ಚೆಯ್ಯಂಡಾಣೆ, ಸೆ. ೧೩: ಸುನ್ನಿ ಜಂಇಯ್ಯತ್ತುಲ್ ಮುಅಲ್ಲಿಮೀನ್ (ಎಸ್ಜೆಎಂ) ಮೂರ್ನಾಡು ರೇಂಜ್ ಹಾಗೂ ಎಸ್ ವೈ ಎಸ್ ಮಡಿಕೇರಿ ಝೋನ್ ಸಂಯುಕ್ತಾಶ್ರಯದಲ್ಲಿ ಮೊಹಮ್ಮದ್ ಪೈಗಂಬರ್ (ಸ) ಅವರ ಜನ್ಮ ದಿನಾಚರಣೆಯ ಅಂಗವಾಗಿ ಮೂರ್ನಾಡು ಪಟ್ಟಣದಲ್ಲಿ ಬೃಹತ್ ಮಿಲಾದ್ ಸಂದೇಶ ಜಾಥಾ ನಡೆಯಿತು.
ಎಸ್ವೈಎಸ್ ಜಿಲ್ಲಾ ಅಧ್ಯಕ್ಷ ಮುನೀರ್ ಮಹ್ಳರಿ ಪ್ರಾರ್ಥನೆ ನೆರವೇರಿಸುವ ಮೂಲಕ ಸಂದೇಶ ಜಾಥಾಕ್ಕೆ ಚಾಲನೆ ನೀಡಿದರು. ಜಾಥಾವನ್ನು ಸಯ್ಯಿದ್ ಮಹ್ದಿ ಅಹ್ಮದ್ ಅಲ್ ಬುಖರಿ ತಂಙಳ್ ಲಕ್ಷದ್ವಿಪ್ ಮುನ್ನಡೆಸಿದರು. ಮೂರ್ನಾಡು ಕಾಲೇಜು ಮೈದಾನದಿಂದ ಆರಂಭಗೊAಡ ಜಾಥಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಖಾಸಗಿ ಬಸ್ ನಿಲ್ದಾಣದಲ್ಲಿ ಸಮಾಪನ ಗೊಂಡಿತು.
ಜಾಥಾದಲ್ಲಿ ರೇಂಜ್ಗೆ ಒಳಪಟ್ಟ ೧೮ ಮದ್ರಸ ವಿದ್ಯಾರ್ಥಿಗಳ ದಫ್ ಪ್ರದರ್ಶನ, ಸ್ಕೌಟ್, ಫ್ಲವರ್ ಶೋ, ಯುವಕರ, ಹಿರಿಯರ ದಫ್ ಪ್ರದರ್ಶನ,ಪ್ರವಾದಿ ಕೀರ್ತನೆ ಗಮನ ಸೆಳೆಯಿತು.
ಜಾಥಾವನ್ನು ಉದ್ದೇಶಿಸಿ ಪ್ರಖ್ಯಾತ ವಾಗ್ಮಿ ನೂರುದ್ದೀನ್ ಝುಹ್ರಿ ಸಂದೇಶ ಭಾಷಣ ಮಾಡಿ ಮೊಹಮ್ಮದ್ ಪೈಗಂಬರ್ ಅವರ ಜೀವನ ಶೈಲಿ,ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು,ಅವರ ಶಾಂತಿಯ ಸಂದೇಶ ಎಲ್ಲರಿಗೂ ಮಾದರಿಯಾಗಬೇಕೆಂದರು.
ಈ ಸಂದರ್ಭ ಸಯ್ಯಿದ್, ಕೂರ್ಗ್ ಜಂಇಯ್ಯತುಲ್ ಉಲಮ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ, ಕೋಶಾಧಿಕಾರಿ ಹುಸೈನ್ ಸಖಾಫಿ, ಎಸ್ಜೆಎಂ ಜಿಲ್ಲಾಧ್ಯಕ್ಷ ಅಬ್ದುಲ್ಲ ಸಖಾಫಿ, ಪ್ರಧಾನ ಕಾರ್ಯದರ್ಶಿ ಷಂಶುದ್ಧೀನ್ ಅಮ್ಜದ್ದಿ, ಎಸ್ವೈಎಸ್ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್,ಕೆಎಂಜೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾಜಿ, ಎಸ್ ಎಸ್ ಎಫ್ ಜಿಲ್ಲಾಧ್ಯಕ್ಷ ಕಮರುದ್ದಿನ್ ಅನ್ವಾರಿ, ಪ್ರಧಾನ ಕಾರ್ಯದರ್ಶಿ ಜುನೈದ್, ಅಬೂಬಕ್ಕರ್ ಹಾಜಿ ಹಾಕತ್ತೂರ್, ಹಂಝ ರಹ್ಮನಿ,ಹನೀಫ್ ಸಖಾಫಿ,ಯೂಸುಫ್ ಹಾಜಿ ಕೊಂಡAಗೇರಿ, ಮುಬಶೀರ್ ಅಹ್ಸನಿ, ಮೂರ್ನಾಡು ಜಮಾಅತ್ ಪದಾಧಿಕಾರಿಗಳು, ಮೈಮ ಸಂಘಟನೆಯ ಪ್ರಮುಖರು, ಮತ್ತಿತರರು ಇದ್ದರು.