ಮಡಿಕೇರಿ, ಸೆ. ೧೨: ಈ ಬಾರಿಯ ಗೌರಿ ಗಣೇಶೋತ್ಸವವನ್ನು ಸುರಕ್ಷಿತವಾಗಿ ಹಾಗೂ ಜವಾಬ್ದಾರಿಯುತವಾಗಿ ಆಚರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಮಾಹಿತಿ ನೀಡಿದ್ದಾರೆ.

ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಗಿದೆ. ಉತ್ಸವ ಸಮಿತಿ ಪದಾಧಿಕಾರಿಗಳೊಂದಿಗೂ ಠಾಣಾ ಮಟ್ಟದಲ್ಲಿ ಹಾಗೂ ಜಿಲ್ಲಾಮಟ್ಟದಲ್ಲಿ ಸಭೆ ನಡೆಸಿ ಗಣೇಶೋತ್ಸವ ಆಚರಣೆ ಸಂದರ್ಭ ಅನುಸರಿಸಬೇಕಾದ ನಿಯಮಗಳು ಹಾಗೂ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಬಿಂದುಮಣಿ ತಿಳಿಸಿದರು.

ಆಯೋಜಕರಿಗೆ ಉತ್ಸವ ಆಚರಣೆ ಸಂಬAಧ ಅನುಮತಿ ಪಡೆಯಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ತಾಲೂಕುವಾರು ಏಕಗವಾಕ್ಷಿ ಸಮಿತಿ ರಚಿಸಲಾಗಿದೆ. ಈ ಸಮಿತಿಯು ತಾ. ೧೩ ರವರೆಗೆ ಕಾರ್ಯನಿರ್ವಹಿಸಲಿದೆ. ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನಾ ಸ್ಥಳದಲ್ಲಿ ಸಿಸಿಟಿವಿಗಳನ್ನು ಅಳವಡಿಸಬೇಕು; ಬೆಂಕಿ ಅನಾಹುತಗಳಾಗದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ಪ್ರತಿಷ್ಠಾಪನಾ ಸ್ಥಳದಲ್ಲಿ ಯಾವುದೇ ಕಳವು ನಡೆಯದ ರೀತಿಯಲ್ಲಿ ಸಮಿತಿಗಳ ಸ್ವಯಂ ಸೇವಕರನ್ನು ಕೂಡ ನಿಯೋಜಿಸಬೇಕೆಂದು ಉತ್ಸವ ಸಮಿತಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಉತ್ಸವ ಮೂರ್ತಿಗಳ ವಿಸರ್ಜನಾ ದಿನಾಂಕ, ಸಮಯ ಹಾಗೂ ಮೆರವಣಿಗೆ ಸಾಗುವ ಮಾರ್ಗದ ಬಗ್ಗೆ ಮುಂಚಿತವಾಗಿ ಉತ್ಸವ ಸಮಿತಿಗಳು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಅನುಮತಿ ಪಡೆಯಬೇಕು. ಉತ್ಸವ ಆಚರಣೆ ವೇಳೆ ೪ಏಳನೇ ಪುಟಕ್ಕೆ

ಅನುಸರಿಸಬೇಕಾದ ವಿವಿಧ ಇಲಾಖೆಗಳ ನಿಯಮ, ನ್ಯಾಯಾಲಯದ ಆದೇಶಗಳ ಬಗ್ಗೆ ಉತ್ಸವ ಸಮಿತಿಗಳಿಗೆ ಮಾಹಿತಿ ನೀಡಲಾಗಿದ್ದು, ಅವುಗಳನ್ನು ಉತ್ಸವ ಸಮಿತಿಗಳು ಪಾಲನೆ ಮಾಡಬೇಕು.

ಡಿಜೆ ಬಳಕೆ ಸಂಬAಧ ಧ್ವನಿಯ ಮಿತಿಯನ್ನು ಎಷ್ಟು ಬಳಸಬೇಕು ಎಂಬ ಬಗ್ಗೆಯೂ ಸೂಚನೆ ನೀಡಲಾಗಿದ್ದು, ಲೌಡ್‌ಸ್ಪೀಕರ್, ಪ್ರೆಷರ್ ಮಿಡ್‌ಗಳನ್ನು ಬಳಸುವಂತಿಲ್ಲ. ಈ ಸಂಬAಧ ಧ್ವನಿವರ್ಧಕಗಳ ಮಾಲೀಕರ ಸಂಘದವರಿಗೂ ಸಭೆ ನಡೆಸಿ ಸೂಚನೆ ನೀಡಲಾಗಿದೆ. ರಾತ್ರಿ ೧೦ ಗಂಟೆಯಿAದ ಬೆಳಿಗ್ಗೆ ೬ ಗಂಟೆಯವರೆಗೆ ಧ್ವನಿವರ್ಧಕವನ್ನು ಬಳಸುವಂತಿಲ್ಲ. ಗಣಪತಿ ವಿಸರ್ಜನೆ ವೇಳೆ ನುರಿತ ಈಜುಗಾರರನ್ನು ನಿಯೋಜಿಸಿಕೊಳ್ಳಬೇಕು; ಲೈಫ್‌ಗಾರ್ಡ್ಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ಡಿಜೆ ಬಳಕೆ ಸಂಬAಧ ಜಿಲ್ಲೆಯ ಎಲ್ಲಾ ಕಡೆಗಳಿಗೂ ಒಂದೇ ನಿಯಮವಿರುತ್ತದೆ ಎಂದು ಎಸ್‌ಪಿ ಹೇಳಿದರು.

ಡಿಜೆಯನ್ನು ಎಷ್ಟು ಮಿತಿಯಲ್ಲಿ ಬಳಸಬೇಕು ಎಂಬ ಬಗ್ಗೆ ಇಲಾಖೆಯಿಂದ “ಡೆಮೋ'' ಮೂಲಕ ಉತ್ಸವ ಸಮಿತಿಗಳಿಗೆ ಮಾಹಿತಿ ನೀಡಲು ಕ್ರಮಕೈಗೊಳ್ಳಲಾಗುವುದು. ಜಿಲ್ಲಾ ವ್ಯಾಪ್ತಿಯಲ್ಲಿ ಗಣೇಶ ಪ್ರತಿಷ್ಠಾಪನೆ ಸಂಬAಧ ಇದುವರೆಗೆ ೬೩೦ ಅರ್ಜಿಗಳು ಬಂದಿದ್ದು, ತಾ. ೧೩ರ ಅಂತ್ಯದಲ್ಲಿ ಒಟ್ಟು ಎಷ್ಟು ಕಡೆ ಉತ್ಸವ ಆಚರಣೆ ನಡೆಯಲಿದೆ ಎಂಬ ಬಗ್ಗೆ ಖಚಿತಗೊಳ್ಳಲಿದೆ. ಎಲ್ಲಾ ಉತ್ಸವ ಸಮಿತಿಗಳು ಗಣೇಶೋತ್ಸವ ಆಚರಣೆ ಸಂಬAಧ ಇರುವಂತಹ ನಿಯಮಗಳನ್ನು ಪಾಲನೆ ಮಾಡಬೇಕು ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಬಿಂದುಮಣಿ ಎಚ್ಚರಿಕೆ ನೀಡಿದರು.