ಮಡಿಕೇರಿ, ಸೆ. ೧೬: ಹಿಂದುಳಿದ ವರ್ಗಗಳ ಪ್ರವರ್ಗ-೩ಎ ನಲ್ಲಿ ಬರುವ ಒಕ್ಕಲಿಗ ಸಮುದಾಯಗಳಿಗೆ ಸೇರಿದ ಒಕ್ಕಲಿಗ, ವಕ್ಕಲಿಗ, ಸರ್ಪಒಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ, ನಾಮಧಾರಿ ಒಕ್ಕಲಿಗ, ಗಂಗಡ್ಕಾರ್ ಒಕ್ಕಲಿಗ, ದಾಸ್‌ಒಕ್ಕಲಿಗ, ರೆಡ್ಡಿಒಕ್ಕಲಿಗ, ಮರಸು ಒಕ್ಕಲಿಗ, ಗೌಡ/ ಗೌಡ, ಹಳ್ಳಿಕಾರ್, ಕುಂಚಿಟಿಗ, ಗೌಡ, ಕಾಪು, ಹೆಗ್ಗಡೆ, ಕಮ್ಮ, ರಡ್ಡಿ, ಗೌಂಡರ್, ನಾಮಧಾರಿ ಗೌಡ, ಉಪ್ಪಿನಕೊಳಗ/ ಉತ್ತಮ ಕೊಳಗ ಸಮುದಾಯಕ್ಕೆ ಸೇರಿದ ಜನರ ಅಭಿವೃದ್ಧಿಗಾಗಿ ೨೦೨೬-೨೭ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಸ್ವಯಂ ಉದ್ಯೋಗ ನೇರಸಾಲ ಯೋಜನೆ, ತೆರೆದಬಾವಿ, ಸ್ವಾವಲಂಬಿ ಸಾರಥಿ ಯೋಜನೆ, ಸ್ವಯಂ ಉದ್ಯೋಗ ಸಾಲ ಯೋಜನೆ (ಬ್ಯಾಂಕುಗಳ ಸಹಯೋಗದೊಂದಿಗೆ), ಶೈಕ್ಷಣಿಕ ಸಾಲ ಯೋಜನೆ, ವಿದೇಶ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ ಯೋಜನೆ, ಸ್ವಾತಂತ್ರö್ಯ ಮಹೋತ್ಸವದ ಅಮೃತ ಮುನ್ನಡೆ ಯೋಜನೆಯ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಹೀಗೆ ವಿವಿಧ ಯೋಜನೆಗಳಲ್ಲಿ ಸೌಲಭ್ಯ ಪಡೆಯ ಬಯಸುವವರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಸ್ವಯಂ ಉದ್ಯೋಗ ನೇರಸಾಲ ಯೋಜನೆ: ಸ್ವಯಂ ಉದ್ಯೋಗ ಕೈಗೊಳ್ಳಲು ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ಅವರ ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶದವರಿಗೆ ರೂ.೯೮ ಸಾವಿರ ಹಾಗೂ ನಗರ ಪ್ರದೇಶದವರಿಗೆ ರೂ.೧.೨೦ ಲಕ್ಷ ಗಳ ಮಿತಿಯಲ್ಲಿರಬೇಕು ಹಾಗೂ ಅರ್ಜಿದಾರರ ವಯಸ್ಸು ೧೮-೫೫ ವರ್ಷದೊಳಗಿರಬೇಕು. ಆರ್ಥಿಕ ಚಟುವಟಿಕೆಗಳಿಗನುಸಾರ ಸಾಲ ಮತ್ತು ಸಹಾಯಧನ ಸೌಲಭ್ಯವನ್ನು ನಿಗಮದಿಂದ ಒದಗಿಸಲಾಗುವುದು. ಘಟಕ ವೆಚ್ಚ ರೂ.೨ ಲಕ್ಷಗಳಿಗೆ ಶೇ.೩೦ ರಷ್ಟು ಗರಿಷ್ಠ ರೂ.೩೦ ಸಾವಿರಗಳ ಸಹಾಯಧನ ಉಳಿಕೆ ಶೇ.೭೦ರಷ್ಟು ರೂ.೧.೭೦ ಲಕ್ಷಗಳನ್ನು ವಾರ್ಷಿಕ ಶೇ.೪ ರ ಬಡ್ಡಿದರದಲ್ಲಿ ಸಾಲ. ರೂ.೧ ಲಕ್ಷಕ್ಕಿಂತ ಹೆಚ್ಚಿನ ಸಾಲದ ಭದ್ರತೆಗೆ ಸಾಲದ ಮೊತ್ತದಷ್ಟು ಮೌಲ್ಯವಿರುವ ಅರ್ಜಿದಾರರು / ಜಾಮೀನುದಾರರ ಸ್ತಿರಾಸ್ತಿಯನ್ನು ನಿಗಮದ ಹೆಸರಿಗೆ ಆಧಾರ ಮಾಡಬೇಕು.

ಗಂಗಾ ಕಲ್ಯಾಣ ನೀರಾವರಿ ಯೋಜನೆ: ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ವಾರ್ಷಿಕ ಆದಾಯ ರೂ. ೯೮ ಸಾವಿರ ಮಿತಿಯೊಳಗಿರುವ ಸಣ್ಣ ಮತ್ತು ಅತಿಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು. ಘಟಕ ವೆಚ್ಚ ರೂ. ೩.೭೫ ಲಕ್ಷ ಇದರಲ್ಲಿ ಸಹಾಯಧನ, ರೂ. ೩.೨೫ ಲಕ್ಷ ಸಾಲ ರೂ.೫೦ ಸಾವಿರ ಸಾಲವನ್ನು ಶೇ.೪ ಬಡ್ಡಿ ದರದಲ್ಲಿ ಮಂಜೂರು ಮಾಡಲಾಗುವುದು. ಘಟಕ ವೆಚ್ಚ ರೂ. ೩.೭೫ ಲಕ್ಷ ಇದರಲ್ಲಿ ಸಹಾಯಧನ ರೂ. ೩.೨೫ ಲಕ್ಷ ಸಾಲ ರೂ. ೫೦ ಸಾವಿರಗಳ ಸಾಲವನ್ನು ಶೇ.೪ ಬಡ್ಡಿ ದರದಲ್ಲಿ ಮಂಜೂರು ಮಾಡಲಾಗುವುದು. ಸಹಾಯಧನ ಮೊತ್ತದಲ್ಲಿ ಪ್ರತಿ ಕೊಳವೆ ಬಾವಿಗೆ ರೂ. ೭೫ ಸಾವಿರಗಳನ್ನು ವಿದ್ಯುದ್ದೀಕರಣಕ್ಕೆ ಎಸ್ಕಾಂಗಳಿಗೆ ಪಾವತಿ ಮಾಡಲಾಗುವುದು. ಒಂದೇ ಸ್ಥಳದಲ್ಲಿ ಹೊಂದಿಕೊAಡAತೆ ಕನಿಷ್ಟ ೨ ಎಕರೆ ಜಮೀನು ಇರಬೇಕು.

ತೆರೆದಬಾವಿ: ಕರಾವಳಿ ಹಾಗೂ ಮಲೆನಾಡು ಪ್ರದೇಶದ ಜಿಲ್ಲೆಗಳಲ್ಲಿ ವೈಯಕ್ತಿಕ ನೀರಾವರಿ ಕೊಳವೆ ಬಾವಿ ಯೋಜನೆಗೆ ನಿಗದಿಪಡಿಸಿದ ಘಟಕ ವೆಚ್ಚದಲ್ಲಿ ತೆರೆದ ಬಾವಿ ನೀರಾವರಿ ಸೌಲಭ್ಯ ಒದಗಿಸಲು ಅವಕಾಶವಿರುತ್ತದೆ.

ಸ್ವಾವಲಂಬಿ ಸಾರಥಿ ಯೋಜನೆ: ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ಅವರ ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶದವರಿಗೆ ರೂ.೯೮ ಸಾವಿರ ಹಾಗೂ ನಗರ ಪ್ರದೇಶದವರಿಗೆ ರೂ.೧.೨೦ ಲಕ್ಷಗಳ ಮಿತಿಯಲ್ಲಿರಬೇಕು ಹಾಗೂ ಅರ್ಜಿದಾರರ ವಯಸ್ಸು ೨೧-೪೫ ವರ್ಷದೊಳಗಿರುವ ಯುವ ಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸ್ವಾವಲಂಬಿ ಸಾರಥಿ ಯೋಜನೆಯಡಿ ನಾಲ್ಕು ಚಕ್ರವಾಹನ ಖರೀದಿಗೆ ಪಡೆಯುವ ಸಾಲಕ್ಕೆ ಶೇ.೫೦ ರಷ್ಟು ಗರಿಷ್ಟ ೩ ಲಕ್ಷಗಳ ಸಹಾಯಧನವನ್ನು ನಿಗಮದಿಂದ ಮಂಜೂರು ಮಾಡಲಾಗುವುದು. ಉಳಿಕೆ ಮೊತ್ತವನ್ನು ಬ್ಯಾಂಕ್‌ಗಳ ಮೂಲಕ ಅವರು ವಿಧಿಸುವ ಚಾಲ್ತಿ ಬಡ್ಡಿದರದಲ್ಲಿ ಸಾಲ ಪಡೆಯುವುದು.

