶುಗಳಲ್ಲಿ ೩೩೫ ಮಕ್ಕಳ ಹೆರಿಗೆ ಆಸ್ಪತ್ರೆಯಲ್ಲೇ ಆಗಿದ್ದು, ಮನೆಯಲ್ಲಿ ಕೇವಲ ೧ ಹೆರಿಗೆ ನಡೆದಿದೆ. ಆದರೆ ಸಾವು ಮಾತ್ರ ಆಸ್ಪತ್ರೆಯಲ್ಲಿ ೨೩೫ ಮತ್ತು ಮನೆಯಲ್ಲಿ ೧೦೧ ಆಗಿದೆ.
ಆರೋಗ್ಯ ಇಲಾಖೆಯ ೨೦೨೧-೨೨ರಿಂದ ೨೦೨೬-೨೭ರ ಜುಲೈವರೆಗಿನ ವರದಿಯ ಪ್ರಕಾರ, ೨೦೨೧-೨೨ರಲ್ಲಿ ೪೯ ಸಾವುಗಳಲ್ಲಿ ೪೯ ಹೆರಿಗೆ ಆಸ್ಪತ್ರೆಯಲ್ಲಿ, ಸಾವು ೩೩ ಆಸ್ಪತ್ರೆಯಲ್ಲಿ, ೧೬ ಮನೆಯಲ್ಲಿ. ೨೦೨೨-೨೩ರಲ್ಲಿ ೬೭ ಸಾವುಗಳಲ್ಲಿ ೬೭ ಹೆರಿಗೆ ಆಸ್ಪತ್ರೆಯಲ್ಲಿ, ಸಾವು ೪೮ ಆಸ್ಪತ್ರೆಯಲ್ಲಿ, ೧೯ ಮನೆಯಲ್ಲಿ. ೨೦೨೩-೨೪ರಲ್ಲಿ ೪೮ ಸಾವುಗಳಲ್ಲಿ ೪೮ ಹೆರಿಗೆ ಆಸ್ಪತ್ರೆಯಲ್ಲಿ, ಸಾವು ೩೨ ಆಸ್ಪತ್ರೆಯಲ್ಲಿ, ೧೬ ಮನೆಯಲ್ಲಿ. ೨೦೨೪-೨೫ರಲ್ಲಿ ೬೦ ಸಾವುಗಳಲ್ಲಿ ೬೦ ಹೆರಿಗೆ ಆಸ್ಪತ್ರೆಯಲ್ಲಿ, ಸಾವು ೪೧ ಆಸ್ಪತ್ರೆಯಲ್ಲಿ, ೧೯ ಮನೆಯಲ್ಲಿ. ೨೦೨೫-೨೬ರಲ್ಲಿ ೯೩ ಸಾವುಗಳಲ್ಲಿ ೯೨ ಹೆರಿಗೆ ಆಸ್ಪತ್ರೆಯಲ್ಲಿ, ೧ ಮನೆಯಲ್ಲಿ, ಸಾವು ೬೭ ಆಸ್ಪತ್ರೆಯಲ್ಲಿ, ೨೬ ಮನೆಯಲ್ಲಿ. ೨೦೨೬-೨೭ರ ೪ ತಿಂಗಳಲ್ಲಿ ೧೯ ಸಾವುಗಳಲ್ಲಿ ೧೯ ಹೆರಿಗೆ ಆಸ್ಪತ್ರೆಯಲ್ಲಿ, ಸಾವು ೧೪ ಆಸ್ಪತ್ರೆಯಲ್ಲಿ, ೫ ಮನೆಯಲ್ಲಾಗಿದೆ.
೬ ವರ್ಷದ ಒಟ್ಟು ೩೩೬ರಲ್ಲಿ ಹೆರಿಗೆ ಆಸ್ಪತ್ರೆಯಲ್ಲಿ ೩೩೫ (ಶೇ. ೯೯.೭), ಮನೆಯಲ್ಲಿ ೧ (ಶೇ. ೦.೩). ಸಾವು ಆಸ್ಪತ್ರೆಯಲ್ಲಿ ೨೩೫ (ಶೇ. ೭೦), ಮನೆಯಲ್ಲಿ ೧೦೧ (ಶೇ. ೩೦) ಸಾವು ದಾಖಲಾಗಿದೆ.೩೩೬ ಶಿಶು ಮರಣದಲ್ಲಿ ೧೯೧ ಗಂಡು ಹಾಗೂ ೧೪೫ ಹೆಣ್ಣು ಶಿಶುಗಳು ಸಾವನ್ನಪ್ಪಿದ್ದಾರೆ.