ಮಡಿಕೇರಿ: ಅರಮೇರಿಯ ಎಸ್ಎಂಎಸ್ ವಿದ್ಯಾಪೀಠದಲ್ಲಿ ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಹಿರಿಯ ನಾಗರಿಕರಿಗೆ ಗೌರವ ನಮನ ನಡೆಯಿತು. ಈ ಸಂದರ್ಭ ಹಿರಿಯ ನಾಗರಿಕರಾದ ಜಗದೀಶ್ ಮತ್ತು ಅಶ್ರಫುನ್ನಿಸ ಅವರನ್ನು ಸನ್ಮಾನಿಸಲಾಯಿತು
ರೋಟರಿ ಮಿಸ್ಟಿ ಹಿಲ್ಸ್ ಪರವಾಗಿ ಮಾತನಾಡಿದ ವಿಜಯಲಕ್ಷಿö್ಮ ಚೇತನ್ ಮಾತನಾಡಿದರು. ಪ್ರಾಂಶುಪಾಲೆ ಕುಸುಮ್ ಹಿರಿಯರ ಮಹತ್ವದ ಬಗ್ಗೆ ವಿವರಿಸಿದರು. ಶಾಲೆಯ ವಿದ್ಯಾರ್ಥಿಗಳು ತಮ್ಮ ತಾತ, ಅಜ್ಜಿಯರೊಂದಿನ ಒಡನಾಟವನ್ನು ವಿವರಿಸಿದರು. ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕ ಚೇತನ್ ಎಸ್.ಎಂ. ಕಾರ್ಯಕ್ರಮ ನಿರ್ವಹಿಸಿದರು.