ಶನಿವಾರಸಂತೆ: ಸಮೀಪದ ಕಣಿವೆ - ಬಸವನಹಳ್ಳಿ ಗ್ರಾಮದಲ್ಲಿ ಗೌರಿ - ಗಣೇಶ ಸೇವಾ ಸಮಿತಿ ಹಾಗೂ ಗ್ರಾಮಸ್ಥರು ಗ್ರಾಮದ ಸಮುದಾಯ ಭವನದಲ್ಲಿ ಪ್ರತಿಷ್ಠಾಪನೆ ಮಾಡಿರುವ ಗೌರಿ - ಗಣೇಶ ಮೂರ್ತಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಕಿರಣ್, ಪ್ರಮುಖರಾದ ಚೇತನ್, ಜೀವನ್, ಚೇತನ್, ಕೋಮರಪ್ಪ, ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್, ಗೌರಿ - ಗಣೇಶ ಸೇವಾ ಸಮಿತಿ ಅಧ್ಯಕ್ಷ ಸೂರಜ್, ಕಾರ್ಯದರ್ಶಿ ಸೃಜನ್ ಹಾಗೂ ಸೇವಾ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಇತರರಿದ್ದರು.ಚೆಟ್ಟಳ್ಳಿ: ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಲಾಗಿರುವ ಬಸ್ ತಂಗುದಾಣವೇ ಗಣೇಶ ಚೌತಿಯಂದು ಭಕ್ತಿಯ ತಾಣವಾಗಿ ಕಂಗೊಳಿಸಿದ ದೃಶ್ಯ ಮಡಿಕೇರಿ ಸಮೀಪದ ನೀರುಕೊಲ್ಲಿ ಕಲ್ಲುಕೋರೆಯಲ್ಲಿ ಕಂಡುಬAತು.
ನೀರುಕೊಲ್ಲಿ ಕಲ್ಲುಕೋರೆಯ ಶ್ರೀ ನಾಗರಾಜ ಯುವಕ ಸಂಘದ ವತಿಯಿಂದ ೨೮ನೇ ವರ್ಷದ ಗೌರಿ ಗಣೇಶೋತ್ಸವವನ್ನು ಸಡಗರ-ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಗಣೇಶ ಚೌತಿಯಂದು ಬಸ್ ತಂಗುದಾಣದಲ್ಲೇ ಗೌರಿ - ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಗೌರಿ - ಗಣೇಶನ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಬಸ್ ತಂಗುದಾಣದ ಸುತ್ತಮುತ್ತ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು. ಬೆಳಗ್ಗಿನಿಂದಲೇ ಸ್ಥಳೀಯ ಭಕ್ತರು ಹಾಗೂ ಸಾರ್ವಜನಿಕರು ಆಗಮಿಸಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಕಳೆದ ನಾಲ್ಕು ವರ್ಷಗಳಿಂದ ಗೌರಿ ಗಣೇಶನ ಮೂರ್ತಿಯನ್ನು ಬಸ್ ತಂಗುದಾಣದಲ್ಲೇ ಪ್ರತಿಷ್ಠಾಪಿಸಿ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ಮೂಲಕ ಧಾರ್ಮಿಕ ಆಚರಣೆಯ ಜೊತೆಗೆ ಸ್ಥಳೀಯರ ಒಗ್ಗಟ್ಟು ಮತ್ತು ಸೌಹಾರ್ದತೆಯನ್ನು ಮತ್ತಷ್ಟು ಗಟ್ಟಿಗೊಳಿಸಲಾಗುತ್ತಿದೆ.ಗೋಣಿಕೊಪ್ಪ: ಗೋಣಿಕೊಪ್ಪಲಿನ ಹರಿಶ್ಚಂದ್ರಪುರಕ್ಕೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಭೇಟಿ ನೀಡಿದರು.
