ಚೆಯ್ಯಂಡಾಣೆ, ಸೆ. ೧೨: ವೀರಾಜಪೇಟೆ ಅನ್ವಾರುಲ್ ಹುದಾ ಹಾಗೂ ಸುನ್ನಿ ಸಂಘ ಕುಟುಂಬಗಳ ಸಂಯುಕ್ತಾಶ್ರಯದಲ್ಲಿ ವೀರಾಜಪೇಟೆಯಲ್ಲಿ "ಅನುಪಮ ನಾಯಕ ಅನರ್ಘ್ಯ ಸಂದೇಶ" ಎಂಬ ಧ್ಯೇಯವಾಕ್ಯದಲ್ಲಿ ಬೃಹತ್ ಪ್ರವಾದಿ ಸಂದೇಶ ಜಾಥಾ ನಡೆಯಿತು.
ವೀರಾಜಪೇಟೆ ಪಂಜರ್ಪೇಟೆಯಿAದ ಆರಂಭಗೊAಡ ಜಾಥಾಗೆ ಶಾಫಿ ಬಾ ಅಲವಿ ತಂಙಳ್ ಒಳಪಟ್ಟಣಂ ಹಾಗೂ ಸ್ವಾಗತ ಸಮಿತಿಯ ಚೇರ್ಮನ್ ಸಯ್ಯಿದ್ ಅಹ್ಮದ್ ಮಹ್ದಿ ಅಹ್ಮದ್ ಅಲ್ ಬುಖಾರಿ ಅವರು ಚಾಲನೆ ನೀಡಿದರು.
ವೀರಾಜಪೇಟೆ ಪಟ್ಟಣದ ಪ್ರಮುಖ ಬೀದಿಗಳಾದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ, ದೊಡ್ಡಟ್ಟಿ ಚೌಕಿ, ಗಡಿಯಾರ ಕಂಬ, ಖಾಸಗಿ ಬಸ್ ನಿಲ್ದಾಣ ಹಾಗೂ ಮೀನುಪೇಟೆ ಮೂಲಕ ಸಂಚರಿಸಿದ ಜಾಥಾವು ಅನ್ವಾರ್ ಕ್ಯಾಂಪಸ್'ನಲ್ಲಿ ಸಮಾಪ್ತಿಗೊಂಡಿತು. ಜಾಥಾದಲ್ಲಿ ವಿದ್ಯಾರ್ಥಿಗಳ, ಯುವಕರ, ಹಿರಿಯರ ದಫ್ ಪ್ರದರ್ಶನ ನಡೆಯಿತು. ಫ್ಲವರ್ ಶೋ, ಸ್ಕೌಟ್ಸ್ ತಂಡ ಮೆರುಗು ನೀಡಿತು. ವಿವಿಧ ಜಮಾಅತ್'ಗಳಿಂದ ಆಗಮಿಸಿ ಆಕರ್ಷಣೀಯ ದಫ್ ಪ್ರದರ್ಶನ ನೀಡಿದ ತಂಡ ನೋಡುಗರ ಗಮನ ಸೆಳೆಯಿತು. ಬೃಹತ್ ಜಾಥಾವು ಯಾವುದೇ ಸಮಸ್ಯೆಗಳಾಗದೆ ಶಾಂತಿ ಸಂದೇಶವನ್ನು ಸಾರುತ್ತಾ ವೀರಾಜಪೇಟೆ ಪಟ್ಟಣದ ವಿವಿಧೆಡೆಗಳಲ್ಲಿ ಸಂಚರಿಸಿತು.
ಜಾಥಾವು ವೀರಾಜಪೇಟೆಯ ಹೃದಯ ಭಾಗಕ್ಕೆ ತಲುಪಿದ ಸಂದರ್ಭ ಶಾಫಿ ಜುಮಾ ಮಸೀದಿ ಹಾಗೂ ಡೊನೇಟರ್ಸ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಜಾಥಾ ಸಾರಥಿಗಳಿಗೆ ಹೂಗುಚ್ಚ ಹಾಗೂ ಸೇರಿದ ಸರ್ವರಿಗೂ ಸಿಹಿ ತಿಂಡಿ ನೀಡಿ ಜಾಥಾಕ್ಕೆ ಅದ್ದೂರಿ ಸ್ವಾಗತ ಕೋರಲಾಯಿತು.
