ಚೆಯ್ಯಂಡಾಣೆ, ಸೆ. ೧೬: ವೀರಾಜಪೇಟೆಯ ನಂ.೩೭೮ನೇ ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳ ನಿಯಮಿತ(ಫೆಡರೇಶನ್)ಕ್ಕೆ ರೂ.೨೮.೦೯ ಲಕ್ಷ ನಿವ್ವಳ ಲಾಭ ದೊರೆತಿದೆ ಎಂದು ಅಧ್ಯಕ್ಷರಾದ ವಾಟೇರಿರ ಪಿ. ಬೋಪಣ್ಣ ಮಾಹಿತಿ ನೀಡಿದರು.
ಸಂಘದ ಪ್ರಗತಿ ಹಾಗೂ ವಾರ್ಷಿಕ ವ್ಯಾಪಾರ ವಹಿವಾಟಿನ ಕುರಿತು ಸಭೆಯಲ್ಲಿ ಮಾಹಿತಿ ನೀಡಿದ ಅವರು, ಸಂಘದ ಪಾಲು ಬಂಡವಾಳವು ರೂ.೬೨.೯೬ ಲಕ್ಷ ಆಗಿದೆ. ವರದಿ ಸಾಲಿನಲ್ಲಿ ಸಂಘವು ರೂ.೧,೧೨೨.೭೦ ಲಕ್ಷ ಮೌಲ್ಯದ ಗೊಬ್ಬರವನ್ನು ಖರೀದಿಸಿ, ಸಂಘದ ಸದಸ್ಯರು ಹಾಗೂ ಗ್ರಾಹಕರಿಗೆ ರೂ.೧,೦೮೩.೩೯ ಲಕ್ಷ ಮೌಲ್ಯದ ಗೊಬ್ಬರವನ್ನು ಮಾರಾಟ ಮಾಡಲಾಗಿದೆ ಎಂದರು. ಅದೇ ರೀತಿ, ಕೃಷಿ ಉಪಕರಣಗಳು, ಕೀಟನಾಶಕಗಳು ಹಾಗೂ ಇತರೆ ಕೃಷಿ ಸಂಬAಧಿತ ವಸ್ತುಗಳನ್ನು ರೂ.೪೭೧.೧೯ ಲಕ್ಷಕ್ಕೆ ಖರೀದಿಸಿ, ರೂ.೫೩೨.೫೦ ಲಕ್ಷ ಮೌಲ್ಯದ ವಸ್ತುಗಳನ್ನು ಮಾರಾಟ ಮಾಡಲಾಗಿದೆ. ೨೦೨೫-೨೬ನೇ ಸಾಲಿನಲ್ಲಿ ಸಂಘದ ಒಟ್ಟು ವಾರ್ಷಿಕ ವ್ಯಾಪಾರ ವಹಿವಾಟು ರೂ.೧,೬೧೫.೮೯ ಲಕ್ಷ ಆಗಿದ್ದು, ವರದಿ ಸಾಲಿನಲ್ಲಿ ಒಟ್ಟು ರೂ.೯೦.೧೦ ಲಕ್ಷ ವ್ಯಾಪಾರ ಲಾಭ ಗಳಿಸಿದೆ. ಸಂಘದ ಉಪನಿಯಮಗಳಂತೆ ನಿವ್ವಳ ಲಾಭವನ್ನು ಹಂಚಿಕೆ ಮಾಡಲಾಗಿದ್ದು, ಸದಸ್ಯರಿಗೆ ೧೫ ಶೇಕಡಾ ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಸಂಘದ ವತಿಯಿಂದ ಮಲಬಾರ್ ರಸ್ತೆಯಲ್ಲಿರುವ ನಿವೇಶನ ಪ್ರದೇಶದಲ್ಲಿ ನೂತನ ಗೋದಾಮು ನಿರ್ಮಿಸಲಾಗಿದ್ದು, ಇಲ್ಲಿ ಸಂಘದ ಸದಸ್ಯರು ಹಾಗೂ ಗ್ರಾಹಕರ ಅನುಕೂಲಕ್ಕಾಗಿ ಸಿಮೆಂಟ್, ಕಬ್ಬಿಣ ಸೇರಿದಂತೆ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ವಿವಿಧ ಸಾಮಗ್ರಿಗಳ ಮಾರಾಟ ಮಾಡಲಾಗುತ್ತಿದೆ.
ಇದಲ್ಲದೆ, ವಾಣಿಜ್ಯ ಸಂಕೀರ್ಣದ ಮಳಿಗೆಯಲ್ಲಿ ಸಂಘದ ವತಿಯಿಂದ ೧೨ನೇ ನಳಿಕೆಯ ಹಾಗೂ ೨೨ನೇ ನಳಿಕೆಯ ಕೋವಿ ಮತ್ತು ಕೋವಿ ತೋಟಗಳ ಮಾರಾಟ ಮಳಿಗೆ ತೆರೆಯಲಾಗಿದೆ. ಸಂಘವು ಲೆಕ್ಕಪರಿಶೋಧನೆಯಲ್ಲಿ ‘ಎ’ ವರ್ಗ ಪಡೆದಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾದ ವಾಟೇರಿರ ಪಿ. ಬೋಪಣ್ಣ ಅವರೊಂದಿಗೆ ಉಪಾಧ್ಯಕ್ಷರಾದ ತಾತಂಡ ಎಂ. ಕಾವೇರಪ್ಪ ಹಾಗೂ ನಿರ್ದೇಶಕರಾದ ಕಂಜಿತAಡ ಕೆ. ಮಂದಣ್ಣ, ಕೊಕ್ಕಂಡ ಎ. ಬಿದ್ದಪ್ಪ, ಮುಳ್ಳೇಂಗಡ ಎಂ. ಕುಟ್ಟಪ್ಪ, ಚೇನಂಡ ಈ. ಗಿರೀಶ್ ಪೂಣಚ್ಚ, ಮಾಚಿಮಂಡ ಬಿ. ವಸಂತ, ಕುಂಬೇರ ಎ. ಮನು ಕುಮಾರ್, ಮೂಕೊಂಡ ಪಿ. ಸುಬ್ಬಮಣಿ, ಅಂಜಪರವAಡ ಎಂ. ಮಂದಣ್ಣ, ಕೂತಂಡ ಬಿ. ಸಚಿನ್ ಕುಟ್ಟಯ್ಯ, ಪುಲಿಯಂಡ ಎ. ಪೊನ್ನಣ್ಣ, ಅಮತಿ ಕೇತಂಬಿರ ಬಿ. ಲತಾ, ಮುಕ್ಕಟ್ಟಿರ ವಿದ್ಯಾ ಮಹೇಶ್, ಕೆ.ಆರ್. ವಿನೋದ್, ಹೆಚ್.ಎನ್. ಶೇಖರ್ ಹಾಗೂ ಹೆಚ್.ಎ. ಆನಂದ ಉಪಸ್ಥಿತರಿದ್ದರು.
ಸಂಘದ ವಾರ್ಷಿಕ ಮಹಾಸಭೆ ತಾ.೧೮ ರಂದು ವೀರಾಜಪೇಟೆ ಮಹಿಳಾ ಸಮಾಜದಲ್ಲಿ ಬೆಳಿಗ್ಗೆ ೧೦:೩೦ಕ್ಕೆ ನಡೆಯಲಿದೆ.