ಹರಿಶ್ಚಂದ್ರಪುರದಲ್ಲಿ ಆಯೋಜಿಸಲಾಗಿದ್ದ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಪೂಜೆ ಸಲ್ಲಿಸಿದರು. ಈ ಸಂದರ್ಭ ಬ್ಲಾಕ್ ಅಧ್ಯಕ್ಷ ಮಿದೇರಿರ ನವೀನ್, ಪ್ರಧಾನ ಕಾರ್ಯದರ್ಶಿ ಎ.ಜೆ. ಬಾಬು, ಗೋಣಿಕೊಪ್ಪಲು ಪಂಚಾಯಿತಿ ಮಾಜಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಯುವ ಕಾಂಗ್ರೆಸ್ ಮುಖಂಡ ಅಂಕಿತ್ ಪೊನ್ನಪ್ಪ, ಗಣೇಶೋತ್ಸವ ಸಮಿತಿಯ ಸದಸ್ಯರು, ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.ನಾಪೋಕ್ಲು: ಶ್ರೀ ಪೊನ್ನು ಮುತ್ತಪ್ಪ ದೇವಸ್ಥಾನ ನಾಪೋಕ್ಲು ಇದರ ವತಿಯಿಂದ ಆಯೋಜಿಸಿದ್ದ ಶ್ರೀ ಪೊನ್ನ ಮುತ್ತಪ್ಪ ವಿನಾಯಕ ಸೇವಾ ಸಮಿತಿಯ ಗೌರಿ - ಗಣೇಶೋತ್ಸವ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಭಾಗವಹಿಸಿ ಪೂಜೆ ಸಲ್ಲಿಸಿದರು.
ಈ ಸಂದರ್ಭ ಗೌರಿ - ಗಣೇಶೋತ್ಸವ ಸೇವಾ ಸಮಿತಿ ಅಧ್ಯಕ್ಷ ಜೀವನ್, ಉಪಾಧ್ಯಕ್ಷ ಚೆಲುವ, ಕಾರ್ಯದರ್ಶಿ ರಾಮೇಂದ್ರ, ಖಜಾಂಚಿ ರಂಜಿತ್, ನಾಪೋಕ್ಲು ಮಲಯಾಳಿ ಸಂಘದ ಅಧ್ಯಕ್ಷ ಅನಿಲ್, ದೇವಸ್ಥಾನದ ಅಧ್ಯಕ್ಷ ಚಂದ್ರನ್, ಉಪಾಧ್ಯಕ್ಷ ರಘು, ಖಜಾಂಚಿ ಪಿ. ಅನಿಲ್, ಸಮಿತಿಗಳ ಸದಸ್ಯರು, ಪಂಚಾಯಿತಿ ಮಾಜಿ ಸದಸ್ಯ ಮಾಚೆಟ್ಟಿರ ಕುಸು ಕುಶಾಲಪ್ಪ, ಬಿ.ಎಂ. ಪ್ರತೀಪ, ಕೆ.ಎ. ಇಸ್ಮಾಯಿಲ್, ಅಪ್ರು ರವೀಂದ್ರ ಹಾಗೂ ಪ್ರಮುಖರು ಉಪಸ್ಥಿತರಿದ್ದರು.ಕೂಡಿಗೆ: ಕೂಡಿಗೆ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ, ಶ್ರೀ ಬಸವೇಶ್ವರ ಹಾಗೂ ಶ್ರೀ ದಂಡಿನಮ್ಮ ದೇವಸ್ಥಾನ ಮತ್ತು ಯಂಗ್ ಸ್ಟಾರ್ ಅಸೋಸಿಯೇಷನ್ ಇವರ ವತಿಯಿಂದ ೧೮ನೇ ವರ್ಷದ ಅದ್ದೂರಿ ಗೌರಿ - ಗಣೇಶೋತ್ಸವ ಆಚರಣೆಯ ಅಂಗವಾಗಿ ಕೂಡಿಗೆ ಸರ್ಕಲ್‌ನಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣಪತಿ ವಿಗ್ರಹ ವಿಸರ್ಜನೆ ಕಾರ್ಯ ನೆರವೇರಿಸಲಾಯಿತು.
ವಿದ್ಯುತ್ ಅಲಂಕೃತ ಬೆಳ್ಳಿ ರಥದ ವಾಹನದಲ್ಲಿ ಕುಳ್ಳಿರಿಸಿ ವಿಶೇಷ ಪೂಜೆ ಸಲ್ಲಿಸಿ, ನಂತರ ಕೂಡಿಗೆ - ಕೂಡುಮಂಗಳೂರು ಸರ್ಕಲ್ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಬರಲಾಯಿತು. ಬೆಳ್ಳಿ ರಥದ ಮುಂಭಾಗದಲ್ಲಿ ಮಂಗಳೂರಿನ ಗೊಂಬೆ ಕುಣಿತ ತಂಡ, ಡೋಲು ಕುಣಿತ ಸೇರಿದಂತೆ ಮದ್ದುಗುಂಡು ಪ್ರದರ್ಶನ ನಡೆದವು.
