ಕೂಡಿಗೆ, ಸೆ. ೧೭: ಅಪಘಾತವೊಂದರಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕೂಡಿಗೆ ಕುಶಾಲನಗರ ಹಾಸನ ಹೆದ್ದಾರಿಯ ಕೂಡುಮಂಗಳೂರು ಗ್ರಾಮದಲ್ಲಿ ನಡೆದಿದೆ.
ಕುಶಾಲನಗರದಿಂದ ಕೂಡಿಗೆಯತ್ತ ಬೈಕ್‌ನಲ್ಲಿ ಬ್ಯಾಡಗೊಟ್ಟದ ಸುಬ್ರಮಣಿ ಹಾಗೂ ಸಿದ್ದು ಎಂಬವರುಗಳು ತೆರಳುತ್ತಿದ್ದಾಗ ಹಾಲಿನ ಟ್ಯಾಂಕರ್ ಅನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಮತ್ತೊಂದು ಬೈಕ್‌ಗೆ ಡಿಕ್ಕಿಯಾಗಿ ನೆಲಕ್ಕುರುಳಿದ್ದು, ಹಿಂಬದಿಯಿAದ ಬಂದ ಹಾಲಿನ ಟ್ಯಾಂಕರ್ ಬೈಕ್‌ಗೆ ಡಿಕ್ಕಿ ಹೊಡೆದು ಸವಾರ ಸುಬ್ರಮಣಿ (೩೨) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈತನೊಂದಿಗೆ ಬೈಕ್ ಹಿಂಬದಿಯಲ್ಲಿದ್ದ ಸಿದ್ದುವಿನ ಕಾಲು ಮತ್ತು ಮುಖ ಭಾಗಕ್ಕೆ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ. ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.