ನಾಪೋಕ್ಲು, ಸೆ. ೧೨: ಇಲ್ಲಿನ ಇಂದಿರಾ ನಗರದ ವಿವೇಕಾನಂದ ಸಂಘದ ಗಣೇಶ್ ಉತ್ಸವ ಸೇವಾ ಸಮಿತಿ ವತಿಯಿಂದ ೨೧ನೇ ವರ್ಷದ ಅದ್ದೂರಿ ಗಣೇಶೋತ್ಸವ ಕಾರ್ಯಕ್ರಮವನ್ನು ತಾ. ೧೫ ರಿಂದ ೧೮ ರವರೆಗೆ ಐದು ದಿನಗಳ ಕಾಲ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಟಿ.ಕೆ. ಶಿವ ಹೇಳಿದರು.
ಇಲ್ಲಿಯ ಪಟ್ಟಣದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶೋತ್ಸವದ ಅಂಗವಾಗಿ ತಾ. ೧೪ ರಂದು ಬೆಳಿಗ್ಗೆ ೯ ಶ್ರೀ ಗೌರಿ ಗಣೇಶ ಉತ್ಸವ ಮೂರ್ತಿಯನ್ನು ನಾಪೋಕ್ಲು ಪಟ್ಟಣದಿಂದ ವಾದ್ಯಘೋಷದೊಂದಿಗೆ ಕೊಂಡೊಯ್ದು ಇಂದಿರಾ ನಗರದಲ್ಲಿ ಗಣಪತಿ ಹೋಮ ಪ್ರತಿಷ್ಠಾಪನೆ ಹಾಗೂ ಮಹಾಪೂಜೆಯ ನಂತರ ಉಪಹಾರ ವಿತರಣೆ ನಡೆಯಲಿದೆ ಎಂದರು
ಸಂಘದ ಉಸ್ತುವಾರಿ ಡಿ.ಆರ್. ಜಲೇಂದ್ರ ಮಾತನಾಡಿ, ತಾ. ೧೫ ರಿಂದ ೧೮ ರವರೆಗೆ ಸಂಜೆ ೭ ಗಂಟೆಯಿAದ ರಾತ್ರಿ ೧೦ ಗಂಟೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ತಾ. ೧೫ ರಂದು ಸಂಜೆ ಏಳರಿಂದ ಹತ್ತರವರೆಗೆ ರವಿ ಓಂಕಾರ ಬಳಗದವರಿಂದ ಸಂಗೀತ ರಸಸಂಜೆ ನಡೆಯಲಿದೆ. ತಾ. ೧೮ ರಂದು ಮಧ್ಯಾಹ್ನ ೧೨.೩೦ ಗಂಟೆಗೆ ಮಹಾಪೂಜೆ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಹೂವಿನ ಅಲಂಕೃತ ಮಂಟಪದಲ್ಲಿ ಸೌಂಡ್ಸ್ ಮತ್ತು ದೀಪದ ಮನರಂಜನಾ ಕಾರ್ಯಕ್ರಮಗಳೊಂದಿಗೆ ನಾಪೋಕ್ಲು ಪಟ್ಟಣದಲ್ಲಿ ಮೆರವಣಿಗೆ ನಡೆದು ಪವಿತ್ರ ಕಾವೇರಿ ನದಿಯಲ್ಲಿ ರಾತ್ರಿ ಉತ್ಸವ ಮೂರ್ತಿಯನ್ನು ವಿಸರ್ಜಿಸಲಾಗುವುದು ಎಂದರು. ಇದಕ್ಕೂ ಮುನ್ನ ತಾ. ೧೩ ರಂದು ಇಂದಿರಾ ನಗರದಲ್ಲಿ ಸಂಘದ ಧ್ವಜಾರೋಹಣ ಮತ್ತು ಸಂಘದ ಲೋಗೋ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ೨೦೨೫-೨೬ ಸಾಲಿನಲ್ಲಿ ೧೦ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ. ೮೦ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಕಾಫಿ ಬೆಳೆಗಾರ ಬಿದ್ದಾಟಂಡ ದಿನೇಶ್, ಪಂಚಾಯಿತಿ ಮಾಜಿ ಸದಸ್ಯ ಕುಲ್ಲೇಟಿರ ಅರುಣ್ ಬೇಬ, ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಅನಿಲ್, ಕೆಇಬಿ ಉಪ ಇಂಜಿನಿಯರ್ ಪ್ರಸಾದ್, ನಿವೃತ್ತ ಏರ್‌ಫೋರ್ಸ್ ಸೈಕ್ಲಿಂಗ್ ಕೋಚ್ ಚೆರ್ರಿ ಚರ್ಮಣ, ನಾಪೋಕ್ಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ವನಜಾಕ್ಷಿ, ಉದ್ಯಮಿ, ಕಾಫಿ ಬೆಳೆಗಾರ ಕೇಲೇಟಿರ ದೀಪು ದೇವಯ್ಯ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಅಂಬಿ ಕಾರ್ಯಪ್ಪ ಪಾಲ್ಗೊಳ್ಳಲಿರುವರು ಎಂದರು. ನಾಪೋಕ್ಲು ನಿವೃತ್ತ ಸರಕಾರಿ ವೈದ್ಯಾಧಿಕಾರಿ ಡಾ. ದೇವದಾಸ್, ದ್ವಿತೀಯ ಪಿಯುಸಿಯಲ್ಲಿ ರಾಜ್ಯಮಟ್ಟದಲ್ಲಿ ನಾಲ್ಕನೇ ರಾಂಕ್ ಪಡೆದ ಮೂವೆರ ಜಾಫ್ರಿ ಬೆಳ್ಳಿಯಪ್ಪ ಮಗ ಅದ್ವಿಕ್ ಗಣಪತಿ, ದ್ವಿತೀಯ ಪಿಯುಸಿಯಲ್ಲಿ ಶೇ. ೯೮ ಅಂಕ ಪಡೆದ ಪಿ.ಜಿ. ಸುಬ್ರಮಣಿ ಅವರ ಮಗಳು ದೀಕ್ಷಿತ, ದ್ವಿತೀಯ ಪಿಯುಸಿಯಲ್ಲಿ ಶೇ. ೯೫ ಅಂಕ ಪಡೆದ ಅಂಬಿ ಕಾರಿಯಪ್ಪ ಮತ್ತು ನಿತ್ಯ ಕಾರ್ಯಪ್ಪ ನವರ ಮಗಳು ದೇಚಕ್ಕ, ರಾಜ್ಯಮಟ್ಟದ ಕಬಡ್ಡಿ ಆಟಗಾರ್ತಿ ಟಿ.ಎಂ. ಗಣೇಶ್ ಅವರ ಮಗಳು ಮೇಘನಾ, ರಾಜ್ಯಮಟ್ಟದ ಹಾಕಿ ಆಟಗಾರ್ತಿ ಟಿ.ಕೆ. ಸುಬ್ರಮಣಿ ಅವರ ಮಗಳು ತನುಶ್ರೀ, ವಿದ್ಯಾರ್ಥಿಗಳಾದ ಸರ್ವಿಕ, ಅಪೂರ್ವ ಮಂಜುನಾಥ, ಹರ್ಷಿತ ಕುಶಾಲಪ್ಪ, ಸಹನಾ ಪಿ.ಎಸ್., ಹಂಸಿನಿ, ಕಾರುಣ್ಯ ಇವರನ್ನು ಸನ್ಮಾನಿಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ನಾಪೋಕ್ಲು ಇಂದಿರಾ ನಗರದ ವಿವೇಕಾನಂದ ಸಂಘದ ಗಣೇಶ್ ಉತ್ಸವ ಸೇವಾ ಸಮಿತಿ ಉಪಾಧ್ಯಕ್ಷ ಯನ್. ಆನಂದ, ಮಾಜಿ ಅಧ್ಯಕ್ಷ ಯು.ಕೆ. ಶಶಿ, ಸದಸ್ಯ ಕರ್ಪಸ್ವಾಮಿ, ವಿನಾಯಕ ಬಿ.ಎಸ್. ಉಪಸ್ಥಿತರಿದ್ದರು.