ವಿಗ್ರಹವನ್ನು ಹೊತ್ತ ವಾಹನವು ಕೂಡಿಗೆ - ಕೊಪ್ಪಲು ಮಾರ್ಗವಾಗಿ ಮೆರವಣಿಗೆಯ ಮೂಲಕ ಸಾಗಿಬಂದು ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಸಮೀಪ ಹರಿಯುವ ಕಾವೇರಿ ನದಿಯಲ್ಲಿ ಗಣಪತಿ ವಿಗ್ರಹವನ್ನು ವಿಸರ್ಜನೆ ನಡೆಸಲಾಯಿತು.
ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷ ಸಮಿತಿ ಸದಸ್ಯರು, ಯಂಗ್ ಸ್ಟಾರ್ ಅಸೋಸಿಯೇಷನ್ ಅಧ್ಯಕ್ಷ, ಪದಾಧಿಕಾರಿಗಳು ಸೇರಿದಂತೆ ನೂರಾರು ಯುವಕರ ತಂಡ, ಗ್ರಾಮಸ್ಥರು ಇದ್ದರು.ಸಿದ್ದಾಪುರ: ನೆಲ್ಲಿಹುದಿಕೇರಿ ಗ್ರಾಮದ ನಾಲ್ಕನೇ ವಿಭಾಗದ ಶ್ರೀ ಸಿದ್ಧಿ ವಿನಾಯಕ ಮಿತ್ರ ಮಂಡಳಿ ವತಿಯಿಂದ ಪ್ರತಿಷ್ಠಾಪನೆ ಮಾಡಿರುವ ಗೌರಿ - ಗಣೇಶ ಉತ್ಸವಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಈ ಭಾಗದಲ್ಲಿ ಸೌಹಾರ್ದತೆಯಿಂದ ಎಲ್ಲಾ ಧರ್ಮೀಯರು ಸೇರಿ ಆಚರಿಸುತ್ತಿರುವ ಶ್ರೀ ಗೌರಿ - ಗಣೇಶ ಉತ್ಸವ ಎಲ್ಲರಿಗೂ ಮಾದರಿಯಾಗಿದೆ ಹಾಗೂ ವಿಶಿಷ್ಟವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಶ್ರೀ ಸಿದ್ಧಿ ವಿನಾಯಕ ಮಿತ್ರ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳಾದ ವಿಜಯನ್, ಬೈಜು, ಲೋಹಿತ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಧೋಲ್ಪಾಡಿ ಯಶ್, ಷಂಶುದ್ದೀನ್, ಕೆ.ಎಂ. ಬಷೀರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಫ್ಸಲ್, ಗೌರಿ - ಗಣೇಶ ಉತ್ಸವ ಸಮಿತಿಯ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.ಐಗೂರು: ಐಗೂರು ವ್ಯಾಪ್ತಿಯಲ್ಲಿ ಗೌರಿ - ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದ ಸ್ಥಳಗಳಿಗೆ ಸಮಾಜ ಸೇವಕ ಎಡಿಕೇರಿ ಪ್ರಸನ್ನ ಭೇಟಿ ನೀಡಿ ಸಹಾಯಧನ ವಿತರಿಸಿದರು.
ಮುತ್ತಪ್ಪ ದೇವಾಲಯದಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಿದ್ದ ಐಗೂರಿನ ಭಗತ್ ಸಿಂಗ್ ರಾಷ್ಟçಪ್ರೇಮಿ ಸಂಘಕ್ಕೆ ರೂ. ೫,೦೦೦, ವಿಜಯನಗರದ ಗಣಪತಿ ಸೇವಾ ಸಮಿತಿಗೆ ರೂ. ೫,೦೦೦, ಯಡವಾರೆಯ ಗಣಪತಿ ಸಮಿತಿಗೆ ರೂ. ೫,೦೦೦, ದುರ್ಗಾ ನಗರದ ಗಣಪತಿ ಸೇವಾ ಸಮಿತಿಗೆ ರೂ. ೫,೦೦೦, ಗರಗಂದೂರು ಬಿ ಗ್ರಾಮದ ಗಣಪತಿ ಸಮಿತಿಗೆ ರೂ. ೫,೦೦೦, ಕುಂಬೂರು ಗಣಪತಿ ಸೇವಾ ಸಮಿತಿಗೆ ರೂ. ೫,೦೦೦ ಸಹಾಯಧನ ವಿತರಿಸಿದರು. ಈ ಸಂದರ್ಭ ಆಯಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.ನಾಪೋಕ್ಲು: ಅವಂದೂರು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಶ್ರೀ ಮಹಾಗಣಪತಿ ದೇಗುಲದಲ್ಲಿ ಗಣಹೋಮ ಪೂಜಾ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ಜರುಗಿತು.
ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಇದೇ ಮೇ ತಿಂಗಳಿನಲ್ಲಿ ನಡೆದಿದ್ದು ಈ ಸಂದರ್ಭದಲ್ಲಿ ಶ್ರೀ ಮಹಾಗಣಪತಿ ದೇವರ ದೇಗುಲವನ್ನು ಶ್ರೀ ಕೃಷ್ಣ ದೇವರ ನೈರುತ್ಯ ಭಾಗದಲ್ಲಿ ಪೂರ್ವಾನ್ಮುಖವಾಗಿ ಪ್ರತಿಷ್ಠಾಪನೆ ಮಾಡಲಾಗಿದೆ.
ದೇವಸ್ಥಾನದ ಪ್ರಧಾನ ಅರ್ಚಕರಾದ ದಿನೇಶ್ ಭಟ್ ಇವರಿಂದ ಶ್ರೀ ದೇವರಿಗೆ ದೀಪ ಪ್ರಜ್ವಲನೆ, ಆಚಮನ ಮತ್ತು ಪ್ರಾಣಾಯಾಮ, ಸಂಕಲ್ಪ, ಕಲಶ ಪೂಜೆ, ಪ್ರಾಣ ಪ್ರತಿಷ್ಠಾಪನೆ, ಶೋಡಶೋಪಚಾರ ಪೂಜೆ, ವಸ್ತ್ರ ಮತ್ತು ಅಲಂಕಾರ, ಅರ್ಚನೆ, ಧೂಪ ಮತ್ತು ದೀಪ ದರ್ಶನ, ನೈವೇದ್ಯ, ಮಂಗಳಾರತಿ, ಪ್ರದಕ್ಷಿಣೆ ಮತ್ತು ನಮಸ್ಕಾರ ಹಾಗೂ ಇನ್ನಿತರ ಪೂಜಾ ವಿಧಿ ವಿಧಾನ ನೆರವೇರಿತು. ಕಾರ್ಯಕ್ರಮದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ, ದೇವಸ್ಥಾನ ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ನಾಪೋಕ್ಲು: ಇಲ್ಲಿಯ ಇಂದಿರಾನಗರದ ವಿವೇಕಾನಂದ ಸಂಘ ಗಣೇಶೋತ್ಸವ ಸೇವಾ ಸಮಿತಿಯಿಂದ ಆಯೋಜಿಸಿದ್ದ ಗೌರಿ - ಗಣೇಶೋತ್ಸವ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಭಾಗವಹಿಸಿ ನಾಡಿನ ಸುಭಿಕ್ಷೆಗಾಗಿ ಪ್ರಾರ್ಥಿಸಿದರು.
ಈ ಸಂದರ್ಭ ಸಂಘದ ಪರವಾಗಿ ಶಾಸಕರನ್ನು ಗೌರವಿಸಲಾಯಿತು. ಸಂಘದ ಅಧ್ಯಕ್ಷ ಟಿ.ಕೆ. ಶಿವ, ಉಪಾಧ್ಯಕ್ಷ ಎನ್. ಆನಂದ, ಖಜಾಂಚಿ ರೇಣುಕೇಶ್, ಸಂಘದ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ಪಂಚಾಯಿತಿ ಮಾಜಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಪಂಚಾಯಿತಿ ಮಾಜಿ ಸದಸ್ಯ ಮಾಚೆಟ್ಟಿರ ಕುಸು ಕುಶಾಲಪ್ಪ, ಕುಲ್ಲೇಟಿರ ಅರುಣ್ ಬೇಬ, ಹೇಮಾ ಅರುಣ್, ಇಸ್ಮಾಯಿಲ್ ಮತ್ತು ಇತರ ಪ್ರಮುಖರು ಉಪಸ್ಥಿತರಿದ್ದರು.ಚೆಯ್ಯಂಡಾಣೆ: ನರಿಯಂದಡ ಗ್ರಾಮದ ತಟ್ಟಮಕ್ಕಿಯ ಶ್ರೀ ವಿನಾಯಕ ಗೆಳೆಯರ ಬಳಗದ ಆಶ್ರಯದಲ್ಲಿ ೩ನೇ ವರ್ಷದ ಶ್ರೀ ಗೌರಿ - ಗಣೇಶೋತ್ಸವವನ್ನು ಆಚರಿಸಲಾಯಿತು.