ಸ್ವಯಂ ಉದ್ಯೋಗ ಸಾಲ ಯೋಜನೆ (ಬ್ಯಾಂಕುಗಳ ಸಹಯೋಗದೊಂದಿಗೆ): ಸ್ವಯಂ ಉದ್ಯೋಗ ಮಾಡಲು ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ಅವರ ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶದವರಿಗೆ ರೂ.೯೮ ಸಾವಿರ ಹಾಗೂ ನಗರ ಪ್ರದೇಶದವರಿಗೆ ರೂ.೧.೨೦ ಲಕ್ಷಗಳ ಮಿತಿಯಲ್ಲಿರಬೇಕು ಹಾಗೂ ಅರ್ಜಿದಾರರ ವಯಸ್ಸು ೧೮-೫೫ ವರ್ಷದೊಳಗಿದ್ದು, ಅವರು ಕೈಗೊಳ್ಳುವ ಆರ್ಥಿಕ ಚಟುವಟಿಕೆಗಳು / ಉದ್ಯಮಗಳಿಗೆ ಬ್ಯಾಂಕ್‌ಗಳ ಮೂಲಕ ಸಾಲ ಪಡೆದಲ್ಲಿ ನಿಗಮದಿಂದ ಶೇ.೨೦ರಷ್ಟು ಗರಿಷ್ಠ ರೂ.೧ ಲಕ್ಷಗಳ ಸಹಾಯಧನ ಮಂಜೂರು ಮಾಡಲಾಗುವುದು. ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

ಶೈಕ್ಷಣಿಕ ಸಾಲ ಯೋಜನೆ: ಶೈಕ್ಷಣಿಕ ಸಾಲ ಯೋಜನೆಯಡಿ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳು ಸಿಇಟಿ / ನೀಟ್ ಮೂಲಕ ಪ್ರವೇಶ ಪಡೆದು ವೃತ್ತಿಪರ ಕೋರ್ಸುಗಳಾದ ಇಂಜಿಯರಿAಗ್, ವೈದ್ಯಕೀಯ, ದಂತ ವೈದ್ಯಕೀಯ ಮುಂತಾದ ೨೮ ಕೋರ್ಸುಗಳಲ್ಲಿನ ವ್ಯಾಸಂಗಕ್ಕಾಗಿ ವಾರ್ಷಿಕ ರೂ.೧ ಲಕ್ಷಗಳಂತೆ ಕೋರ್ಸ್ನ ಅವಧಿಗೆ ಗರಿಷ್ಠ ೪ ಲಕ್ಷಗಳಿಂದ ರೂ. ೫ ಲಕ್ಷಗಳಿಗೆ ವಾರ್ಷಿಕ ಶೇ.೨ರ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡಲಾಗುವುದು.

ಶೈಕ್ಷಣಿಕ ಸಾಲ ಯೋಜನೆಯಡಿ ೨೦೨೨-೨೩ನೇ ಸಾಲಿನಲ್ಲಿ ಸಾಲ ಪಡೆದ ವಿದ್ಯಾರ್ಥಿಗಳಿಗೆ ೨೦೨೬-೨೭ನೇ ಸಾಲಿಗೆ ೫ನೇ ಕಂತಿನ ನವೀಕರಣ ಸಾಲ ಮಂಜೂರು ಮಾಡಲು ೪ನೇ ವರ್ಷದ ವ್ಯಾಸಂಗ ದೃಢೀಕರಣ ಮತ್ತು ನಾಲ್ಕನೇ ವರ್ಷದ ಅಂಕ ಪಟ್ಟಿಯೊಂದಿಗೆ ಅರ್ಜಿ ಸಲ್ಲಿಸುವುದು. ೨೦೨೩-೨೪ ನೇ ಸಾಲಿನಲ್ಲಿ ಸಾಲ ಪಡೆದು ೨೦೨೬-೨೭ನೇ ಸಾಲಿನ ೪ನೇ ಕಂತಿನ ಸಾಲಕ್ಕೆ ೩ನೇ ವರ್ಷದ ವ್ಯಾಸಂಗ ದೃಢೀಕರಣ ಹಾಗೂ ಮೂರನೇ ವರ್ಷದ ಅಂಕಪಟ್ಟಿಯೊAದಿಗೆ ಅರ್ಜಿ ಸಲ್ಲಿಸುವುದು. ೨೦೨೪-೨೫ ನೇ ಸಾಲಿನಲ್ಲಿ ಸಾಲ ಪಡೆದು ೨೦೨೬-೨೭ನೇ ಸಾಲಿನ ೩ನೇ ಕಂತಿನ ಸಾಲಕ್ಕೆ ೨ನೇ ವರ್ಷದ ವ್ಯಾಸಂಗ ದೃಢೀಕರಣ ಹಾಗೂ ಎರಡನೇ ವರ್ಷದ ಅಂಕಪಟ್ಟಿಯೊAದಿಗೆ ಅರ್ಜಿ ಸಲ್ಲಿಸುವುದು. ೨೦೨೫-೨೬ ನೇ ಸಾಲಿನಲ್ಲಿ ಸಾಲ ಪಡೆದು ೨೦೨೬-೨೭ನೇ ಸಾಲಿನ ೨ನೇ ಕಂತಿನ ಸಾಲಕ್ಕೆ ೧ ನೇ ವರ್ಷದ ವ್ಯಾಸಂಗ ದೃಢೀಕರಣ ಹಾಗೂ ಮೊದಲನೇ ವರ್ಷದ ಅಂಕಪಟ್ಟಿಯೊAದಿಗೆ ಅರ್ಜಿ ಸಲ್ಲಿಸುವುದು.

