ಕುಶಾಲನಗರ, ಸೆ. ೧೩: ಇಲ್ಲಿನ ಮಾವೇಲಿ ಸಹಕಾರ ಸಂಘದ ಮಹಾಸಭೆ ಸಂಘದ ಅಧ್ಯಕ್ಷ ಪಿ ರವೀಂದ್ರನ್ ಅಧ್ಯಕ್ಷತೆಯಲ್ಲಿ ಕೇರಳ ಸಮಾಜ ಸಭಾಂಗಣದಲ್ಲಿ ನಡೆಯಿತು.

ಕಳೆದ ಮಹಾಸಭೆಯ ವರದಿ, ೨೦೨೫-೨೬ ನೇ ಸಾಲಿನ ಆಡಳಿತ ಮಂಡಳಿಯ ವರದಿಯನ್ನು ಮಂಡಿಸಲಾಯಿತು. ೨೦೨೫ ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಜಮಾ-ಖರ್ಚು ಲಾಭ - ನಷ್ಟದ ತಖ್ತೆ ಮತ್ತು ಆಸ್ತಿ ಜವಾಬ್ದಾರಿಯನ್ನು ಪರಿಶೀಲನೆ ಅಂಗೀಕರಿಸಲಾಯಿತು. ಈ ಸಾಲಿನ ನಿವ್ವಳ ಲಾಭದ ವಿಲೇವಾರಿಯನ್ನು ಹಾಗೂ ಅಂದಾಜು ಬಡ್ಜೆಟ್ ಮಂಜೂರು ಮಾಡಲಾಯಿತು.

ಸಂಘದ ಅಧ್ಯಕ್ಷ ಪಿ.ರವೀಂದ್ರನ್ ಮಾತನಾಡಿ, ಸಂಘದಲ್ಲಿ ಒಟ್ಟು ರೂ ೧೫,೫೪,೫೦೦ ಪಾಲು ಬಂಡವಾಳ ಇದೆ. ಸಂಘದ ನೂತನ ಆಡಳಿತ ಅಧಿಕಾರಕ್ಕೆ ಬಂದ ೫ ತಿಂಗಳ ಅವಧಿಯಲ್ಲಿ ಸಂಘ ೬ ಲಕ್ಷ ಲಾಭದಲ್ಲಿದೆ ಎಂದರು.

ಸಂಘದ ಉಪಾಧ್ಯಕ್ಷ ಎಂ.ಜಿ.ಪ್ರಕಾಶ್, ನಿರ್ದೇಶಕರಾದ ಎ.ಕೆ.ಶೇಖರನ್, ಎನ್.ಎ.ಸುಶೀಲ, ಕೆ.ಜಿ.ಅಶೋಕ್, ಎಂ.ಡಿ.ರAಜಿತ್, ಕುಮಾರ್, ಎಂ.ಎಸ್.ಶಾAತಿ, ಕೆ.ವರದ, ಟಿ.ಕೆ.ಅಜಿತ್, ವಿ.ಎಸ್.ಜಿತೇಶ್ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎಂ.ಸವಿತ ಇದ್ದರು.