ಸಿದ್ದಾಪುರ, ಸೆ.೧೯: ಹಾಡಹಗಲೇ ಒಂಟಿ ಸಲಗವೊಂದು ಮುಖ್ಯ ರಸ್ತೆಯಲ್ಲಿ ದ್ವಿಚಕ್ರ ವಾಹನದ ಮೇಲೆ ದಾಳಿ ನಡೆಸಿದ್ದು ಸಲಗದ ದಾಳಿಗೆ ಸಿಲುಕಿ ಹಿಂಬದಿಯ ಸವಾರ ಗಂಭೀರ ಗಾಯಗೊಂಡಿರುವ ಘಟನೆ ನೆಲ್ಲಿ ಹುದಿಕೇರಿ ಗ್ರಾಮದ ಸಮೀಪದ ಅತ್ತಿಮಂಗಲ ಬಳಿ ಮುಖ್ಯರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.

ಅಭ್ಯತ್‌ಮಂಗಲ ಗ್ರಾಮದ ಪೈಸಾರಿ ನಿವಾಸಿಗಳಾದ ಉಮೇಶ್ ಮತ್ತು ಅವರ ನೆರೆಮನೆಯ ನಿವಾಸಿ ಸುಬ್ರಮಣಿ ಕೆ. ಎಂಬಿಬ್ಬರು ಉಮೇಶ್‌ಗೆ ಸೇರಿದ ಸ್ಕೂಟಿಯಲ್ಲಿ ಅಭ್ಯತ್ ಮಂಗಲದಿAದ ಕೆಲಸದ ನಿಮಿತ್ತ ಸಿದ್ದಾಪುರಕ್ಕೆ ಬರುತ್ತಿದ್ದ ಸಂದರ್ಭ ನೆಲ್ಲಿಹುದಿಕೇರಿ ಸಮೀಪದ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಅತ್ತಿಮಂಗಲ ಬಳಿಯ ಕಾಟಿಬಾಣೆ ಕಾಫಿ ತೋಟದಿಂದ ಬೆಳಿಗ್ಗೆ ೯.೪೫ ರ ಸಮಯಕ್ಕೆ ಒಂಟಿ ಸಲಗವೊಂದು ಹಠಾತ್ತನೆ ಸಿದ್ದಾಪುರ ಮಡಿಕೇರಿ ಮುಖ್ಯರಸ್ತೆಗೆ ಬಂದಿದೆ.

ಈ ಸಂದರ್ಭ ಖಾಸಗಿ ಬಸ್ಸಿನ ಹಿಂಬದಿಯಲ್ಲಿದ್ದ ಉಮೇಶ್ ಅವರು ಚಾಲನೆ ಮಾಡುತ್ತಿದ್ದ ಸ್ಕೂಟಿಯ ಮೇಲೆ ಏಕಾಏಕಿ ದಾಳಿ ನಡೆಸಿದೆ. ಕಾಡಾನೆ ದಾಳಿಗೆ ಸಿಲುಕಿ ಸ್ಕೂಟಿಯ ಹಿಂಬದಿಯಲ್ಲಿ ಕುಳಿತಿದ್ದ ಅಭ್ಯತ್ ಮಂಗಲ ಗ್ರಾಮದ ಪೈಸಾರಿ ನಿವಾಸಿ ಸುಬ್ರಮಣಿ. ಕೆ. (೫೭) ಎಂಬವರಿಗೆ ಮುಖಕ್ಕೆ ಕಾಲಿಗೆ ಹಾಗೂ ಕೈಗೆ ಗಂಭೀರ ಗಾಯವಾಗಿದೆ.

ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಕೂಟಿ ಚಾಲಿಸುತ್ತಿದ್ದ ಉಮೇಶ್ ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದು ಕೂಡಲೇ ಸ್ಥಳೀಯರು ಇಬ್ಬರು ಗಾಯಾಳುಗಳನ್ನು ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಕರೆದುದೊಯ್ದು ಸಿದ್ದಾಪುರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಗಂಭೀರ ಗಾಯಗೊಂಡ ಸುಬ್ರಮಣಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಬಗ್ಗೆ ಅರಣ್ಯ ಇಲಾಖೆಗೆ ಸ್ಥಳೀಯರು ದೂರು ನೀಡಿದ ಮೇರೆಗೆ ಸೋಮವಾರಪೇಟೆ ಎ.ಸಿ.ಎಫ್. ನವೀನ್ ಕುಮಾರ್ ಹಾಗೂ ಕುಶಾಲನಗರ ವಲಯ ಅರಣ್ಯ ಅಧಿಕಾರಿ ರಕ್ಷಿತ್ ಆರ್. ಅವರ ಮಾರ್ಗದರ್ಶನದಲ್ಲಿ ಮೀನುಕೊಲ್ಲಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಸಚಿನ್ ನಿಂಬಾಳ್ಕರ್ ಹಾಗೂ ಸಿಬ್ಬಂದಿ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ಪರಿಶೀಲಿಸಿದರು ಬಳಿಕ ಮಡಿಕೇರಿಗೆ ಗಾಯಾಳುಯೊಂದಿಗೆ ತೆರಳಿದರು. ಘಟನೆ ಸಂಬAಧ ಸಿದ್ದಾಪುರ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅತ್ತಿಮಂಗಲ, ಅರೆಕಾಡು ಭಾಗದಲ್ಲಿ ಕಾಡಾನೆಗಳು ಕಾಫಿ ತೋಟದಲ್ಲಿ ಬೀಡುಬಿಟ್ಟು ದಾಂಧÀಲೆ ನಡೆಸುತ್ತಿವೆ. ಅಲ್ಲದೆ ಮಾನವನ ಮೇಲೆ ದಾಳಿ ನಡೆಸುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸಮುದಾಯ ಆರೋಗ್ಯ ಕೇಂದ್ರಕ್ಕೆ ಗಾಯಾಳುಗಳನ್ನು ಕರೆತಂದಾಗ ಅಲ್ಲಿ ಸರಿಯಾದ ಸೌಲಭ್ಯಗಳು ಇಲ್ಲದಿದ್ದರಿಂದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಕಾಡಾನೆ ಹಾಡಹಗಲೇ ದಾಳಿ ನಡೆಸಿದ ಘಟನೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

-ವಾಸು ಎ.ಎನ್.