ಮಡಿಕೇರಿ, ಸೆ. ೧೩: ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸುವುದಾದರೆ ಅರಣ್ಯ ವ್ಯಾಪ್ತಿಗೆ ಮಾತ್ರ ಸೀಮಿತಗೊಳಿಸಿ ಜಾರಿಗೊಳಿಸುವಂತಾಗಬೇಕು ಎಂದು ಸೇವ್ ಕೊಡಗು ವೇದಿಕೆ ಆಗ್ರಹಿಸಿದೆ.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಪ್ರಮುಖ ಮಧು ಬೋಪಣ್ಣ ಕಸ್ತೂರಿ ರಂಗನ್ ವರದಿ ಜಾರಿಗೆ ನಮ್ಮ ವಿರೋಧವಿಲ್ಲ ಆದರೆ ಪ್ರಕೃತಿ ಸಂರಕ್ಷಣೆಯೊAದಿಗೆ ಜನರ ಬದುಕಿನ ಬಗ್ಗೆಯೂ ಸಂಬAಧಿಸಿದವರು ಚಿಂತಿಸಬೇಕು. ಈ ವರದಿಯನ್ನು ಅರಣ್ಯ ವ್ಯಾಪ್ತಿಗೆ ಮಾತ್ರ ಸೀಮಿತಗೊಳಿಸಿ ಜನವಸತಿ ಪ್ರದೇಶಗಳು, ಕಂದಾಯ ಗ್ರಾಮಗಳನ್ನು ಬಿಟ್ಟು ಜಾರಿಗೊಳಿಸುವಂತಾಗಬೇಕು ಎಂದು ಹೇಳಿದರು.

೧೯೮೦-೯೦ ರ ದಶಕಗಳಿಂದ ಪರಿಸರ ಸಂರಕ್ಷಣೆಯ ನೆಪದಲ್ಲಿ ಕೊಡಗಿನ ಬೆರಳೆಣಿಕೆಯ ಪರಿಸರವಾದಿಗಳೆನಿಸಿಕೊಂಡವರು ವಿದೇಶಿ ದೇಣಿಗೆಗಳನ್ನು ಲಪಟಾಯಿಸಲು ನಕಲಿ ಸಂಘಟನೆಗಳ ಜಾಲಬಂಧ ನಿರ್ಮಿಸಿ ಜನರನ್ನು ಒಕ್ಕಲೆಬ್ಬಿಸಿ ಕೊಡಗನ್ನು ಅರಣೀಕರಣ ಮಾಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ಆರೋಪಿಸಿದ ಅವರು ಕಸ್ತೂರಿ ರಂಗನ್ ವರದಿ ಜಾರಿಯಿಂದ ಯಾರಿಗೂ ತೊಂದರೆ ಇಲ್ಲ ಎನ್ನುವವರು ಮೊದಲು ಅದರ ಜಾಗ ಮತ್ತು ತೋಟಗಳನ್ನು ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಸೇರಿಸಿಕೊಳ್ಳಲು ಸ್ವ ಇಚ್ಛೆಯಿಂದ ಅನುಷ್ಠಾನ ಸಮಿತಿಗೆ ಮತ್ತು ಸುಪ್ರೀಂ ಕೋರ್ಟಿಗೆ ಮನವಿ ಅರ್ಜಿ ಹಾಕಲಿ. ಮರ ಕಾಡು ಮತ್ತು ವನ್ಯ ಜೀವಿಗಳು ಅಲ್ಲಿ ಸುರಕ್ಷಿತವಾಗಿರಲಿ, ಅರಣ್ಯ ಇಲಾಖೆ ಅಧಿಕಾರಿಗಳು ಸರ್ಕಾರದ ಆದೇಶ ಪಾಲಿಸಿ ರಕ್ಷಿತಾರಣ್ಯಗಳನ್ನು ಮತ್ತು ಅದರಲ್ಲಿರುವ ವನ್ಯಪ್ರಾಣಿಗಳನ್ನು ರಕ್ಷಿಸುವ ಬದಲು ಪರಿಸರವಾದಿಗಳೆನಿಸಿಕೊಂಡವರ ಆದೇಶವನ್ನು ಪಾಲಿಸುತ್ತಿದ್ದಾರೆ. ಇದರಿಂದಾಗಿ ಆನೆ, ಹುಲಿ ಮುಂತಾದ ಕಾಡು ಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಬಂದು ಮಾನವ ಪ್ರಾಣಿ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ ಎಂದರು.