ವಿದೇಶ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ ಯೋಜನೆ: ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳು ವಿದೇಶದಲ್ಲಿನ ಕಿS Woಡಿಟಜ Uಟಿiveಡಿsiಣಥಿ ಖಚಿಟಿಞiಟಿg ೧೦೦೦ ರೊಳಗೆ ಬರುವ ವಿಶ್ವವಿದ್ಯಾಲಯಗಳಲ್ಲಿ ಪೋಸ್ಟ್ ಡಾಕ್ಟೋರಲ್, ಪಿಹೆಚ್‌ಡಿ, ಮಾಸ್ಟರ್ ಡಿಗ್ರೀಕೋರ್ಸುಗಳಲ್ಲಿ ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆಯುವ ಅಭ್ಯರ್ಥಿಗಳಿಗೆ ವಾರ್ಷಿಕ ಗರಿಷ್ಠ ರೂ.೨೫ ಲಕ್ಷದಿಂದ ಕೋರ್ಸಿನ ಅವಧಿಗೆ ಗರಿಷ್ಠ ರೂ.೫೦ ಲಕ್ಷಗಳವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುವುದು. ಸಾಲದ ಭದ್ರತೆಗೆ ಸ್ಥಿರ ಆಸ್ತಿಯನ್ನು ನಿಗಮದ ಹೆಸರಿಗೆ ಆಧಾರ ಮಾಡಬೇಕು.

