ಮಡಿಕೇರಿ, ಸೆÀ. ೧೬: ನಗರದ ಕೊಡಗು ಗೌಡ ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ ರೂ. ೫೪.೬೦ ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಎಸ್. ಚೇತನ್ ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘವು ಉತ್ತಮವಾಗಿ ಮುನ್ನಡೆಯುತ್ತಿದ್ದು, ಶಿಕ್ಷಕರ ಆರ್ಥಿಕ ಅವಶ್ಯಕತೆಗೆ ಸಾಲ ನೀಡಿ ಅವರ ಪ್ರಗತಿಗೆ ಶ್ರಮಿಸುತ್ತಿದೆ. ಸ್ವಂತ ಬಂಡವಾಳ ಮೇಲೆ ವ್ಯವಹಾರ ನಡೆಸಲಾಗುತ್ತಿದ್ದು, ಮಡಿಕೇರಿಯ ಮುಖ್ಯ ರಸ್ತೆಯಲ್ಲಿ ಸುಸಜ್ಜಿತ ಕಟ್ಟಡ ಹೊಂದಿದ್ದು, ಓಂಕಾರೇಶ್ವರ ದೇವಾಲಯ ಬಳಿ ೪೨ ಸೆಂಟ್ ಜಾಗವನ್ನು ಹೊಂದಿದೆ. ಸಂಘವು ಶತಮಾನೋತ್ಸವವನ್ನು ಯಶಸ್ವಿಯಾಗಿ ಪೂರೈಸಿದ್ದು, ೧೦೦ನೇ ಮಹಾಸಭೆ ತಾ. ೨೦ ರಂದು ಮಡಿಕೇರಿಯ ಸರಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಲಿದೆ ಎಂದು ವಿವರಿಸಿದರು.

ಒಟ್ಟು ೨೨೭೬ ಸದಸ್ಯರನ್ನು ಸಂಘ ಹೊಂದಿದ್ದು, ರೂ. ೪೯.೮೧ ಕೋಟಿ ವ್ಯವಹಾರ ನಡೆಸುತ್ತಿದೆ. ರೂ. ೨.೯೨ ಲಕ್ಷ ಷೇರು ಬಂಡಾವಳ, ೧.೯೨ ಕೋಟಿ ಕ್ಷೇಮ ನಿಧಿ ಹಾಗೂ ಇತರೆ ನಿಧಿ, ೧೩.೯೬ ಕೋಟಿ ಠೇವಣಿ, ೧೯.೩೭ ಕೋಟಿ ದುಡಿಯುವ ಬಂಡಾವಳ, ೧೫ ಕೋಟಿಗೂ ಹೆಚ್ಚು ಸಾಲ ವಿತರಣೆಯಾಗಿದ್ದು, ೨.೨೧ ಕೋಟಿ ಆದಾಯ ಗಳಿಸಿ, ರೂ. ೫೪.೬೦ ಲಕ್ಷ ನಿವ್ವಳ ಲಾಭ ಗಳಿಸಿದೆ. ಈ ಬಾರಿ ಸದಸ್ಯರಿಗೆ ಶೇ ೭ ಡಿವಿಡೆಂಡ್ ನೀಡಲಾಗುವುದು ಎಂದ ಅವರು, ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ಶೈಕ್ಷಣಿಕ ಸಾಧಕರಿಗೆ ಪ್ರೋತ್ಸಾಹ ಧನ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಗೌರವ ಹೀಗೆ ವಿವಿಧ ಕಾರ್ಯಕ್ರಮವನ್ನು ಸಂಘದಿAದ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಬ್ಯಾಂಕ್ ಕಾರ್ಯಕ್ಷೇತ್ರವನ್ನು ಮೈಸೂರು ವಿಭಾಗಕ್ಕೂ ವಿಸ್ತರಿಸಲಾಗುತ್ತಿದ್ದು, ಸಂಸ್ಥೆಯ ಇತಿಹಾಸದಲ್ಲಿ ಇಷ್ಟು ದೊಡ್ಡ ಮೊತ್ತದ ಆದಾಯ ಗಳಿಸಿರುವುದು ಇದೇ ಮೊದಲಾಗಿದೆ. ಅಲ್ಲದೆ ರಾಜ್ಯದಲ್ಲಿಯೇ ಅತ್ಯುತ್ತಮ ಸಹಕಾರಿ ಪ್ರಶಸ್ತಿಗೂ ಸಂಸ್ಥೆ ಭಾಜನಾವಾಗಿದ್ದು, ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಾಗಿದೆ ಎಂದು ಚೇತನ್ ಹೇಳಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷೆ ಬಿ.ಬಿ. ಸ್ವಾತಿ, ನಿರ್ದೇಶಕರುಗಳಾದ ರೇವತಿ ರಮೇಶ್, ಹೆಚ್.ಎಂ. ಮಂಜುನಾಥ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಸಿ. ನಟೇಶ್, ಲೆಕ್ಕಿಗ ಸಿ.ಎಂ. ಕಿಶೋರ್ ಇದ್ದರು.