ಮಡಿಕೇರಿ, ಸೆ. ೧೫: ಪ್ರಸಕ್ತ ಸಾಲಿನಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಜಿಲ್ಲೆಯ ಐದು ತಾಲೂಕುಗಳಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಹಾಗೂ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಸ್ಪರ್ಧೆಯು ತಾ.೧೬ ರಿಂದ (ಇಂದಿನಿAದ) ತಾ.೨೪ ರವರೆಗೆ ಇಲಾಖಾ ವತಿಯಿಂದ ನಡೆಯಲಿದೆ. ಮಡಿಕೇರಿ ತಾಲೂಕು ಕ್ರೀಡಾಕೂಟ ತಾ.೧೬ ರಂದು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ, ಕುಶಾಲನಗರ ತಾಲೂಕು ಕ್ರೀಡಾಕೂಟ ತಾ.೧೭ ರಂದು ಕೂಡಿಗೆಯ ಸೈನಿಕ ಶಾಲೆ ಹಾಗೂ ಕ್ರೀಡಾ ಶಾಲೆ ಮೈದಾನದಲ್ಲಿ, ಸೋಮವಾರಪೇಟೆ ತಾಲೂಕು ಕ್ರಿಡಾಕೂಟ ತಾ.೧೮ ರಂದು ಕೂಡಿಗೆಯ ಕ್ರೀಡಾ ಶಾಲೆಯ ಮೈದಾನ ಮತ್ತು ಸೈನಿಕ ಶಾಲೆಯಲ್ಲಿ, ಪೊನ್ನಂಪೇಟೆ ತಾಲೂಕು ಕ್ರೀಡಾಕೂಟ ತಾ.೧೯ ರಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ(ಫುಟ್‌ಬಾಲ್) ಹಾಗೂ ಜೂನಿಯರ್ ಕಾಲೇಜು ಆಟದ ಮೈದಾನದಲ್ಲಿ, ವೀರಾಜಪೇಟೆ ತಾಲೂಕಿನ ಕ್ರೀಡಾಕೂಟ ತಾ.೨೦ ರಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ (ಫುಟ್‌ಬಾಲ್) ಹಾಗೂ ಜೂನಿಯರ್ ಕಾಲೇಜು ಆಟದ ಮೈದಾನದಲ್ಲಿ ನಡೆಯಲಿದೆ. ತಾ.೨೪ ರಂದು ಕೂಡಿಗೆ ಕ್ರೀಡಾ ಶಾಲೆ ಮೈದಾನದಲ್ಲಿ ಹಾಗೂ ಕೂಡಿಗೆ ಸೈನಿಕ ಶಾಲೆ ಮತ್ತು ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ನಡೆಯಲಿದೆ. ಆಸಕ್ತ ಪುರುಷ ಹಾಗೂ ಮಹಿಳಾ ಹಾಕಿಪಟುಗಳು ಹೆಚ್ಚಿನ ಮಾಹಿತಿಗೆ ಮಡಿಕೇರಿ ತಾಲೂಕು ಮಹಾಬಲ ೯೯೮೦೮೮೭೪೯೯, ಮನು ೯೪೮೦೦೩೨೭೧೨, ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ವೆಂಕಟೇಶ್ ೯೮೪೪೩೨೬೦೦೭, ಸುರೇಶ್ ೮೮೯೨೨೭೨೯೭೨, ಪ್ರದೀಪ್ ೯೩೪೨೫೬೩೦೧೪, ಪೊನ್ನಂಪೇಟೆ ಮತ್ತು ವೀರಾಜಪೇಟೆ ಸುಬ್ಬಯ್ಯ ೮೧೯೭೭೯೦೩೫೦, ಗಣಪತಿ ೮೯೫೧೨೮೭೩೦೧ ಅವರನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ ಅವರು ತಿಳಿಸಿದ್ದಾರೆ. ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಆನ್‌ಲೈನ್ ನೋಂದಣಿ ಕಡ್ಡಾಯ ಪೋರ್ಟಲ್ (ಜಚಿsಚಿಡಿಚಿಛಿmಛಿuಠಿ.iಟಿ) ಆಯಾಯ ತಾಲೂಕಿನ ಕ್ರೀಡಾಪಟುಗಳು ತಮ್ಮ ತಾಲೂಕಿನ ಕ್ರೀಡಾಕೂಟದಲ್ಲಿ ಮಾತ್ರ ಭಾಗವಹಿಸಬಹುದು. ಒಂದು ತಾಲೂಕಿನಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಮತ್ತೊಂದು ತಾಲೂಕಿನಲ್ಲಿ ಭಾಗವಹಿಸಲು ಅವಕಾಶ ಇಲ್ಲ. ಹಾಗೆ ಕಂಡುಬAದಲ್ಲಿ ಅಂತಹ ಕ್ರೀಡಾಪಟುಗಳನ್ನು ಅನರ್ಹಗೊಳಿಸಲಾಗುತ್ತದೆ. ಆಧಾರ್ ಕಾರ್ಡ್ ಪ್ರತಿ ಕಡ್ಡಾಯವಾಗಿ ತರಬೇಕು. ಆಯಾಯ ದಿನದಂದು ಬೆಳಗ್ಗೆ ೯.೩೦ರ ಒಳಗೆ ಕಡ್ಡಾಯವಾಗಿ ಸ್ಥಳದಲ್ಲಿ ನೋಂದಾಯಿಸಿಕೊಳ್ಳಬೇಕು, ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.