ಮಡಿಕೇರಿ, ಸೆ. ೧೭: ತಲಕಾವೇರಿ ವ್ಯಾಪ್ತಿಯಲ್ಲಿ ಗುರುವಾರ ಅಪರಾಹ್ನ ಸುಮಾರು ೨ ಇಂಚುಗಳಷ್ಟು ಮಳೆ ಸುರಿದಿದೆ. ಅಪರಾಹ್ನ ೧.೩೦ ರಿಂದ ೩ ಗಂಟೆಯ ತನಕ ಭಾರೀ ಸಿಡಿಲಿನ ಸಹಿತವಾಗಿ ಧಾರಕಾರ ಮಳೆಯಾಗಿದೆ. ಕ್ಷೇತ್ರ ವ್ಯಾಪ್ತಿಗೆ ಈ ಪ್ರಸಕ್ತ ವರ್ಷ ಈ ತನಕ ೧೯೩ ಇಂಚು ಮಳೆಯಾಗಿತ್ತು.