ಸೋಮವಾರಪೇಟೆ, ಸೆ. ೧೭: ಸಮೀಪದ ಶಾಂತಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ.೫೫ ಲಕ್ಷ ಲಾಭಗಳಿಸಿದ್ದು, ಸದಸ್ಯರಿಗೆ ಶೇ. ೫ ರಷ್ಟು ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಆರ್. ಶಿವಕುಮಾರ್ ತಿಳಿಸಿದರು.

ಶಾಂತಳ್ಳಿ ಶ್ರೀಕುಮಾರಲಿಂಗೇಶ್ವರ ಜಾತ್ರಾ ಮೈದಾನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘದಿAದ ಸದಸ್ಯರಿಗೆ ೧೮.೨೪ ಕೋಟಿ ಅಲ್ಪಾವಧಿ ಕೆ.ಸಿ.ಸಿ ಸಾಲ ವಿತರಿಸಲಾಗಿದೆ. ೧೧ ಲಕ್ಷ ವೇತನ ಆಧಾರಿತ ಸಾಲ, ೪.೪೭ ಕೋಟಿ ಪಿಗ್ಮಿ ಆಧಾರಿತ ಸಾಲ, ೧೫.೩೩ ಲಕ್ಷ ಆಭರಣ ಸಾಲ, ೩೫.೮೨ ಲಕ್ಷ ಸ್ವ-ಸಹಾಯ ಗುಂಪು ಸಾಲ, ೧.೪೨ ಕೋಟಿ ರಸಗೊಬ್ಬರ ಸಾಲ, ೩.೮೯ ಕೋಟಿ ಜಾಮೀನು ಸಾಲ, ೭.೯೯ ಲಕ್ಷ ಆಡಳಿತ ಮಂಡಳಿ ಸದಸ್ಯರ ಸಾಲ, ೩ ಲಕ್ಷ ನಿರಖು ಠೇವಣಿ ಸಾಲ ಸೇರಿದಂತೆ ಒಟ್ಟು ೨೮.೭೭ ಕೋಟಿ ಸಾಲ ವಿತರಣೆ ಮಾಡಲಾಗಿದ್ದು, ಸಾಲದ ವಸೂಲಾತಿ ಶೇ.೯೯ ರಷ್ಟಿದೆ ಎಂದು ಸಭೆಗೆ ತಿಳಿಸಿದರು.

ವರದಿ ಸಾಲಿನಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿAದ ೧೮.೧೦ ಕೋಟಿ ಸಾಲ ಪಡೆದಿದ್ದು, ರೂ. ೧೫.೫೩ ಕೋಟಿ ಮರುಪಾವತಿಸಲಾಗಿದೆ. ಸಂಘದ ಸ್ವಂತ ಬಂಡವಾಳದಿAದ ೧೦.೬೬ ಕೋಟಿ ಸಾಲ ವಿತರಿಸಲಾಗಿದೆ. ಪಿಗ್ಮಿ ಸಾಲದ ಮೇಲೆ ವಿಮೆ ಸಂಗ್ರಹ ಮಾಡಿದ್ದು, ಪ್ರಸಕ್ತ ಸಾಲಿನಲ್ಲಿ ಮೃತರಾದ ೫ ಮಂದಿ ಸಾಲಗಾರರ ಸಾಲವನ್ನು ವಿಮೆಯಿಂದ ಹೊಂದಾಣಿಕೆ ಮಾಡಲಾಗಿದೆ ಎಂದರು.

ಸಹಕಾರ ಸಂಘದ ಉಳಿವು ಸದಸ್ಯರ ಮೇಲೆ ಅವಲಂಬಿತವಾಗಿದ್ದು, ಸಹಕಾರ ಸಂಘದಲ್ಲಿ ಹೆಚ್ಚಿನ ವ್ಯವಹಾರ ನಡೆಸುವ ಮೂಲಕ ಸದಸ್ಯರು ಆರ್ಥಿಕವಾಗಿ ಸಬಲರಾಗಬೇಕು. ಸಂಘದಿAದ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ ಸಂಘದ ಬೆಳವಣಿಗೆಗೆ ಶ್ರಮಿಸಬೇಕು. ಗ್ರಾಮೀಣ ಭಾಗದಲ್ಲಿ ಸಹಕಾರ ಕ್ಷೇತ್ರ ಇನ್ನಷ್ಟು ಬಲಗೊಳ್ಳಲು ಸದಸ್ಯರ ಸಹಕಾರ ಅಗತ್ಯವಾಗಿದೆ ಎಂದು ಅಭಿಪ್ರಾಯಿಸಿದರು.

ಸಭೆಯಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು.

ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಸಂಧ್ಯಾ ಅವರು ವಾರ್ಷಿಕ ವರದಿ ಮಂಡಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಪಿ.ಕುಮಾರ್, ನಿರ್ದೇಶಕರಾದ ಬಿ.ಎ. ಧರ್ಮಪ್ಪ, ಬಿ.ಈ. ಜಯೇಂದ್ರ, ಜಿ.ಹೆಚ್. ರಾಜೇಶ್, ಯು.ಎಂ. ಸುಖಾಂತ್ ಬಸವರಾಜು, ಪಿ.ಎಸ್. ಅರುಣ್, ಡಿ.ಎಸ್. ಲಿಂಗರಾಜು, ಹೆಚ್.ಕೆ. ತ್ರಿಶೂಲ್, ಬಿ.ಟಿ. ಪರಮೇಶ್, ಎಸ್.ಎಂ. ನಿಶಾಂತ್, ಕೆ.ಕೆ. ಚಂದ್ರಾವತಿ, ಬಿ.ಎಲ್. ಅನಿತಾ, ಸಹಕಾರ ಸಂಘಗಳ ಮೇಲ್ವಿಚಾರಕ ಉದಯ್‌ಕುಮಾರ್, ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಜೋಯಪ್ಪ ಅವರುಗಳು ಉಪಸ್ಥಿತರಿದ್ದರು.