ಮಡಿಕೇರಿ: ಪಾರಾಣೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಹಿರಿಯ ನಾಗರಿಕರಿಗೆ ಗೌರವ ನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ರಾಜ್ಯ ಪ್ರಶಸ್ತಿ ವಿಜೇತ, ನಿವೃತ್ತ ಮುಖ್ಯಶಿಕ್ಷಕ ಕೆ.ಎ. ಉಮ್ಮರ್, ನಿವೃತ್ತ ನಾಯಕ್ ಸುಬೇದಾರ್ ನಾಯಕಂಡ ಬೋಪಣ್ಣ ಅವರನ್ನು ಮಿಸ್ಟಿ ಹಿಲ್ಸ್ ವತಿಯಿಂದ ಸನ್ಮಾನಿಸಲಾಯಿತು.
ಕನ್ನಡ ಮಾಧ್ಯಮದಲ್ಲಿ ಓದಿ ಸಮಾಜದಲ್ಲಿ ಉನ್ನತ ಹುದ್ದೆಯನ್ನು ಪಡೆಯಲು ಸಾಧ್ಯ. ಮನಸಿದ್ದರೆ ಮಾರ್ಗ ಎಂಬAತೆ ಪ್ರತಿಯೊಬ್ಬರು ಏಕಾಗ್ರತೆಯಿಂದ ಓದಿ ಉತ್ತಮ ನಾಗರಿಕರಾಗಿ ಸಂಸ್ಕಾರವAತ ಸಮಾಜ ನಿರ್ಮಾಣ ಮಾಡುವಂತೆ ಉಮ್ಮರ್ ಕರೆ ನೀಡಿದರು
ರೋಟರಿ ಮಿಸ್ಟಿ ಹಿಲ್ಸ್ ಪರವಾಗಿ ಮಾತನಾಡಿದ ಡಾ. ಶುಭಾ ಕೆ.ಜಿ., ಅನೇಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಮಡಿಕೇರಿಯ ರೋಟರಿ ಮಿಸ್ಟಿ ಸಕ್ರಿಯವಾಗಿ ಕಳೆದ ೨೨ ವರ್ಷಗಳಿಂದ ಪಾಲ್ಗೊಳ್ಳುತ್ತಿದೆ. ಇಂದಿನ ಮಕ್ಕಳು ನಮ್ಮ ಹಿರಿಯರಿಗೆ ಗೌರವ, ಪ್ರೀತಿ, ಸಮಯ ನೀಡಿ ಅವರ ಅನುಭವಗಳನ್ನು ನಮ್ಮ ಜೀವನ ಪಾಠವನ್ನಾಗಿ ಮಾಡಿಕೊಳ್ಳುವುದು ಅತ್ಯವಶ್ಯಕ ಎಂದು ಕರೆ ನೀಡಿದರು.
ಮುಖ್ಯ ಶಿಕ್ಷಕ ಕಿಶೋರ್, ಪಾರಾಣೆಯ ಸರಕಾರಿ ಹೋಮಿಯೋಪತಿ ಚಿಕಿತ್ಸಾಲಯದ ಡಾ.ಚಂದನ್ ಹಾಜರಿದ್ದರು.. ದೃಶ್ಯ, ನವ್ಯ, ದಿಶಾ ಪ್ರಾರ್ಥಿಸಿ, ಕಿಶೋರ್ ಸ್ವಾಗತಿಸಿ, ಕೆ.ವಿ. ಸಂಗೀತ ನಿರೂಪಿಸಿದರು.
ಮಡಿಕೇರಿ: ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನಗರದ ಎ.ಎಲ್.ಜಿ. ಕ್ರೆಸೆಂಟ್ ಶಾಲೆಯಲ್ಲಿ ಹಿರಿಯ ನಾಗರಿಕರ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ರೋಟರಿ ಮಿಸ್ಟಿ ಹಿಲ್ಸ್ನ ಕಾರ್ಯದರ್ಶಿ ಡಾ. ಚೇತನ್ ಹಾಗೂ ನಿರ್ದೇಶಕ ಕ್ಯಾರಿ ಕಾರ್ಯಪ್ಪ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಡಾ. ಚೇತನ್ ಜಿ.ಡಿ., ಹಿರಿಯರನ್ನು ಗೌರವಿಸುವುದು ನಮ್ಮ ಕರ್ತವ್ಯ. ಅವರ ಜೀವನಾನುಭವ ಮತ್ತು ಮಾರ್ಗದರ್ಶನವು ಯುವ ಪೀಳಿಗೆಗೆ ಅಮೂಲ್ಯವಾದ ದಾರಿದೀಪವಾಗಿದೆ ಎಂದು ತಿಳಿಸಿದರು.
ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹಿರಿಯರಾದ ವಸುಂದರಾ ಪ್ರಸನ್ನ ಹಾಗೂ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಾಗಯ್ಯ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ೧೦ನೇ ತರಗತಿಯ ವಿದ್ಯಾರ್ಥಿನಿಯರಾದ ಅನಮ್ ಮತ್ತು ಹಿಮಾನಿ ಹಾಗೂ ಶಿಕ್ಷಕಿ ಸುಹೈಲಾ ಹಿರಿಯ ನಾಗರಿಕರ ಮಹತ್ವದ ಕುರಿತು ಮಾತನಾಡಿದರು. ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕಿ. ಶುಭ ವಿಶ್ವನಾಥ್, ರೋಟರಿ ಮಿಸ್ಟ್ರಿ ಹಿಲ್ಸ್ನ ಸದಸ್ಯರಾದ ರೂಪ ಪ್ರಶಾಂತ್, ದಿವ್ಯ ಹಾಗೂ ಸೌಮ್ಯ ದಿನೇಶ್ ಉಪಸ್ಥಿತರಿದ್ದರು.
ಶಾಲೆಯ ಪ್ರಾಂಶುಪಾಲರಾದ ಜಾಯ್ಸಿ ವಿನಯ, ಉಪಪ್ರಾಂಶುಪಾಲೆ ಸುಲ್ಹತ್ ಹಾಜರಿದ್ದರು. ಶಿಫಾ ಸ್ವಾಗತಿಸಿ, ಸಮೀನಾ ವಂದಿಸಿದರು. ಶೈಲಾ ನಿರೂಪಿಸಿದರು.