ಮಡಿಕೇರಿ, ಸೆ. ೧೯: ನಗರದ ಶಾಂತಿನಿಕೇತನ ಯುವಕ ಸಂಘದಿAದ ಗಣೇಶೋತ್ಸವ ಪ್ರಯುಕ್ತ ೪೮ನೇ ವರ್ಷದ ಕ್ರೀಡಾಕೂಟ ತಾ. ೨೦ ರಂದು (ಇಂದು) ನಡೆಯಲಿದೆ. ಮಕ್ಕಳಿಗೆ ಕಾಳು ಹೆಕ್ಕುವುದು, ಬಣ್ಣ ಹಚ್ಚುವುದು, ಚಿತ್ರ ಬಿಡಿಸುವುದು, ೨೦೦ ಮೀಟರ್ ಓಟ (ಬಾಲಕರಿಗೆ), ಕಲೆಕ್ಟ್ ದ ಬಾಲ್ (ಬಾಲಕಿಯರಿಗೆ), ಸಾರ್ವಜನಿಕ ಮ್ಯಾರಥಾನ್ ರಸ್ತೆ ಓಟ (ಪುರುಷರಿಗೆ), ಮಹಿಳೆಯರಿಗೆ ಭಾರದ ಗುಂಡು ಎಸೆತ, ಪುರುಷರಿಗೆ ಭಾರದ ಗುಂಡು ಎಸೆತ, ಮಹಿಳೆಯರಿಗೆ ಬಾಂಬ್ ಇನ್ ದಿ ಸಿಟಿ, ಪುರುಷರಿಗೆ ಬಾಂಬ್ ಇನ್ ದಿ ಸಿಟಿ, ಮಹಿಳೆಯರಿಗೆ ಸಂಗೀತ ಕುರ್ಚಿ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.