ಈ ಸಂದರ್ಭ ಜಾಥಾವನ್ನುದ್ದೇಶಿಸಿ ಮಾತನಾಡಿದ ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಹಾಗೂ ಅನ್ವಾರ್ ಸಾರಥಿ ಅಶ್ರಫ್ ಅಹ್ಸನಿ ಅವರು, ಮಹಮ್ಮದ್ ಪೈಗಂಬರ್ ಅವರು ವಿಶ್ವಕ್ಕೆ ಒಳ್ಳೆಯ ಸಂದೇಶವನ್ನು ನೀಡಿದ ವ್ಯಕ್ತಿತ್ವ. ಅವರನ್ನು ಪ್ರೀತಿಸಿ ಅವರ ಜೀವನ ಚರಿತ್ರೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು. ಪರಸ್ಪರ ಸ್ನೇಹ, ಸೌಹಾರ್ದತೆ, ಶಾಂತಿಯ ಸಂದೇಶಕ್ಕೆ ಅವರು ಸಾರಿದ ಮಾರ್ಗವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಪ್ರಖ್ಯಾತ ವಾಗ್ಮಿ ಮೊಹಮ್ಮದ್ ರಾಫಿ ಹಿಮಮಿ ಖಾಮಿಲ್ ಸಖಾಫಿ ಜಾಥಾವನ್ನು ಉದ್ದೇಶಿಸಿ ಮೀಲಾದ್ ಸಂದೇಶ ಭಾಷಣ ಮಾಡಿ ಇಸ್ಲಾಂ ಎಂದಿಗೂ ಅಶಾಂತಿಯನ್ನೋ ಭಯೋತ್ಪಾದನೆಯನ್ನೋ ಪ್ರೋತ್ಸಾಹಿಸುತ್ತಿಲ್ಲ, ಅದನ್ನು ಪೂರ್ಣವಾಗಿ ಖಂಡಿಸುತ್ತಿದೆ ಎಂದರು. ಅಸ್ಮಾಹುಲ್ ಉಸ್ಮಾ ಮಜ್ಲಿಸ್ಗೆ ಸಯ್ಯಿದ್ ಶಾಫಿ ಬಾ ಅಲವಿ ತಂಙಳ್ ಒಳಟ್ಟಣಂ ನೇತೃತ್ವ ವಹಿಸಿ ದುಆ ಆಶೀರ್ವಚನ ನೀಡಿದರು.
ಈ ಸಂದರ್ಭ ಸ್ವಾಗತ ಸಮಿತಿಯ ಚೆರ್ಮನ್ ಸಯ್ಯಿದ್ ಅಹ್ಮದ್ ಮೆಹ್ದಿ ತಂಙಳ್ ಲಕ್ಷದೀಪ್, ಕನ್ವಿನರ್ ಸಯ್ಯಿದ್ ಶಿಯಾಬ್ ತಂಙಳ್, ಅನ್ವಾರುಲ್ ಹುದಾ ಉಪಾಧ್ಯಕ್ಷರಾದ ಅಬೂಬಕ್ಕರ್ ಹಾಜಿ ಹಾಕತ್ತೂರು, ಎಸ್ವೈಎಸ್ ಜಿಲ್ಲಾಧ್ಯಕ್ಷ ಮುನೀರ್ ಮಲ್ಳರಿ, ಎಸ್ಜೆಎಂ ಜಿಲ್ಲಾಧ್ಯಕ್ಷ ಅಬ್ದುಲ್ಲ ಸಖಾಫಿ, ಕುಂಜಿಲ ಮುದರ್ರಿಸ್ ನಿಝಾರ್ ಅಹ್ಸನಿ ಕಕ್ಕಡಿಪುರಂ, ಕೆಎಂಜೆ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಕುಂಜಿಲ, ಎಸ್ವೈಎಸ್ ಮಾಜಿ ರಾಜ್ಯಾಧ್ಯಕ್ಷ ಅಬ್ದುಲ್ ಹಫೀಲ್ ಸಅದಿ, ಎಸ್ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್, ಎಸ್ಎಸ್ಎಫ್ ಜಿಲ್ಲಾಧ್ಯಕ್ಷರಾದ ಖಮರುದ್ದೀನ್ ಅನ್ವಾರಿ, ಪ್ರಧಾನ ಕಾರ್ಯದರ್ಶಿ ಜುನೈದ್, ರಾಜ್ಯ ಕಾರ್ಯದರ್ಶಿ ಮುಜೀಬ್, ಖಾತಿಮ್ ತಂಙಳ್, ಎಸ್ವೈಎಸ್ ರಾಜ್ಯ ನಾಯಕರಾದ ಅಹ್ಮದ್ ಮದನಿ, ಸಲಾಂ ಕುಂಜಿಲ, ಅನ್ವಾರ್ ಮುದರಿಸ್ ಇಸ್ಮಾಯಿಲ್ ಸಖಾಫಿ, ಪ್ರಾಂಶುಪಾಲರಾದ ಅಬ್ದುಲ್ ರಶೀದ್ ಸಅದಿ, ಅನ್ವಾರ್ ಸೌದಿ ಕಾರ್ಯದರ್ಶಿ ಸಂಶುದ್ದಿನ್ ಮುಸ್ಲಿಯಾರ್ ಪೆರಾಜೆ, ಅನ್ವಾರ್ ಯುಎಇ ಕಾರ್ಯದರ್ಶಿ ಮುಜೀಬ್ ಕಡಂಗ, ಇಬ್ರಾಹಿಂ ಕಲ್ಲುಬಾಣೆ, ಉಮರ್ ಕಲ್ಲುಬಾಣೆ, ನೌಫಲ್ ವೀರಾಜಪೇಟೆ, ನೌಫಲ್ ಸಿದ್ದಾಪುರ, ಮೀಲಾದ್ ಜಾಥಾದ ಸ್ವಾಗತ ಸಮಿತಿಯ ಖಾಲಿದ್ ಫೈಝಿ ಅಂಬಟ್ಟಿ, ರಝಾಕ್ ಮಿಸ್ಬಾಹಿ ಕಾಟ್ರಕೊಲ್ಲಿ, ಹಂಝ ಮದನಿ ಗುಯ್ಯ, ಸಲಾಂ ಗೋಣಿಕೊಪ್ಪ, ಅಹ್ಮದ್ ಹಾಜಿ, ಎಸ್ಎಸ್ಎಫ್, ಎಸ್ವೈಎಸ್, ಕೆಎಂಜೆ, ಎಸ್ಜೆಎಂ ಪದಾಧಿಕಾರಿಗಳು, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
-ಅಶ್ರಫ್