ಶ್ರೀಮಂಗಲ, ಸೆ. ೧೧: ಬಿರುನಾಣಿಯ ಮರೆನಾಡ್ ಕೊಡವ ಸಮಾಜದಲ್ಲಿ ಕೈಲ್‌ಪೊಳ್ದ್ ಒತ್ತೋರ್ಮೆ ಕೂಟವನ್ನು ಮತ್ತು ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭ ಕೋವಿ-ಕತ್ತಿಗಳಿಗೆ ಆಯುಧ ಪೂಜೆ ಸಲ್ಲಿಸಲಾಯಿತು.

ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಉದ್ಘಾಟಿಸಿದ ಮುಖ್ಯ ಅತಿಥಿ ಅಂತರರಾಷ್ಟಿçÃಯ ಮಾಜಿ ಹಾಕಿ ಆಟಗಾರ ಕಾಳಿಮಾಡ ಸಂಜು ಸೋಮಯ್ಯ ಅವರು ಮಾತನಾಡಿ, ಗಡಿ ಪ್ರದೇಶವಾದ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಕೊಡವ ಜನಾಂಗದವರು ನೆಲೆಸಿರುವ ಈ ಪ್ರದೇಶದಲ್ಲಿ ಬಹಳಷ್ಟು ವರ್ಷಗಳಿಂದ ಕೊಡವ ಸಮಾಜ ನಿರ್ಮಿಸಲು ಪ್ರಯತ್ನ ನಡೆದಿದ್ದು ಕಳೆದ ಹಲವು ವರ್ಷಗಳ ಹಿಂದೆ ಜಾಗವನ್ನು ಪಡೆಯುವ ಮೂಲಕ ಇದೀಗ ಉತ್ತಮ ಮಟ್ಟದ ಕಟ್ಟಡ ನಿರ್ಮಿಸಲು ನಾಡಿನ ಎಲ್ಲರೂ ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು. ಈ ನಾಡಿನ ಬಹಳಷ್ಟು ಜನರು ಹೊರಗೆ ಹೋಗಿ ಉತ್ತಮ ಉದ್ಯೋಗ, ಉದ್ಯಮದೊಂದಿಗೆ ಹೆಸರು ಗಳಿಸಿದ್ದಾರೆ. ಅವರೆಲ್ಲರೂ ಸಹ ತಮ್ಮ ಹುಟ್ಟೂರಿನತ್ತ ಅಭಿಮಾನ, ಸೆಳೆತ ಹೊಂದಿದ್ದಾರೆ. ಇದೀಗ ಮುಂದಿನ ದಿನಗಳಲ್ಲಿ ಉತ್ತಮ ಕಟ್ಟಡ ನಿರ್ಮಾಣ ಮಾಡಲು ತಮ್ಮಿಂದಾಗುವ ಎಲ್ಲಾ ಸಹಕಾರವನ್ನು ನೀಡಲಾಗುವುದು. ಮುಂದಿನ ಭವಿಷ್ಯದ ಹಿತದೃಷ್ಟಿ ಗಮನದಲ್ಲಿಟ್ಟುPಚಿÉÆಂಡು ಉತ್ತಮ ರೂಪುರೇಷೆಯೊಂದಿಗೆ ಯೋಜನೆ ರೂಪಿಸುವ ಮೂಲಕ ಉತ್ತಮ ಪರಿಸರದ ನಡುವೆ ಮರೆನಾಡ್ ಕೊಡವ ಸಮಾಜವನ್ನು ಮಾದರಿಯಾಗಿ ರೂಪಿಸಲು ಹಾಗೂ ಮರೆನಾಡ್ ಕೊಡವ ಸಮಾಜ ವಿಶೇಷವಾಗಿ ರೂಪುಗೊಳ್ಳಲು ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮರೆನಾಡ್ ಕೊಡವ ಸಮಾಜದ ಅಧ್ಯಕ್ಷ ಅಣ್ಣಳಮಾಡ ಲಾಲ ಅಪ್ಪಣ್ಣ ಅವರು, ಕೊಡಗಿನ ಮತ್ತು ಕೇರಳ ಗಡಿಯಲ್ಲಿರುವ ಬಿರುನಾಣಿಯಲ್ಲಿ ಮುಂದಿನ ಪೀಳಿಗೆಗಳ ದೃಷ್ಟಿಕೋನದಲ್ಲಿ ಉನ್ನತ ಮಟ್ಟದ ಯೋಜನೆಯೊಂದಿಗೆ ಕಟ್ಟಡ ನಿರ್ಮಾಣ ಮಾಡಲಾಗುವುದು. ಈ ಹಿಂದೆ ಕೊಡವ ಸಮಾಜ ಎಂದರೆ ಕಲ್ಯಾಣ ಮಂಟಪ ಎಂಬ ಭಾವನೆ ಇತ್ತು. ಆದರೆ ಇಂದು ಕೊಡವ ಸಮಾಜವನ್ನು ನೋಡುವ ದೃಷ್ಟಿ ಬದಲಾಗಿದೆ. ಇದು ನಮ್ಮ ಸಾಂಸ್ಕೃತಿಕ ಕೇಂದ್ರವಾಗಿ ಅಭಿವೃದ್ಧಿಯಾಗುತ್ತಿದೆ. ಇಂದು ಪೊನ್ನಂಪೇಟೆ, ಬೆಂಗಳೂರು ಮತ್ತು ಬಾಳುಗೋಡು ಕೊಡವ ಸಮಾಜದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಒಂದು ಹಬ್ಬದಂತೆ ಆಚರಣೆಯಾಗುತ್ತಿದೆ. ಕೊಡವ ಸಂಸ್ಕೃತಿಗೆ ಅಲ್ಲಿ ಉತ್ತೇಜನ ದೊರೆಯುತ್ತಿದೆ. ಕೊಡವ ಸಾಂಸ್ಕೃತಿಕ ಕೇಂದ್ರವಾಗಿ ಕೊಡವ ಸಮಾಜಗಳು ಅಭಿವೃದ್ಧಿ ಪಡಿಸಬೇಕಾಗಿದೆ ಎಂದರು. ಸುಮಾರು ೩ ಕೋಟಿ ಅಂದಾಜು ವೆಚ್ಚದಲ್ಲಿ ಮರೆನಾಡ್ ಕೊಡವ ಸಮಾಜವನ್ನು ಮುತುವರ್ಜಿ ಇಟ್ಟು ಅಭಿವೃದ್ಧಿಪಡಿಸಲು ಎಲ್ಲರ ಸಹಕಾರ ಬೇಕಾಗಿದೆ ಎಂದರು.