ತಾ. ೧೪ ರಂದು ಬೆಳಿಗ್ಗೆ ಮಹಾ ಗಣಪತಿ ಹೋಮ, ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮಹಾಪೂಜೆ, ಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಿತು. ಬಳಿಕ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಊರಿನ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪಾಲ್ಗೊಂಡ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಪೂಜಾ ಕಾರ್ಯಗಳ ನೇತೃತ್ವವನ್ನು ಭಗವತಿ ದೇವಸ್ಥಾನದ ಅರ್ಚಕರಾದ ಶಿವಶರ್ಮ ವಹಿಸಿದ್ದರು. ಸಂಜೆ ಶ್ರೀ ಮಹಾ ಗಣಪತಿ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಚೆಯ್ಯಂಡಾಣೆ ರಥ ಬೀದಿಯಿಂದ ಶೋಭಾಯಾತ್ರೆ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಯುವಕರು ಹಾಗೂ ಪುಟಾಣಿ ಮಕ್ಕಳು ನಡೆಸಿದ ನೃತ್ಯಗಳು ನೋಡುಗರ ಗಮನ ಸೆಳೆದವು.
ರಸ್ತೆಯುದ್ದಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಮೆರವಣಿಗೆಯಲ್ಲಿ ವಿವಿಧ ವೇಷಧಾರಿಗಳು ಗಮನ ಸೆಳೆದವು. ಭಕ್ತರಿಂದ ಜೈಘೋಷಗಳು ಮೊಳಗಿದವು. ಬಳಿಕ ಶ್ರೀ ಗಣಪತಿ ಮೂರ್ತಿಯನ್ನು ವಿಧಿವಿಧಾನಗಳೊಂದಿಗೆ ವಿಸರ್ಜಿಸಲಾಯಿತು.
ಈ ಸಂದರ್ಭ ಶ್ರೀ ವಿನಾಯಕ ಗೆಳೆಯರ ಬಳಗದವರು, ಗ್ರಾಮಸ್ಥರು, ಮತ್ತಿತರರು ಪಾಲ್ಗೊಂಡಿದರು.ಕೂಡಿಗೆ: ಕೂಡಿಗೆ ಡೈರಿ ಅಧಿಕಾರಿ ವರ್ಗದವರು ಮತ್ತು ಕಾರ್ಮಿಕ ವೃಂದದ ವತಿಯಿಂದ ಗೌರಿ - ಗಣೇಶ ಹಬ್ಬದ ಅಂಗವಾಗಿ ಗೌರಿ - ಗಣಪತಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಹಬ್ಬಾಚರಣೆ ಅಂಗವಾಗಿ ಡೈರಿ ಮುಂಭಾಗ ಆವರಣವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಈ ಸಂದರ್ಭ ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್, ಡೈರಿ ವ್ಯವಸ್ಥಾಪಕ ನಂದೀಶ್ ಸೇರಿದಂತೆ ಅಧಿಕಾರಿ ವರ್ಗದವರು, ಕಾರ್ಮಿಕ ವೃಂದವರು ಹಾಜರಿದ್ದರು.ಗೋಣಿಕೊಪ್ಪಲು: ಗೋಣಿಕೊಪ್ಪಲುವಿನ ಶ್ರೀ ಸ್ವಾಮಿ ವಿವೇಕಾನಂದ ಬಡಾವಣೆ ನಾಗರಿಕ ವೇದಿಕೆ ವತಿಯಿಂದ ಸ್ವರ್ಣ ಭವನದಲ್ಲಿ ೨ನೇ ವರ್ಷದ ಗೌರಿ - ಗಣೇಶ ಪ್ರತಿಷ್ಠಾಪನೆ ಜರುಗಿತು.
೨ನೇ ವರ್ಷದ ಗೌರಿ - ಗಣೇಶೋತ್ಸವದ ಅಧ್ಯಕ್ಷರಾಗಿ ಗಾಂಧಿಯವರು ಕಾಯ ðನಿರ್ವಹಿಸಿದರು. ಮುಂಜಾನೆ ೬.೩೦ ಗಂಟೆಗೆ ಗೌರಿ ಹಾಗೂ ಗಣೇಶ ಮೂರ್ತಿಯನ್ನು ಕುಳ್ಳಿರಿಸಿ ಪೂಜಾ ಕಾರ್ಯವನ್ನು ನೆರವೇರಿಸಿದರು. ಬಡಾವಣೆಯ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಟೋಟ ಸ್ಪರ್ಧೆಗಳು ನಡೆಯಲಿದೆ ಎಂದು ಆಡಳಿತ ಮಂಡಳಿ ಪದಾಧಿಕಾರಿಗಳು ತಿಳಿಸಿದರು.