ಮಡಿಕೇರಿ, ಸೆ. ೧೭: ಕೊಡಗು ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಸಂಬAಧ ಎರಡು ಕ್ಷೇತ್ರಗಳಲ್ಲಿ ಒಟ್ಟು ೫೮,೮೯೩ ಮತದಾರರಿಗೆ ನೋಟೀಸ್ ಜನರೇಟ್ ಮಾಡಲಾಗಿದೆ.
ಸೆ.೧೭ರವರೆಗೆ ೫೮,೮೮೩ ನೋಟೀಸ್ ಜನರೇಟ್ ಆಗಿದ್ದು, ೫೮,೦೯೩ ನೋಟೀಸ್ಗಳನ್ನು ವಿತರಿಸಲಾಗಿದೆ. ೭೯೦ ನೋಟೀಸ್ ವಿತರಣೆ ಬಾಕಿ ಇದೆ. ವಿತರಿಸಿದ ನೋಟೀಸ್ಗಳಲ್ಲಿ ೨೬,೨೦೪ ಮಂದಿಯ ವಿಚಾರಣೆ ಪೂರ್ಣಗೊಂಡಿದೆ.
ಮಡಿಕೇರಿ ಕ್ಷೇತ್ರದಲ್ಲಿ ೧೮,೭೮೫ ಮಂದಿಗೆ ನೋಟಿಸ್ ಜನರೇಟ್ ಆಗಿದ್ದು, ೧೮,೨೬೪ ವಿತರಣೆ ಮತ್ತು ೭,೪೩೧ ವಿಚಾರಣೆ ಪೂರ್ಣಗೊಂಡಿದೆ. ವೀರಾಜಪೇಟೆ ಕ್ಷೇತ್ರದಲ್ಲಿ ೪೦,೧೦೮ ಮಂದಿಗೆ ನೋಟೀಸ್ ಜನರೇಟ್ ಆಗಿದ್ದು, ೩೯,೮೨೯ ವಿತರಣೆ ಮತ್ತು ೧೮,೭೭೩ ವಿಚಾರಣೆ ಪೂರ್ಣಗೊಂಡಿದೆ.
ನೋಟೀಸ್ ನೀಡಲಾದ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಪ್ರಕರಣಗಳಲ್ಲಿ ೩೫,೮೧೦ ಲಾಜಿಕಲ್ ಡಿಸ್ಕೆçಪೆನ್ಸಿ ಮತ್ತು ೨೩,೦೮೩ ನೋ ಮ್ಯಾಪಿಂಗ್ ಪ್ರಕರಣಗಳು ಸೇರಿವೆ. ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ೭೩ ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಿಸಲಾಗಿದೆ. - ಕೆ.ಎಂ ಇಸ್ಮಾಯಿಲ್ ಕಂಡಕರೆ