.ಸೋಮವಾರಪೇಟೆ, ಸೆ. ೧೩ : ಕ್ಷೇತ್ರದಾದ್ಯಂತ ಹಿಂದೆAದೂ ಕಾಣದಂತಹ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಕಳಪೆ ಕಾಮಗಾರಿಗಳನ್ನು ಶಾಸಕ ಡಾ. ಮಂತರ್ ಗೌಡ ಅವರು ಎಂದಿಗೂ ಬೆಂಬಲಿಸಿಲ್ಲ. ಇವರ ಬಗ್ಗೆ ಮಾಜೀ ಶಾಸಕ ಅಪ್ಪಚ್ಚು ರಂಜನ್ ಅವರು ಪ್ರಶ್ನಿಸಿರುವುದು ರಾಜಕೀಯ ಹತಾಶೆಯಾಗಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.

ಕಳೆದ ತಾ.೭ರಂದು ಜೂನಿಯರ್ ಕಾಲೇಜು ಆವರಣದಲ್ಲಿರುವ ಬಾಸ್ಕೆಟ್ ಬಾಲ್ ಮೈದಾನದ ಬದಿಯಲ್ಲಿ ಅವೈಜ್ಞಾನಿಕ ತಡೆಗೋಡೆ ನಿರ್ಮಾಣವಾಗುತ್ತಿರುವ ಬಗ್ಗೆ ಹಾಗೂ ಆಲೇಕಟ್ಟೆಯಿಂದ ಕೈಗೊಳ್ಳಲಾಗಿರುವ ಕಾಂಕ್ರೀಟ್ ರಸ್ತೆಯಲ್ಲಿ ಬಿರುಕು ಬಿಟ್ಟಿರುವ ಬಗ್ಗೆ ಸ್ಥಳೀಯರು ಗಮನ ಸೆಳೆದ ಹಿನ್ನೆಲೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಮಾಜೀ ಶಾಸಕ ಅಪ್ಪಚ್ಚು ರಂಜನ್ ಅವರು, ಮೇಲ್ನೋಟಕ್ಕೆ ಕಾಮಗಾರಿ ಅವೈಜ್ಞಾನಿಕ ಹಾಗೂ ಕಳಪೆಯಾಗಿದೆ. ಇದಕ್ಕೆ ಗುತ್ತಿಗೆದಾರ, ಅಭಿಯಂತರು, ಅಥವಾ ಶಾಸಕರು ಹೊಣೆಗಾರರಾ? ಎಂದು ಪ್ರಶ್ನಿಸಿದ್ದರು. ಮುಂದುವರೆದು ಶಾಸಕರು ಕಳಪೆ ಕಾಮಗಾರಿಗಳಿಗೆ ಸಹಕಾರ ನೀಡುತ್ತಿದ್ದಾರಾ? ಎಂದೂ ಪ್ರಶ್ನೆ ಮಾಡಿದ್ದರು.

ಈ ವಿಷಯಕ್ಕೆ ಸಂಬAಧಿಸಿದAತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸದಸ್ಯ ಹಾಗೂ ಸೋಮವಾರಪೇಟೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎ.ಆದಂ ಅವರು, ಕಾಮಗಾರಿಗಳು ನಡೆಯುವ ಸಂದರ್ಭ ಗುತ್ತಿಗೆದಾರ, ಅಭಿಯಂತರರು ಇರುತ್ತಾರೆ. ಕೆಲಸವನ್ನು ಅವರು ನೋಡಿಕೊಳ್ಳುತ್ತಾರೆ. ಟರ್ಫ್ ಮೈದಾನದ ತಡೆಗೋಡೆ ಕುಸಿದ ಸಂದರ್ಭ ಶಾಸಕರು ಬಿಲ್ ತಡೆ ಹಿಡಿದು ಹೊಸದಾಗಿ ನಿರ್ಮಿಸಲು ನಿರ್ದೇಶನ ನೀಡಿದ್ದಾರೆ. ಮಡಿಕೇರಿ ಜಿಲ್ಲಾಧಿಕಾರಿ ಕಚೇರಿ ಎದುರು ತಡೆಗೋಡೆ ಕಳಪೆಯಾಗಿ ಕುಸಿದ ಸಂದರ್ಭ ಅಂದಿನ ಶಾಸಕರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿಲ್ಲ ಎಂದರು. ಗಾಂಧಿನಗರದಲ್ಲಿ ತಡೆಗೋಡೆ ಕುಸಿದಾಗಲೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ಕಳಪೆ ಕಾಮಗಾರಿಗೆ ಶಾಸಕರು ಹೊಣೆಗಾರರಾ ಎಂದು ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದ.

ಪಟ್ಟಣ ಪಂಚಾಯಿತಿ ನಗರೋತ್ಥಾನ ಅನುದಾನ ರಾಜ್ಯ ಸರ್ಕಾರದ ಪಾಲಿಸಿ. ಯಾರೇ ಶಾಸಕರಾದರೂ ಸಹಜವಾಗಿ ಅನುದಾನ ಬರುತ್ತದೆ. ಕಳೆದ ೨೫ ವರ್ಷದಿಂದ ಬಿಜೆಪಿಯವರೇ ಅಧ್ಯಕ್ಷರಾಗಿದ್ದರು. ಆದರೂ ಅನುದಾನ ಬಳಕೆ ಮಾಡಿಲ್ಲ. ಅವರ ಅಧಿಕಾರದ ಅವಧಿಯಲ್ಲಿ ಯಾಕೆ ಕರೆದು ಕೇಳಲಿಲ್ಲ. ಈಗ ಪ್ರತಿಭಟನೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ತೀರ್ಮಾನಿಸಬೇಕು. ಅಮೃತ್-೨ ಯೋಜನೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ. ಭೂಮಿಪೂಜೆ ಮಾಡಿರುವುದು ಡಾ. ಮಂತರ್ ಗೌಡ ಅವರು. ಕೆಲಸಗಳು ನಡೆಯುತ್ತಿದೆ. ಇನ್ನೂ ಪೂರ್ಣ ಪ್ರಮಾಣದಲ್ಲಿ ಬಿಲ್ ಮಾಡಿಲ್ಲ. ಈ ಬಗೆಗಿನ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಆದಂ ಹೇಳಿದರು.

ಗೋಷ್ಠಿಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಶೀಲಾ ಡಿಸೋಜ, ನಗರ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಯುವ ಕಾಂಗ್ರೆಸ್ ಅಧ್ಯಕ್ಷ ಡಿ.ಯು. ಕಿರಣ್, ಪ.ಪಂ. ಮಾಜೀ ನಾಮನಿರ್ದೇಶಿತ ಸದಸ್ಯ ವಿನಿ ಅವರುಗಳು ಇದ್ದರು.