ಮಡಿಕೇರಿ, ಸೆ. ೧೫: ಅರಣ್ಯ ಹುತಾತ್ಮರ ದಿನಾಚರಣೆ ಹಿನ್ನೆಲೆ ನಗರದ ಅರಣ್ಯ ಭವನ ಆವರಣದಲ್ಲಿರುವ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಣಿ, ಜಿ.ಪಂ. ಸಿಇಓ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ, ಏರ್ ಮಾರ್ಷಲ್ (ನಿವೃತ್ತ) ಕೆ.ಸಿ. ಕಾರ್ಯಪ್ಪ ಅವರು ಪುಷ್ಪಗುಚ್ಚ ಇರಿಸಿ, ಗೌರವ ನಮನ ಸಲ್ಲಿಸಿದರು. ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು.
ಮುಖ್ಯ ಅತಿಥಿಗಳಿಗೆ ಪೆರೇಡ್ ಕಮಾಂಡರ್ ಸದಾನಂದ ಹಿಪ್ಪರಗಿ ಅವರು ಗೌರವ ವಂದನೆ ಸಲ್ಲಿಸಿದರು. ಪೊಲೀಸ್ ವಾದ್ಯ ವೃಂದದಿAದ ರಾಷ್ಟçಗೀತೆ ನುಡಿಸಲಾಯಿತು. ಅರಣ್ಯ ವನ್ಯಜೀವಿ ಸಂಪತ್ತನ್ನು ಉಳಿಸಲು ಹೋರಾಡಿ ಮಡಿದವರ ಗೌರವಾರ್ಥ ರಿವರ್ಸ್ ಆರ್ಮಸ್ ನುಡಿಸಲಾಯಿತು. ನಂತರ ಮೌನಾಚರಣೆ ನಡೆಯಿತು. ಪೊಲೀಸ್ ವಾದ್ಯ ವೃಂದದಿAದ ಅಬೈಡ್ ವಿತ್ ಮೀ ವಾದ್ಯವನ್ನು ನುಡಿಸಲಾಯಿತು. ಡಿಆರ್ಎಫ್ಒ ಐಶ್ವರ್ಯ ಆರ್.ಗೌಡರ ಅವರು ನಿರೂಪಿಸಿ, ವಂದಿಸಿದರು.