ವೀರಾಜಪೇಟೆ, ಸೆ, ೧೧: ಕೊಡಗು ಜಿಲ್ಲಾ ಖಾಸಗಿ ಬಸ್ ಕಾರ್ಮಿಕರ ಸಂಘ-ವೀರಾಜಪೇಟೆ, ಇದರ ಮಹಾಸಭೆ ಇತ್ತೀಚೆಗೆ ಸಂಘದ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ೨೦೨೬-೨೭ನೇ ಸಾಲಿನ ನೂತನ ಪದಾಧಿಕಾರಿಗಳು ಆಯ್ಕೆಗೊಂಡರು.

ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುರೇಶ್ ದೇವಯ್ಯ ಅವರು, ಖಾಸಗಿ ಬಸ್ ಕಾರ್ಮಿಕರು ಹಲವಾರು ಜ್ವಲಂತ ಸಮಸ್ಯೆಗಳನ್ನು ಎದುರಿಸುತಿದ್ದಾರೆ. ಪ್ರಸ್ತುತ ದಿನಬಳಕೆಯ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ದಿನದೂಡುವುದು ಕಷ್ಟ ಸಾಧ್ಯವಾಗಿದೆ ಎಂದರು. ಸಂಘದ ಸದಸ್ಯರಿಗೆ ಆರೋಗ್ಯ ಸಮಸ್ಯೆ ಎದುರಾದಾಗ ಸಂಘವು ನೆರವಿನ ಹಸ್ತ ನೀಡಿದೆ. ಅಲ್ಲದೆ ಸಮಾಜಮುಖಿ ಕಾರ್ಯಕ್ರಮಗಳನ್ನು ಕೂಡ ನಡೆಸಲಾಗಿದೆ ಎಂದರು.

ಈ ಸಂದರ್ಭ ನೂತನ ಆಡಳಿತ ಮಂಡಳಿ ರಚನೆಯಾಗಿದ್ದು ಅಧ್ಯಕ್ಷರಾಗಿ ಜ್ಯೂಡಿ ವಾಜ್, ಪ್ರಧಾನ ಕಾರ್ಯದರ್ಶಿಯಾಗಿ ಎನ್.ಪಿ. ದಿನೇಶ್ ನಾಯರ್, ಗೌ. ಅಧ್ಯಕ್ಷರಾಗಿ ಕೆ.ಬಿ. ಸುರೇಶ್ ದೇವಯ್ಯ, ಉಪಾದ್ಯಕ್ಷರಾಗಿ ಅಲ್ಲಂಡ ಕಸ್ತೂರಿ ಚೆಂಗಪ್ಪ, ಖಜಾಂಚಿಯಾಗಿ ಬಿ.ಬಿ. ವಿನಂತ್ ಆಯ್ಕೆಗೊಂಡರು. ಸಂಘದ ನಿರ್ದೇಶಕರುಗಳಾಗಿ ಅಜೆಯ್ ಕೆ.ಇ, ಎಂ.ಕೆ ಮಹೇಶ್, ಕೆ.ಎನ್. ಜೀವನ್, ಕುಪ್ಪಂಡ ಪ್ರಸಾದ್ ದೇವಯ್ಯ, ವಿ.ಎ. ದಿನೇಶ್, ಎಂ.ಸಿ, ಸತೀಶ್ ರಂಜು ಎಸ್, ಪಿ.ಎಂ. ಜಕರಿಯಾ ಮತ್ತು ವಿನೋದ್ ಕುಮಾರ್ ಆಯ್ಕೆಗೊಂಡರು. ಸದಸ್ಯರು ಹಾಜರಿದ್ದರು.