ಮಡಿಕೇರಿ, ಸೆ. ೧೫ : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ನ. ೨೬ ರಂದು ಭಾರತೀಯ ಸಂವಿಧಾನ ದಿನ ಮತ್ತು ೩೬ನೇ ವರ್ಷದ ಕೊಡವ ನ್ಯಾಷನಲ್ ಡೇಯನ್ನು ಆಚರಿಸಲಾಗುವುದು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.

ಮಡಿಕೇರಿ ಸಮೀಪದ ಕ್ಯಾಪಿಟಲ್ ವಿಲೇಜ್‌ನಲ್ಲಿ ಬೆಳಿಗ್ಗೆ ೧೦.೩೦ ಗಂಟೆಗೆ ನಡೆಯಲಿರುವ ಸಮಾವೇಶ ದಲ್ಲಿ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಬುಡಕಟ್ಟು ಸ್ಥಾನಮಾನ ಸೇರಿದಂತೆ ಕೊಡವರ ೧೦ ಪ್ರಮುಖ ಸಂವಿಧಾನಿಕ ಬೇಡಿಕೆಗಳ ಹೋರಾಟವನ್ನು ಹೊಸ ಹುರುಪಿನಿಂದ ಪುನರುಜ್ಜೀವನಗೊಳಿಸುವ ಕುರಿತು ಐತಿಹಾಸಿಕ ಘೋಷಣೆ ಮತ್ತು ನಿರ್ಣಯ ಅಂಗೀಕರಿಸಲಾಗು ವುದು. ಕಾರ್ಯಕ್ರಮದಲ್ಲಿ ಖ್ಯಾತ ಮಾನವ ಶಾಸ್ತçಜ್ಞರು, ನ್ಯಾಯಶಾಸ್ತçಜ್ಞರು ಹಾಗೂ ಸಂವಿಧಾನ ತಜ್ಞರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ವಿಶೇಷ ಸಂವಿಧಾನಿಕ ಸ್ಥಾನಮಾನ. ಕೊಡವರಿಗೆ ಬುಡಕಟ್ಟು ಸ್ಥಾನಮಾನ ಹಾಗೂ ಅಂತರರಾಷ್ಟಿçÃಯ ಮಟ್ಟದಲ್ಲಿ ಆದಿಮಸಂಜಾತ ಸಮುದಾಯವಾಗಿ ಮಾನ್ಯತೆ. ಗನ್-ತೋಕ್ ಅನ್ನು ಕೊಡವರ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿ ಸಂವಿಧಾನಿಕ ರಕ್ಷಣೆ. ಕೊಡವ ತಕ್ಕ್ ಭಾಷೆಗೆ ಸಂವಿಧಾನದ ೮ನೇ ಪರಿಚ್ಛೇದದಲ್ಲಿ ಮಾನ್ಯತೆ. ಕೊಡವರ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಯುನೆಸ್ಕೋ ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಸೇರಿಸುವುದು. ದೇವಟ್‌ಪರಂಬ್, ನಾಲ್ನಾಡ್ ಅರಮನೆ, ಮಡಿಕೇರಿ ಕೋಟೆ ಹಾಗೂ ವಿವಿಧ ಯುದ್ಧ ಸ್ಮಾರಕಗಳ ಸಂರಕ್ಷಣೆ. ತಲಕಾವೇರಿಗೆ ಪವಿತ್ರ ಯಾತ್ರಾ ಸ್ಥಳದ ಮಾನ್ಯತೆ ಹಾಗೂ ಕಾವೇರಿ ನೀರಿನ ಹಕ್ಕುಗಳ ರಕ್ಷಣೆ. ಕೊಡವ ಪ್ರದೇಶಕ್ಕೆ ಒಳರೇಖಾ ಪರವಾನಗಿ ವ್ಯವಸ್ಥೆ ಜಾರಿ. ಸಂಸತ್ತು ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ. ಐತಿಹಾಸಿಕವಾಗಿ ಕಳೆದುಕೊಂಡ ಪೂರ್ವಿಕರ ಭೂಮಿಯ ಮರು ಸ್ಥಾಪನೆಗೆ ಸಿ.ಎನ್.ಸಿ. ಒತ್ತಾಯಿಸುತ್ತಿದೆ.

ಪ್ರತ್ಯೇಕ ಕೊಡವ ಕೋಡ್‌ಗೆ ಒತ್ತಾಯ

ಕೊಡವರ ನೈಜ ಜನಸಂಖ್ಯೆ, ಭಾಷೆ, ಸಂಸ್ಕೃತಿ ಮತ್ತು ಐತಿಹಾಸಿಕ ನಿರಂತರತೆಯನ್ನು ದಾಖಲಿಸಿ ಸಂವಿಧಾನಿಕ ಹಕ್ಕುಗಳನ್ನು ರಕ್ಷಿಸಲು ೨೦೨೭ರ ರಾಷ್ಟಿçÃಯ ಜನಗಣತಿಯಲ್ಲಿ ಪ್ರತ್ಯೇಕ ಕೊಡವ ಕೋಡ್ ಮತ್ತು ಕಾಲಂ ಕಲ್ಪಿಸಬೇಕು ಎಂದು ಒತ್ತಾಯಿಸ ಲಾಗುವುದು.

೧೯೪೧ ರವರೆಗೆ ಕೊಡವರನ್ನು ಜನಗಣತಿಯಲ್ಲಿ ಪ್ರತ್ಯೇಕ ಜನಾಂಗೀಯತೆಯಾಗಿ ದಾಖಲಿಸಲಾಗುತ್ತಿತ್ತು. ನಂತರ ಜನಗಣತಿಯಲ್ಲಿ ಈ ಗುರುತು ಕಳೆದು ಹೋಗಿದ್ದು, ೧೯೫೬ರ ರಾಜ್ಯ ಮರುಸಂಘಟನೆಯ ಸಂದರ್ಭದಲ್ಲಿ ಪ್ರಾದೇಶಿಕ ಗುರುತಿಗೂ ಧಕ್ಕೆಯಾಗಿದೆ. ಹೀಗಾಗಿ ಜನಸಂಖ್ಯಾ ಮತ್ತು ಪ್ರಾದೇಶಿಕ ಗುರುತಿನ ಈ ನಷ್ಟವನ್ನು ಪುನಃಸ್ಥಾಪಿಸುವ ಅಗತ್ಯವಿದೆ ಎಂದು ನಾಚಪ್ಪ ತಿಳಿಸಿದ್ದಾರೆ.