ಬಿರುನಾಣಿ ಗ್ರಾ. ಪಂ. ವ್ಯಾಪ್ತಿಯ ೫ ಗ್ರಾಮಗಳು ಪಟ್ಟಣದಿಂದ ದೂರ ಇರುವ ಹಿನ್ನಲೆ ಎಲ್ಲಾ ಋತುವಿನಲ್ಲಿ ಕ್ರೀಡಾ ಸೌಕರ್ಯಕ್ಕೆ ಒಳಾಂಗಣ ಕ್ರೀಡಾಂಗಣ ಮತ್ತು ಜಿಮ್‌ಗಾಗಿ ಕುಪ್ಪಣಮಾಡ ಪ್ರೀತಮ್ ಅವರ ಮನವಿಯಂತೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ರೂ.೩೦ ಲಕ್ಷ ಅನುದಾನ ಒದಗಿಸಿದ್ದು, ಇದರ ಮೊದಲ ಕಂತು ರೂ.೧೫ ಲಕ್ಷ ಬಿಡುಗಡೆಯಾಗಿದೆ, ಸದ್ಯದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದು ಲಾಲ ಅಪ್ಪಣ್ಣ ಹೇಳಿದರು.

ವೇದಿಕೆಯಲ್ಲಿ ಮರೆನಾಡ್ ಕೊಡವ ಸಮಾಜದ ಉಪಾಧ್ಯಕ್ಷ ಕಾಯಪಂಡ ಸುನಿಲ್, ಕಾರ್ಯಾಧ್ಯಕ್ಷ ಬೊಳ್ಳೇರ ಅಪ್ಪುಟ ಪೊನ್ನಪ್ಪ, ಕಾರ್ಯದರ್ಶಿ ಕಳಕಂಡ ಜೀತು ಕುಶಾಲಪ್ಪ, ಜಂಟಿ ಕಾರ್ಯದರ್ಶಿ ಬುಟ್ಟಿಯಂಡ ಸುನಿತ ಗಪ್ಪಣ್ಣ, ಖಜಾಂಚಿ ಬೊಟ್ಟಂಗಡ ರವೀಂದ್ರ ವಿಶು ಇದ್ದರು.

ಸಭೆಯಲ್ಲಿ ನಿರ್ದೇಶಕರುಗಳಾದ ಚೋನಿರ ಮಧು, ಕಾಯಕಂಡ ಸತು, ಬಲ್ಯಮೀದೇರಿರ ರಾಜ, ಕುಪ್ಪಣಮಾಡ ಪ್ರೀತಮ್, ಕಾಳಿಮಾಡ ರಸಿಕ, ಗುಡ್ಡಮಾಡ ಸುಧೀರ್, ಕರ್ತಮಾಡ ಸುನಂದ, ಕರ್ತಮಾಡ ಗಿರೀಶ್, ಚಂಗಣಮಾಡ ಬೋಪಣ್ಣ ಹಾಗೂ ಜಾಗದಾನಿ ಕಾಯಪಂಡ ಪೆಮ್ಮಯ್ಯ, ಸಮಾಜದ ಮಾಜಿ ಅಧ್ಯಕ್ಷ ಕುಪ್ಪುಡೀರ ಪೊನ್ನು ಮುತ್ತಪ್ಪ, ಮಾಜಿ ಕಾರ್ಯದರ್ಶಿ ಐಯ್ಯಮಾಡ ಮುತ್ತಣ್ಣ ಸೇರಿದಂತೆ ಪ್ರಮುಖರು ಹಾಜರಿದ್ದರು.

ಶೂಟಿಂಗ್ ಸ್ಪರ್ಧೆ :ಸ್ಪರ್ಧೆಯಲ್ಲಿ ೧೨ ಬೋರ್ ವಿಭಾಗದಲ್ಲಿ ಪ್ರಥಮ -ನೆಲ್ಲೀರ ಧನು, ದ್ವಿತೀಯ- ಅಣ್ಣೀರ ಪೊನ್ನಣ್ಣ, ತೃತೀಯ- ಕಾಳಿಮಾಡ ಸಚಿನ್ ಹಾಗೂ ಪಾಯಿಂಟ್ ೨೨ ವಿಭಾಗದಲ್ಲಿ ಪ್ರಥಮ- ಕರ್ತಮಾಡ ಸುಜು, ದ್ವಿತೀಯ -ಚೋನಿರ ಸೋಮಣ್ಣ, ತೃತೀಯ- ಕಾಳಿಮಾಡ ಶರತ್ ಅವರು ಪಡೆದುಕೊಂಡರು.