ನಾಪೋಕ್ಲು, ಸೆ. ೧೫: ಇಲ್ಲಿಗೆ ಸಮೀಪದ ಬೇತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿದ್ಯಾರ್ಥಿಗಳಿಗೆ ಹಳೆ ವಿದ್ಯಾರ್ಥಿ ಕೆ.ವಿ ರವಿ ಓಂಕಾರ್ ಅವರು ನೋಟು ಪುಸ್ತಕ, ಲೇಖನಿ ಸಾಮಗ್ರಿಗಳನ್ನು ವಿತರಿಸಿದರು.
ಈ ಸಂದರ್ಭ ಹಳೆ ಫ್ರೆಂಡ್ಸ್ ಗ್ರೂಪಿನ ಮೋನಿಶ್, ಶ್ರೀಧರ, ಶಾಲಾ ಮುಖ್ಯ ಶಿಕ್ಷಕಿ ಬಿ.ಪಿ ಮಮತಾ, ಸಹ ಶಿಕ್ಷಕಿ ಬಿ.ಬಿ ಸಾವಿತ್ರಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.