ಸೋಮವಾರಪೇಟೆ, ಸೆ. ೧೬: ಜೆಸಿಐ ಸೋಮವಾರಪೇಟೆ ಪುಷ್ಪಗಿರಿ ವತಿಯಿಂದ ಸಮೀಪದ ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೂಥ್ ಲೀಡರ್‌ಶಿಪ್ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.

ಜೇಸೀ ಸಂಸ್ಥೆಯ ಮಾಜಿ ಜೋನ್ ಆಫೀಸರ್ ವಿದ್ಯಾ ಸೋಮೇಶ್ ಅವರು ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣಗಳು, ಜವಾಬ್ದಾರಿ, ಆತ್ಮವಿಶ್ವಾಸ ಹಾಗೂ ಉತ್ತಮ ನಾಯಕತ್ವದ ಮಹತ್ವದ ಕುರಿತು ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಜ್ಯೋತಿ, ಮಾಯಾ, ಲೇಡಿ ಚೇರ್‌ಪರ್ಸನ್ ಶ್ರೀಜಾ, ಖಜಾಂಚಿ ಪವಿತ್ರ ಹಾಗೂ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.