ಸ್ವಾತಂತ್ರ‍್ಯ ಮಹೋತ್ಸವದ ಅಮೃತ ಮುನ್ನಡೆ ಯೋಜನೆಯ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ: ಒಕ್ಕಲಿಗ ಸಮುದಾಯದ ನಿರುದ್ಯೋಗಿ ಅರ್ಹ ಯುವಜನರನ್ನು ಗುರುತಿಸಿ ಕೌಶಾಲ್ಯಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಧೀನ ತರಬೇತಿ ಸಂಸ್ಥೆಗಳಾದ (ಐಐಟಿ, ಜಿಟಿಟಿಸಿ, ಕೆಜಿಟಿಐಎಲ್, ಎಟಿಡಿಸಿ) ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಇದರ ಕೇಂದ್ರಗಳಾದ ಬೆಂಗಳೂರು, ಮುದ್ದೇನಹಳ್ಳಿ, ದಾಂಡೇಲಿ, ಇಳಕಲ್, ದಾವಣಗೆರೆ, ಕಲಬುರಗಿ ಮತ್ತು ಮೈಸೂರಿನಲ್ಲಿ ಇರುವ ಕೌಶಲ್ಯಾಭಿವೃದ್ಧಿ ಕೇಂದ್ರಗಳು, ಶ್ರೀಕಾಳಿದಾಸ ಶಿಕ್ಷಣ ಸಂಸ್ಥೆ ಗದಗ ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ ತರಬೇತಿ ಕೇಂದ್ರಗಳ ಮೂಲಕ ಅಲ್ಪಾವಧಿ ಮತ್ತು ಉತ್ಕೃಷ್ಟ ಕೌಶಲ್ಯ ತರಬೇತಿಯನ್ನು ಆಯೋಜಿಸುವ ಯೋಜನೆಯಾಗಿದ್ದು, ಉದ್ಯೋಗಿ ಮುಖಿಗಳನ್ನಾಗಿಸಲು ತರಬೇತಿ ಕೊಡಿಸಲಾಗುವುದು. ನಿಗಮವು ಅನುಷ್ಟಾನಗೊಳಿಸುವ ಈ ಯೋಜನೆಗಳಲ್ಲಿ ಮಾನ್ಯ ಶಾಸಕರು / ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಅವರ ಅಧ್ಯಕ್ಷತೆಯಲ್ಲಿ ರಚಿಸಿರುವ ಆಯ್ಕೆ ಸಮಿತಿಗಳ ಮೂಲಕ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಸರ್ಕಾರದ ವಿವೇಚನಾ ಕೋಟಾ/ ನಿಗಮದ ಅಧ್ಯಕ್ಷರು / ನಿರ್ದೇಶಕರ ಮಂಡಳಿಯ ವಿವೇಚನ ಕೋಟಾದಲ್ಲಿ ಸೌಲಭ್ಯ ಪಡೆಯಬಯಸುವವರೂ ಸಹ ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಬೇಕು. ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಈ ಯಾವುದಾದರೂ ಒಂದು ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವುದು. ೨೦೨೪-೨೫ ಮತ್ತು ೨೦೨೫-೨೬ನೇ ಸಾಲಿನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಆಯ್ಕೆ ಸಮಿತಿಗಳಲ್ಲಿ ಕಾರಣಾಂತರಗಳಿAದ ಆಯ್ಕೆಯಾಗದೇ ಇರುವ ಅರ್ಹ ಅರ್ಜಿದಾರರು ೨೦೨೬-೨೭ನೇ ಸಾಲಿಗೆೆ ಅರ್ಜಿಯನ್ನು ಸಲ್ಲಿಸುವ ಅವಶ್ಯಕವಿರುವುದಿಲ್ಲ. ಕಳೆದ ಸಾಲುಗಳಲ್ಲಿ ಸಲ್ಲಿಸಿದ ಅರ್ಜಿಯನ್ನೆ ಆಯ್ಕೆ ಸಮಿತಿಗಳ ಮುಂದೆ ಆಯ್ಕೆಗೆ ಮತ್ತೊಮ್ಮೆ ಮಂಡಿಸಲಾಗುವುದು.

ಈ ಯೋಜನೆಗಳಲ್ಲಿ ಸೌಲಭ್ಯ ಪಡೆಯ ಬಯಸುವ ಒಕ್ಕಲಿಗ ಸಮುದಾಯದ ಅರ್ಜಿದಾರರು ಸೇವಾಸಿಂಧು ಪೋರ್ಟಲ್‌ನಲ್ಲಿ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಗಳ ಮೂಲಕ ಆನ್‌ಲೈನ್ ಮೂಲಕ, ಸ್ವಾತಂತ್ರ ಅಮೃತ ಮುನ್ನಡೆ ಯೋಜನೆಗೆ ಅರ್ಜಿಯನ್ನು ಕೌಶಲ್ಯ ಕರ್ನಾಟಕ ಅಭಿವೃದ್ಧಿ ನಿಗಮದ ತಂತ್ರಾಶದ hಣಣಠಿs://ತಿತಿತಿ.ಞಚಿushಚಿಟಞಚಿಡಿ.ಛಿom ನಲ್ಲಿ ಅರ್ಜಿಯನ್ನು ಸೆಪ್ಟೆಂಬರ್.೩೦ ರೊಳಗೆ ಸಲ್ಲಿಸಬೇಕು.

ಯೋಜನೆಯ ಅರ್ಹತೆ, ಮತ್ತು ಸಲ್ಲಿಸುವ ದಾಖಲಾತಿಗಳ ಹೆಚ್ಚಿನ ಮಾಹಿತಿಗೆ ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದ ಜಾಲ ತಾಣ hಣಣಠಿs://ಞvಛಿಜಛಿ.ಞಚಿಡಿಟಿಚಿಣಚಿಞಚಿ.gov.iಟಿ ಅಥವಾ ನಿಗಮದ ದೂರವಾಣಿ ಸಂಖ್ಯೆ: ೦೮೦-೨೯೯೦೪೩೫೦, ೨೯೯೦೪೨೬೮ ಅನ್ನು ಸಂಪರ್ಕಿಸುವುದು ಅಥವಾ ಜಿಲ್ಲಾ ವ್ಯವಸ್ಥಾಪಕರು, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕೊಡಗು ಜಿಲ್ಲೆ, ಮಡಿಕೇರಿ ಇವರನ್ನು ದೂ.ಸಂ.೦೮೨೭೨-೨೨೧೬೫೬ ಮೂಲಕ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.