ಚೆಟ್ಟಳ್ಳಿ, ಸೆ. ೧೨: ಪರ್ವತಾರೋಹಣ ಹಾಗೂ ಶೂಟಿಂಗ್ ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮಾಡಿರುವ ಕೊಡಗಿನ ಜಮ್ಮಡ ಪ್ರೀತ್ ಅಪ್ಪಯ್ಯ ಅವರನ್ನು ಬೆಂಗಳೂರಿನ ವಿಧಾನಸೌಧದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ಹಾಗೂ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ, ಶಾಸಕ ಎ.ಎಸ್. ಪೊನ್ನಣ್ಣ ಅವರು ಸನ್ಮಾನಿಸಿ ಗೌರವಿಸಿದರು.

ಮೂಲತಃ ಕೊಡಗಿನ ಅತ್ತೂರಿನವರಾದ, ಪ್ರಸ್ತುತ ಮೈಸೂರಿನಲ್ಲಿ ನೆಲೆಸಿರುವ ವಕೀಲ ಜಮ್ಮಡ ಅಯ್ಯಣ್ಣ ಅವರ ಪತ್ನಿ ಪ್ರೀತ್ ಅಪ್ಪಯ್ಯ ಅವರು ವಿಶ್ವದ ಸೆವೆನ್ ಸಮಿಟ್ಸ್ ಪೈಕಿ ಮೂರು ಪ್ರಮುಖ ಶಿಖರಗಳನ್ನು ಏರುವ ಮೂಲಕ ಅಂತರರಾಷ್ಟಿçÃಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

ಆಫ್ರಿಕಾ ಖಂಡದ ಅತಿ ಎತ್ತರದ ಮೌಂಟ್ ಕಿಲಿಮಂಜಾರೋ (೫,೮೯೫ಮೀ.) ಶಿಖರವನ್ನು ೨೦೨೩ರಲ್ಲಿ, ಯುರೋಪ್ ಖಂಡದ ಅತಿ ಎತ್ತರದ ಮೌಂಟ್ ಎಲ್ಬçಸ್ (೫,೬೪೨ಮೀ.) ಶಿಖರವನ್ನು ೨೦೨೪ರಲ್ಲಿ ಹಾಗೂ ಆಸ್ಟೆçÃಲಿಯಾ ಖಂಡದ ಅತಿ ಎತ್ತರದ ಮೌಂಟ್ ಕೊಸ್ಸಿಯಸ್ಕೋ (೨,೨೨೮ ಮೀ.) ಶಿಖರವನ್ನು ೨೦೨೬ರ ಆಗಸ್ಟ್ ೧೫ರಂದು ಸ್ವಾತಂತ್ರö್ಯ ದಿನದಂದು ಯಶಸ್ವಿಯಾಗಿ ಏರಿದ್ದಾರೆ.

ಪರ್ವತಾರೋಹಣದ ಜತೆಗೆ ಸ್ಪರ್ಧಾತ್ಮಕ ಶೂಟಿಂಗ್‌ನಲ್ಲೂ ಪ್ರೀತ್ ಅಪ್ಪಯ್ಯ ಗಮನಾರ್ಹ ಸಾಧನೆ ಮಾಡಿದ್ದಾರೆ. ಬೆಂಗಳೂರಿನ ಎಸ್‌ಎಐನಲ್ಲಿ ನಡೆದ ಕರ್ನಾಟಕ ರಾಜ್ಯಮಟ್ಟದ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಅಲ್ಲದೆ ವಿವಿಧ ರಾಜ್ಯ ಹಾಗೂ ಪ್ರಾದೇಶಿಕ ಮಟ್ಟದ ಶೂಟಿಂಗ್ ಸ್ಪರ್ಧೆಗಳಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರನ್ನು ಸನ್ಮಾನಿಸಿ ಮಾತನಾಡಿದ ಇಂಧನ ಸಚಿವ ಕೆ.ಜೆ. ಜಾರ್ಜ್, ಪರ್ವತಾರೋಹಣ ಹಾಗೂ ಶೂಟಿಂಗ್ ಎರಡೂ ಕ್ಷೇತ್ರಗಳಲ್ಲಿ ಪ್ರೀತ್ ಅಪ್ಪಯ್ಯ ಅವರ ಸಾಧನೆ ಶ್ಲಾಘನೀಯವಾಗಿದೆ. ಅವರ ಪರಿಶ್ರಮ, ಆತ್ಮವಿಶ್ವಾಸ ಹಾಗೂ ಬದ್ಧತೆ ರಾಜ್ಯದ ಯುವಜನತೆಗೆ ಸ್ಫೂರ್ತಿದಾಯಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎ.ಎಸ್. ಪೊನ್ನಣ್ಣ ಶುಭ ಹಾರೈಸಿದರು. ರಾಜ್ಯಕ್ಕೆ ಕೀರ್ತಿ ತರುತ್ತಿರುವ ಕ್ರೀಡಾಪಟುಗಳಿಗೆ ನಿರಂತರ ಪ್ರೋತ್ಸಾಹ ನೀಡಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.