ಕರ್ನಾಟಕ ಸರ್ಕಾರ ಭೌತಿಕ ಸರ್ವೇ ನಡೆಸಿ ಜನವಸತಿ ಪ್ರದೇಶ ಕಂದಾಯ ಗ್ರಾಮಗಳನ್ನು ಬೇರ್ಪಡಿಸಿ ವರದಿಯಲ್ಲಿರುವ ಸೂಕ್ಷö್ಮ ಪ್ರದೇಶವನ್ನು ಅರಣ್ಯ ಪ್ರದೇಶಗಳಿಗೆ ಸೀಮಿತಗೊಳಿಸಿ ಅನುಷ್ಟಾನ ಸಮಿತಿಗೆ ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸಲು ಪ್ರಸ್ತಾಪಿಸಬೇಕಾಗಿದೆ. ಇದನ್ನೇ ಕೇರಳ ಸರ್ಕಾರ ಮಾಡುತ್ತಿದೆ. ಈಗ ಕೇರಳ ಸರ್ಕಾರ ಅನುಷ್ಠಾನ ಸಮಿತಿ ಜೊತೆ ಚರ್ಚೆ ನಡೆಸಿ ಕೇರಳದಲ್ಲಿ ವರದಿ ವ್ಯಾಪ್ತಿಯನ್ನು ೯೯೯೩. ೭sq ಕಿ.ಲೋ ಮೀಟರ್‌ನಿಂದ ೮,೫೯೦.೬೯ sq ಕಿ.ಲೋ ಮೀಟರ್‌ಗೆ ಇಳಿಸಿ ೧೨೩ ಗ್ರಾಮಗಳಿಂದ ೯೮ ಗ್ರಾಮಗಳಿಗೆ ಸೀಮಿತಗೊಳಿಸಿ ವರದಿ ಜಾರಿಮಾಡಲು ಪ್ರಸ್ತಾಪಿಸಿದೆ. ಈ ೯೮ ಗ್ರಾಮಗಳಲ್ಲಿನ ಕಂದಾಯ ಮತ್ತು ಜನ ವಸತಿ ಪ್ರದೇಶವನ್ನು ವರದಿ ವ್ಯಾಪ್ತಿಯಿಂದ ಹೊರಗಿಡಲು ಕೇರಳ ಸರ್ಕಾರ ಅನುಷ್ಟಾನ ಸಮಿತಿಗೆ ಒತ್ತಾಯಿಸಿದೆ. ಕರ್ನಾಟಕ ಸರ್ಕಾರವು ಆ ಕೆಲಸವನ್ನು ಮಾಡಬೇಕಾಗಿದೆ.

ಸಿ & ಡಿ ಜಮೀನು ಅರಣ್ಯವಾದರೆ, ಕಸ್ತೂರಿ ರಂಗನ್ ವರದಿಯ ವ್ಯಾಪ್ತಿ ವಿಸ್ತಾರವಾಗಿ ಸುಮಾರು ೧೦-೧೫ ಸಾವಿರ ಕುಟುಂಬಗಳು ಬೀದಿಗೆ ಬಂದು ಮಾನವೀಯ ಸಂಕಷ್ಟ ಎದುರಾಗುವ ಭಯವಿದೆ ಎಂದು ಅವರು ನುಡಿದರು.

ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ತಾಂತ್ರಿಕ ಕಾರಣಕ್ಕೆ ತಿರಸ್ಕರಿಸಲಿ. ಏಕೆಂದರೆ ಆ ಸಮಿತಿಯಲ್ಲಿ ವಿಜ್ಞಾನಿಗಳು ಮತ್ತು ಪರಿಸರ ತಜ್ಞರು ಮಾತ್ರ ಇದ್ದರು. ಪಶ್ಚಿಮ ಘಟ್ಟ ವ್ಯಾಪ್ತಿಯ ಜನರ ಸಮಸ್ಯೆಗಳ ಬಗ್ಗೆ ತಿಳಿಯಲು ಸಮಾಜಶಾಸ್ತçಜ್ಞರು ಮತ್ತು ಜನಪರ ಸಂಘಟನೆಗಳಿಗೆ ರಾಜ್ಯ ಸರ್ಕಾರಗಳಿಗೂ ಪ್ರಾತಿನಿಧ್ಯವಿರಲಿಲ್ಲ. ಸಂಜಯ್ ಕುಮಾರ್ ನೇತೃತ್ವದ ಅನುಷ್ಟಾನ ಸಮಿತಿಯಲ್ಲಿಯೂ ಕೇವಲ ಪರಿಸರ ತಜ್ಞರು ಮಾತ್ರ ಇದ್ದಾರೆ. ಆದ್ದರಿಂದ ಪ್ರಸ್ತುತ ಸಮಿತಿಯನ್ನು ವಿಸರ್ಜಿಸಿ ಸಮಾನ ಪ್ರಾತಿನಿಧ್ಯವಿರುವ ಹೊಸ ಸಮಿತಿ ರಚಿಸಲು ರಾಜ್ಯ ಸರ್ಕಾರ ಕೇಂದ್ರವನ್ನು ಒತ್ತಾಯಿಸಬೇಕು ಎಂದು ಆಗ್ರಹಿಸಿದ ಮಧು ಬೋಪಣ್ಣ ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಒಳಪಡುವ ಪ್ರದೇಶಗಳ ಶಾಸಕರು, ಮಂತ್ರಿಗಳು ಕೇಂದ್ರ ಸರ್ಕಾರದ ಬಳಿಗೆ ನಿಯೋಗ ತೆರಳಿ ವಸ್ತುಸ್ಥಿತಿಯನ್ನು ಮನವರಿಕೆ ಮಾಡುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಬಿ.ಟಿ. ದಿನೇಶ್, ಜಿನ್ನು ನಾಣಯ್ಯ, ಉದಯ್ ಶಂಕರ್ ನೂರಂಬಡ ಉಪಸ್ಥಿತರಿದ್ದರು.