ಸೋಮವಾರಪೇಟೆ, ಸೆ. ೧೯: ತಾಲೂಕಿನ ರೆಸಾರ್ಟ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಛತ್ತೀಸ್ಗಡ್ ರಾಜ್ಯದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗರ್ವಾಲೆ ಗ್ರಾಮದ ರೆಸಾರ್ಟ್ ವೊಂದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ ಛತ್ತೀಸ್ಗಡ್ ರಾಜ್ಯದ ಬಿಲಾಸ್ಪುರ್ ಜಿಲ್ಲೆ, ಆಮದ್ನಾದ್ ನಿವಾಸಿ ದುರ್ಗೇಶ್ ಕುಮಾರ್ ಮಾರ್ಕೋ ಎಂಬವರು ಕಳೆದ ತಾ. ೧೬ರಿಂದ ನಾಪತ್ತೆಯಾಗಿರುವುದಾಗಿ ರೆಸಾರ್ಟ್ನ ಅಕೌಂಟೆAಟ್ ಟಿ.ಜಿ. ರಿಜೇಶ್ ಅವರು ದೂರು ನೀಡಿದ್ದಾರೆ.
ನಾಪತ್ತೆಯಾಗಿರುವ ದುರ್ಗೇಶ್ ಕುಮಾರ್ ಮಾರ್ಕೋ ಪತ್ತೆಯಾದಲ್ಲಿ ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ೯೪೮೦೮೦೪೯೫೨ ಸಂಖ್ಯೆಗೆ ಮಾಹಿತಿ ನೀಡುವಂತೆ ಇನ್ಸ್ಪೆಕ್ಟರ್ ಮುದ್ದು ಮಹದೇವ ಅವರು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.