ಶನಿವಾರಸಂತೆ, ಸೆ. ೧೩: ಶನಿವಾರಸಂತೆ ಪಟ್ಟಣದಲ್ಲಿ ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವ ಬಗ್ಗೆ ಶನಿವಾರ ಬಂದ ಖಚಿತ ಮಾಹಿತಿಯ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಜಿ.ಕೃಷ್ಣರಾಜ್ ನೇತೃತ್ವದಲ್ಲಿ ಸಿಬ್ಬಂದಿ ಹಾಗೂ ಸೋಮವಾರಪೇಟೆಯ ಹಿರಿಯ ಕಾರ್ಮಿಕ ನಿರೀಕ್ಷಕರು ಜಂಟಿಯಾಗಿ ವಿಶೇಷ ತನಿಖಾ ತಂಡ ರಚಿಸಿ ಕಾರ್ಯಾಚರಣೆ ನಡೆಸಿದರು. ಕಾರ್ಯಾಚರಣೆ ಸಂದರ್ಭ ಶನಿವಾರಸಂತೆಯಲ್ಲಿ ಓರ್ವ ಬಾಲ ಕಾರ್ಮಿಕ ಹಾಗೂ ಓರ್ವ ಕಿಶೋರ ಕಾರ್ಮಿಕ ಕೆಲಸ ಮಾಡುತ್ತಿರುವುದು ಕಂಡುಬAದಿತು. ತಕ್ಷಣ ಅವರಿಬ್ಬರನ್ನು ರಕ್ಷಿಸಿ, ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ ಅಡಿ ಮಾಲೀಕರ ವಿರುದ್ಧ ಕಾನೂನು ರೀತಿ ಪ್ರಕರಣ ದಾಖಲಿಸಲಾಯಿತು.
ಈ ಸಂದರ್ಭ ವೃತ್ತ ನಿರೀಕ್ಷಕರಾದ ಜಿ.ಕೃಷ್ಣರಾಜ್ ಮಾತನಾಡಿ, ಮಕ್ಕಳನ್ನು ಬಾಲ ಕಾರ್ಮಿಕರಾಗಿ ನೇಮಿಸಿಕೊಳ್ಳುವುದು ಗಂಭೀರ ಮತ್ತು ಕಾನೂನುಬಾಹಿರ ಅಪರಾಧ. ಸುತ್ತಮುತ್ತ ಇಂತಹ ಪ್ರಕರಣಗಳು ಕಂಡುಬAದಲ್ಲಿ ತಕ್ಷಣ ಇಖSS ೧೧೨/ ಅhiಟಜ ಊeಟಠಿಟiಟಿe ೧೦೯೮/ ಶನಿವಾರಸಂತೆ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಹೇಳಿದರು.